ಹೊಸದಿಲ್ಲಿ: ದೇಶದ ಪ್ರಭಾವಿ ನಾಯಕರ (influential leaders) ಪಟ್ಟಿಯೊಂದನ್ನು ಅಗ್ರಗಣ್ಯ ದೈನಿಕ ಇಂಡಿಯನ್ ಎಕ್ಸ್‌ಪ್ರೆಸ್ (Indian Express) ಬಿಡುಗಡೆ ಮಾಡಿದ್ದು, ಈ ಪಟ್ಟಿಯ ಮೊದಲ ಸ್ಥಾನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅಲಂಕರಿಸಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಸಿಜೆಐ ಚಂದ್ರಚೂಡ್ (CJI DY Chandrachud) ಅವರೂ ಸ್ಥಾನ ಪಡೆದಿದ್ದಾರೆ.
ಸಮೀಕ್ಷೆಯ ಆಧಾರದಲ್ಲಿ ಜನಪ್ರಿಯತೆಯನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಧಾನಿ ಮೋದಿ ಸತತವಾಗಿ ನಂಬರ್ 1 ಸ್ಥಾನ ಉಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ 4ನೇ ಸ್ಥಾನದಲ್ಲಿದ್ದಾರೆ. ಅಮಿತ್ ಶಾ (Amit Shah) 2ನೇ ಸ್ಥಾನ ಅಲಂಕರಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi) ಅವರಿಗೆ 16 ಸ್ಥಾನ ದಕ್ಕಿದೆ.
ದಕ್ಷಿಣ ಭಾರತದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಸಿದ್ದರಾಮಯ್ಯ (Siddaramaiah) ಅಗ್ರಸ್ಥಾನದಲ್ಲಿದ್ದಾರೆ. ಅವರು 22ನೇ ಸ್ಥಾನದಲ್ಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (MK Stalin) ಅವರಿಗಿಂತ 2 ಸ್ಥಾನ ಕೆಳಗಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagawath) 3ನೇ ಸ್ಥಾನದಲ್ಲಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) 5ನೇ ಸ್ಥಾನ ಪಡೆದಿದ್ದಾರೆ. ಕನ್ನಡಿಗರಾದ ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ದತ್ತಾತ್ತೇಯ ಹೊಸಬಾಳೆ (Dattatreya Hosabale) 34ನೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) 36 ಸ್ಥಾನಗಳಲ್ಲಿದ್ದಾರೆ.
ಭಾರತದ ಪ್ರಭಾವಿ ವ್ಯಕ್ತಿಗಳಲ್ಲಿ 40 ಮಂದಿy ಪಟ್ಟಿ ಹೀಗಿದೆ:
1) ನರೇಂದ್ರ ಮೋದಿ, ಪ್ರಧಾನಮಂತ್ರಿ
2) ಅಮಿತ್ ಶಾ, ಗೃಹ ಸಚಿವರು
3) ಮೋಹನ್ ಭಾಗವತ್, ಆರ್‌ಎಸ್‌ಎಸ್ ಮುಖ್ಯಸ್ಥರು
4) ಡಿ.ವೈ ಚಂದ್ರಚೂಡ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
5) ಎಸ್ ಜೈಶಂಕರ್, ವಿದೇಶಾಂಗ ಸಚಿವ
6) ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
7) ರಾಜನಾಥ್ ಸಿಂಗ್, ರಕ್ಷಣಾ ಮಂತ್ರಿ
8) ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
9) ಜೆ.ಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
10) ಗೌತಮ್ ಅದಾನಿ, ಅದಾನಿ ಗ್ರೂಪ್ ಚೇರ್ಮೆನ್
11) ಮುಖೇಶ್ ಅಂಬಾನಿ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, RIL
12) ಪಿಯೂಷ್ ಗೋಯಲ್, ವಾಣಿಜ್ಯ ಸಚಿವ ಮತ್ತು ಸಭಾನಾಯಕ, ರಾಜ್ಯಸಭೆ
13) ಅಶ್ವಿನಿ ವೈಷ್ಣವ್, ರೈಲ್ವೆ, ಟೆಲಿಕಾಂ ಮತ್ತು ಐಟಿ ಸಚಿವ
14) ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಸಿಎಂ
15) ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ
16) ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ
17) ಅಜಿತ್ ದೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ
18) ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ ಮತ್ತು ಎಎಪಿ ಮುಖ್ಯಸ್ಥ
19) ಶಕ್ತಿಕಾಂತ ದಾಸ್, ಆರ್‌ಬಿಐ ಗವರ್ನರ್
20) ಹರ್ದೀಪ್ ಸಿಂಗ್ ಪುರಿ, ವಸತಿ ಮತ್ತು ನಗರ ವ್ಯವಹಾರ ಸಚಿವ
21) ಸಂಜೀವ್ ಖನ್ನಾ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು
22) ಸಿದ್ದರಾಮಯ್ಯ, ಕರ್ನಾಟಕ ಸಿಎಂ
23) ಮನ್ಸುಖ್ ಮಾಂಡವಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
24) ನಿತೀಶ್ ಕುಮಾರ್, ಬಿಹಾರ ಸಿಎಂ ಮತ್ತು ಜೆಡಿಯು ಮುಖ್ಯಸ್ಥ
25) ಎಂ.ಕೆ ಸ್ಟಾಲಿನ್, ತಮಿಳುನಾಡು ಸಿಎಂ
26) ನೀತಾ ಅಂಬಾನಿ, ಅಧ್ಯಕ್ಷೆ ಮತ್ತು ಸಂಸ್ಥಾಪಕರು, ರಿಲಯನ್ಸ್ ಫೌಂಡೇಶನ್
27) ಶಾರುಖ್ ಖಾನ್, ನಟ
28) ನಟರಾಜನ್ ಚಂದ್ರಶೇಖರನ್, ಅಧ್ಯಕ್ಷರು, ಟಾಟಾ ಗ್ರೂಪ್
29) ಸೋನಿಯಾ ಗಾಂಧಿ, ಮಾಜಿ ಕಾಂಗ್ರೆಸ್ ಅಧ್ಯಕ್ಷೆ
30) ರಾಹುಲ್ ನವೀನ್, ಹಂಗಾಮಿ ನಿರ್ದೇಶಕ, ಜಾರಿ ನಿರ್ದೇಶನಾಲಯ
31) ಭೂಪೇಂದರ್ ಯಾದವ್ ಪರಿಸರ, ಅರಣ್ಯ ಸಚಿವ
32) ಅನುರಾಗ್ ಠಾಕೂರ್, ಮಾಹಿತಿ ಮತ್ತು ಪ್ರಸಾರ ಸಚಿವ
33) ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವ
34) ದತ್ತಾತ್ರೇಯ ಹೊಸಬಾಳೆ, ಪ್ರಧಾನ ಕಾರ್ಯದರ್ಶಿ, ಆರ್‌ಎಸ್‌ಎಸ್
35) ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ
36) ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
37) ಅಜೀಂ ಪ್ರೇಮ್‌ಜಿ, ವಿಪ್ರೋ ಸಂಸ್ಥಾಪಕರು
38) ವಿರಾಟ್ ಕೊಹ್ಲಿ, ಭಾರತದ ಬ್ಯಾಟ್ಸ್‌ಮನ್
39) ಅನುಮುಲಾ ರೇವಂತ್ ರೆಡ್ಡಿ, ತೆಲಂಗಾಣ ಸಿಎಂ
40) ವಿನಯ್ ಕುಮಾರ್ ಸಕ್ಸೇನಾ, ದೆಹಲಿ ಎಲ್-ಜಿ
ಇದನ್ನೂ ಓದಿ: ಕಾಶ್ಮೀರ ಪ್ರವಾಸ ಬಳಿಕ ಪ್ರಧಾನಿಯ ನೆನೆದ ಸಚಿನ್; ವಿಕಸಿತ ಭಾರತ ಎಂದ ಮೋದಿ