Site icon Vistara News

ಇನ್ನೂ 3 ತಿಂಗಳು ಬಡವರಿಗೆ ಉಚಿತ ಆಹಾರ ಧಾನ್ಯ | PMGKAY ವಿಸ್ತರಿಸಿದ ಕ್ಯಾಬಿನೆಟ್‌

PMGKAY extension

ನವ ದೆಹಲಿ: ಪ್ರಧಾನ ಮಂತ್ರಿ ಗ್ರಾಮೀಣ ಕಲ್ಯಾಣ ಅನ್ನ ಯೋಜನೆಯನ್ನು (PMGKAY) ಕೇಂದ್ರ ಸರ್ಕಾರ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

PMGKAY ಯೋಜನೆಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಸೆಪ್ಟೆಂಬರ್ 30ರವರೆಗೆ ನಿಗದಿಯಾಗಿದ್ದ ಅದರ ಅವಧಿ ಮುಗಿಯುವ ಎರಡು ದಿನಗಳ ಮುಂಚಿತವಾಗಿ ವಿಸ್ತರಣೆ ನಡೆದಿದೆ. ಈ ಯೋಜನೆಯನ್ನು ಮೊದಲು ಈ ವರ್ಷದ ಮಾರ್ಚ್‌ನಲ್ಲಿ ಸೆಪ್ಟೆಂಬರ್ 30ರವರೆಗೆ, ಆರು ತಿಂಗಳ ಕಾಲ ವಿಸ್ತರಿಸಲಾಯಿತು. ಇದು ಎರಡನೇ ವಿಸ್ತರಣೆಯಾಗಿದೆ.

ಮೊದಲ ಬಾರಿಗೆ ಕೋವಿಡ್-19 ಲಾಕ್‌ಡೌನ್ ಅನ್ನು ದೇಶಾದ್ಯಂತ ಜಾರಿಗೊಳಿಸಿದಾಗ (2020ರ ಮಾರ್ಚ್) ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಘೋಷಿಸಲಾಗಿತ್ತು. ಪ್ರಥಮ ಘೋಷಣೆಯಂತೆ ಈ ಯೋಜನೆ 2022ರ ಮಾರ್ಚ್ 31ರಂದು ಕೊನೆಗೊಳ್ಳಬೇಕಿತ್ತು.

PMGKAY ಅಡಿಯಲ್ಲಿ ಸರ್ಕಾರ ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸುತ್ತದೆ. ಇದರಲ್ಲಿ ನೇರ ಲಾಭ ವರ್ಗಾವಣೆಯ ಅಡಿಯಲ್ಲಿರುವವರೂ ಸೇರಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಇರುವ 80 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ.

ಇದನ್ನೂ ಓದಿ | ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ 4% ಏರಿಕೆ, ಮೋದಿ ಸಂಪುಟ ನಿರ್ಣಯ

Exit mobile version