Site icon Vistara News

NCERT Textbooks: ಆಪರೇಷನ್‌ ಪಠ್ಯಪುಸ್ತಕ; ಖಲಿಸ್ತಾನ, ಅಸಮಾನತೆ, ಪ್ರಜಾಪ್ರಭುತ್ವ ಚಾಪ್ಟರ್‌ ಕೈಬಿಟ್ಟ ಎನ್‌ಸಿಇಆರ್‌ಟಿ

NCERT Makes Changes In Textbooks Including Democracy

Poverty, Inequality, Democracy Dropped From NCERT Textbooks For Class 10

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (NCERT Textbooks) ಪಠ್ಯಪುಸ್ತಕಗಳ ಹಲವು ಚಾಪ್ಟರ್‌ಗಳನ್ನು ಮತ್ತೆ ಕೈಬಿಟ್ಟಿದೆ. ಆಹಾರ, ಬಡತನ, ಅಸಮಾನತೆ, ಆವರ್ತಕ ಕೋಷ್ಟಕ ಸೇರಿ ಹಲವು ಅಂಶಗಳನ್ನು ಪಠ್ಯದಿಂದ ಕೈಬಿಟ್ಟಿದೆ. ಅದರಲ್ಲೂ, ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಚಾಪ್ಟರ್‌ಗೆ ಕತ್ತರಿ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದರೆ, ಯಾವ ತರಗತಿಯ ಪಠ್ಯದಿಂದ ಯಾವ ಚಾಪ್ಟರ್‌ಅನ್ನು ತೆಗೆದುಹಾಕಲಾಗಿದೆ ಎಂಬ ಮಾಹಿತಿ ಹೀಗಿದೆ.

ಯಾವ ಕ್ಲಾಸ್‌ನ ಯಾವ ಚಾಪ್ಟರ್‌ಗೆ ಕೊಕ್?

  1. ಆರನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಆಹಾರ, ಆಹಾರ ಧಾನ್ಯ ಬೆಳೆಯುವುದು, ಪ್ರಜಾಪ್ರಭುತ್ವ, ಹವಮಾನ ಬದಲಾವಣೆ, ವನ್ಯಜೀವಿಗಳಿಗೆ ಸಂಬಂಧಿಸಿದ ಅಧ್ಯಾಯಕ್ಕೆ ಕೊಕ್‌
  2. ಏಳನೇ ತರಗತಿ ಪಠ್ಯದಿಂದ ಸಮಾನತೆ, ಅಸಮಾನತೆ ನಿರ್ಮೂಲನೆಗಾಗಿ ನಡೆಸಿದ ಹೋರಾಟ, ಮಹಿಳೆಯರ ಆಂದೋಲನಗಳ ವಿಷಯವನ್ನು ಕೈಬಿಡಲಾಗಿದೆ.
  3. 10ನೇ ತರಗತಿ ಪಠ್ಯದಿಂದ ಪ್ರಜಾಪ್ರಭುತ್ವ, ಆವರ್ತಕ ಕೋಷ್ಟಕ, ಪ್ರಜಾಪ್ರಭುತ್ವದ ಸವಾಲುಗಳು, ರಾಜಕೀಯ ಪಕ್ಷಗಳು ಅಧ್ಯಾಯಗಳಿಗೆ ಗೇಟ್‌ಪಾಸ್‌
  4. 11ನೇ ತರಗತಿ ಪಠ್ಯದಿಂದ ಬಡತನ, ಶಾಂತಿ, ಅಭಿವೃದ್ಧಿ, ರಾಜ್ಯಗಳ ವಿಷಯಗಳ ಕುರಿತ ಅಧ್ಯಾಯವನ್ನು ತೆಗೆದುಹಾಕಲಾಗಿದೆ.
  5. 12 ನೇ ತರಗತಿ ವಿದ್ಯಾರ್ಥಿಗಳಿಗೆ ಗುಜರಾತ್‌ ಗಲಭೆ, ವಿಭಜನೆ ಅರ್ಥೈಸಿಕೊಳ್ಳುವಿಕೆ, ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಬೇಡಿಕೆ, ಶೀತಲ ಸಮರಕ್ಕೆ ಸಂಬಂಧಿಸಿದ ಚಾಪ್ಟರ್‌ಗಳಿಗೆ ಕೊಕ್‌ ನೀಡಲಾಗಿದೆ.

ಎನ್‌ಸಿಇಆರ್‌ಟಿಯು ಈಗಾಗಲೇ ಗೋಡ್ಸೆ ಸೇರಿ ಹಲವು ವಿಷಯಗಳನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ, ಗಾಂಧೀಜಿ ಅವರ ಕುರಿತ ಅಂಶವನ್ನು ತೆಗೆದುಹಾಕಲಾಗಿರುವುದು ವಿವಾದಕ್ಕೆ ಗುರಿಯಾಗಿತ್ತು. ‘ಹಿಂದುಗಳು ಹಾಗೂ ಮುಸ್ಲಿಮರ ನಡುವಿನ ಒಗ್ಗಟ್ಟು ಮೂಡಿಸುವ ದಿಸೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಯತ್ನಕ್ಕೆ ಹಿಂದು ಮೂಲಭೂತವಾದಿಗಳ ವಿರೋಧ’, ‘ಗಾಂಧೀಜಿಯವರ ಹತ್ಯೆ ಬಳಿಕ ಆರ್‌ಎಸ್‌ಎಸ್‌ ನಿಷೇಧ’, ಹಾಗೂ ನಾಥುರಾಮ್‌ ಗೋಡ್ಸೆಗೆ ಸಂಬಂಧಿಸಿದ ಅಧ್ಯಾಯಗಳನ್ನು 12ನೇ ತರಗತಿಯ ರಾಜಕೀಯ ಹಾಗೂ ಇತಿಹಾಸದ ಪುಸ್ತಕಗಳಿಂದ ತೆಗೆದುಹಾಕಲಾಗಿದೆ. 2023-24ನೇ ಸಾಲಿನಿಂದ ಹೊಸ ಪುಸ್ತಕಗಳಲ್ಲಿ ಈ ಅಧ್ಯಾಯಗಳು ಇರುವುದಿಲ್ಲ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಮತ್ತೆ ಹಲವು ಅಧ್ಯಾಯಗಳಿಗೆ ಎನ್‌ಸಿಇಆರ್‌ಟಿ ಕೊಕ್‌ ನೀಡಿದೆ.

ಇದನ್ನೂ ಓದಿ: NCERT Textbooks: ಪಠ್ಯದಿಂದ ಗಾಂಧೀಜಿ, ಗೋಡ್ಸೆ, ಆರೆಸ್ಸೆಸ್‌ ವಿಷಯ ಕೈಬಿಟ್ಟ ಎನ್‌ಸಿಇಆರ್‌ಟಿ, ಭಾರಿ ವಿರೋಧ

Exit mobile version