Site icon Vistara News

PM Narendra Modi: ಯುಎಇ ಬಳಿಕ ಕತಾರ್‌ಗೆ ಪ್ರಧಾನಿ ಮೋದಿ ಭೇಟಿ, ದ್ವಿಪಕ್ಷೀಯ ಸಂಬಂಧ ಚರ್ಚೆ

PM

Conspiracy against Prime Minister is treason: Says Delhi High Court

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಭೇಟಿಯನ್ನು ಮುಗಿಸಿದ ನಂತರ ಬುಧವಾರ ಕತಾರ್‌ನ (Qatar) ದೋಹಾಗೆ(Doha) ಪ್ರಯಾಣಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕತಾರ್‌ ಭೇಟಿ ವೇಳೆ ಪ್ರಧಾನಿ ಮೋದಿ ಅವರು, ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ಕತಾರ್ ಭೇಟಿಯು 2016ರ ನಂತರದ ಮೊದಲ ಭೇಟಿಯಾಗಿದೆ.

ಭಾರತ ಮತ್ತು ಕತಾರ್ ನಡುವೆ ಸ್ಥಿರವಾಗಿ ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧವು ರಾಜಕೀಯ ಸಂಬಂಧಗಳು, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು, ನಮ್ಮ ಬಲವಾದ ಶಕ್ತಿ ಪಾಲುದಾರಿಕೆ ಮತ್ತು ಸಂಸ್ಕೃತಿ, ಶಿಕ್ಷಣ ಮತ್ತು ಭದ್ರತೆ ಕ್ಷೇತ್ರದಲ್ಲಿ ಸಂಬಂಧಗಳು ಸೇರಿದಂತೆ ಸಮಗ್ರ ವ್ಯಾಪ್ತಿಯನ್ನು ಒಳಗೊಂಡಿದೆ. ಭಾರತದಲ್ಲಿ ಪ್ರಮುಖ ಹೂಡಿಕೆದಾರರಾಗಿದ್ದಾರೆ ಮತ್ತು ಉಭಯ ದೇಶಗಳು ಸುಮಾರು $20 ಬಿಲಿಯನ್ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿವೆ ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.

ಎಂಟು ಭಾರತೀಯ ನೌಕಾಪಡೆಯ ಹಿರಿಯರನ್ನು ಕತಾರ್ ಸರ್ಕಾರ ಬಿಡುಗಡೆ ಮಾಡುವುದರೊಂದಿಗೆ, ಪ್ರಧಾನಿ ಅವರ ಕತಾರ್ ಭೇಟಿಯು ಕೂಡ ಹೊಂದಾಣಿಕೆಯಾಗುತ್ತಿದೆ. ಈ ಹಿಂದೆ ಕತಾರಿ ನ್ಯಾಯಾಲಯವು 2023 ರಲ್ಲಿ ಬೇಹುಗಾರಿಕೆಯ ಆರೋಪದ ಮೇಲೆ ಭಾರತದ 8 ಜನರಿಗೆ ಮರಣದಂಡನೆ ವಿಧಿಸಿತ್ತು. ಶಿಕ್ಷೆಗಳಾಗಿದ್ದ ಭಾರತೀಯರು ಅವರು ಅಲ್ ದಹ್ರಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಭಾರತೀಯರನ್ನು ಬಿಡುಗಡೆ ಮಾಡುವ ಕತಾರ್ ಸರ್ಕಾರ ಮತ್ತು ಎಮಿರ್ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ. ಆ ಪೈಕಿ ಏಳು ಭಾರತೀಯ ಪ್ರಜೆಗಳು ಮರಳಿ ಬಂದಿರುವುದು ನಮಗೆ ಸಂತೋಷ ತಂದಿದೆ. ಎಂಟನೇ ಭಾರತೀಯನನ್ನು ಸಹ ಬಿಡುಗಡೆ ಮಾಡಲಾಗಿದೆ ಮತ್ತು ಭಾರತಕ್ಕೆ ಎಷ್ಟು ಬೇಗನೆ ಹಿಂದಿರುಗುವುದು ಸಾಧ್ಯ ಎಂದು ನೋಡಲು ನಾವು ಕತಾರ್ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ಅವರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಬೆಳವಣಿಗೆಗಳನ್ನು ಪ್ರಧಾನಿ ಮೋದಿ ಅವರು ಖುದ್ದು ನಿರ್ವಹಣೆ ಮಾಡಿದ್ದಾರೆಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ಮೋದಿ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಕತಾರ್‌ನಿಂದ ಬಿಡುಗಡೆಗೊಂಡ ನೌಕಾಯೋಧರ ಪ್ರಶಂಸೆ

Exit mobile version