NCERT Textbooks: ಆಪರೇಷನ್‌ ಪಠ್ಯಪುಸ್ತಕ; ಖಲಿಸ್ತಾನ, ಅಸಮಾನತೆ, ಪ್ರಜಾಪ್ರಭುತ್ವ ಚಾಪ್ಟರ್‌ ಕೈಬಿಟ್ಟ ಎನ್‌ಸಿಇಆರ್‌ಟಿ - Vistara News

ದೇಶ

NCERT Textbooks: ಆಪರೇಷನ್‌ ಪಠ್ಯಪುಸ್ತಕ; ಖಲಿಸ್ತಾನ, ಅಸಮಾನತೆ, ಪ್ರಜಾಪ್ರಭುತ್ವ ಚಾಪ್ಟರ್‌ ಕೈಬಿಟ್ಟ ಎನ್‌ಸಿಇಆರ್‌ಟಿ

NCERT Textbooks: ಕೆಲ ದಿನಗಳ ಹಿಂದಷ್ಟೇ ಮಹಾತ್ಮ ಗಾಂಧೀಜಿ, ಮೊಘಲರಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಎನ್‌ಸಿಇಆರ್‌ಟಿ ತೆಗೆದುಹಾಕಿತ್ತು. ಈಗ ಮತ್ತೆ ಹಲವು ವಿಷಯಗಳನ್ನು ತೆಗೆದುಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

NCERT Makes Changes In Textbooks Including Democracy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (NCERT Textbooks) ಪಠ್ಯಪುಸ್ತಕಗಳ ಹಲವು ಚಾಪ್ಟರ್‌ಗಳನ್ನು ಮತ್ತೆ ಕೈಬಿಟ್ಟಿದೆ. ಆಹಾರ, ಬಡತನ, ಅಸಮಾನತೆ, ಆವರ್ತಕ ಕೋಷ್ಟಕ ಸೇರಿ ಹಲವು ಅಂಶಗಳನ್ನು ಪಠ್ಯದಿಂದ ಕೈಬಿಟ್ಟಿದೆ. ಅದರಲ್ಲೂ, ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಚಾಪ್ಟರ್‌ಗೆ ಕತ್ತರಿ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದರೆ, ಯಾವ ತರಗತಿಯ ಪಠ್ಯದಿಂದ ಯಾವ ಚಾಪ್ಟರ್‌ಅನ್ನು ತೆಗೆದುಹಾಕಲಾಗಿದೆ ಎಂಬ ಮಾಹಿತಿ ಹೀಗಿದೆ.

ಯಾವ ಕ್ಲಾಸ್‌ನ ಯಾವ ಚಾಪ್ಟರ್‌ಗೆ ಕೊಕ್?

  1. ಆರನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಆಹಾರ, ಆಹಾರ ಧಾನ್ಯ ಬೆಳೆಯುವುದು, ಪ್ರಜಾಪ್ರಭುತ್ವ, ಹವಮಾನ ಬದಲಾವಣೆ, ವನ್ಯಜೀವಿಗಳಿಗೆ ಸಂಬಂಧಿಸಿದ ಅಧ್ಯಾಯಕ್ಕೆ ಕೊಕ್‌
  2. ಏಳನೇ ತರಗತಿ ಪಠ್ಯದಿಂದ ಸಮಾನತೆ, ಅಸಮಾನತೆ ನಿರ್ಮೂಲನೆಗಾಗಿ ನಡೆಸಿದ ಹೋರಾಟ, ಮಹಿಳೆಯರ ಆಂದೋಲನಗಳ ವಿಷಯವನ್ನು ಕೈಬಿಡಲಾಗಿದೆ.
  3. 10ನೇ ತರಗತಿ ಪಠ್ಯದಿಂದ ಪ್ರಜಾಪ್ರಭುತ್ವ, ಆವರ್ತಕ ಕೋಷ್ಟಕ, ಪ್ರಜಾಪ್ರಭುತ್ವದ ಸವಾಲುಗಳು, ರಾಜಕೀಯ ಪಕ್ಷಗಳು ಅಧ್ಯಾಯಗಳಿಗೆ ಗೇಟ್‌ಪಾಸ್‌
  4. 11ನೇ ತರಗತಿ ಪಠ್ಯದಿಂದ ಬಡತನ, ಶಾಂತಿ, ಅಭಿವೃದ್ಧಿ, ರಾಜ್ಯಗಳ ವಿಷಯಗಳ ಕುರಿತ ಅಧ್ಯಾಯವನ್ನು ತೆಗೆದುಹಾಕಲಾಗಿದೆ.
  5. 12 ನೇ ತರಗತಿ ವಿದ್ಯಾರ್ಥಿಗಳಿಗೆ ಗುಜರಾತ್‌ ಗಲಭೆ, ವಿಭಜನೆ ಅರ್ಥೈಸಿಕೊಳ್ಳುವಿಕೆ, ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಬೇಡಿಕೆ, ಶೀತಲ ಸಮರಕ್ಕೆ ಸಂಬಂಧಿಸಿದ ಚಾಪ್ಟರ್‌ಗಳಿಗೆ ಕೊಕ್‌ ನೀಡಲಾಗಿದೆ.

ಎನ್‌ಸಿಇಆರ್‌ಟಿಯು ಈಗಾಗಲೇ ಗೋಡ್ಸೆ ಸೇರಿ ಹಲವು ವಿಷಯಗಳನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ, ಗಾಂಧೀಜಿ ಅವರ ಕುರಿತ ಅಂಶವನ್ನು ತೆಗೆದುಹಾಕಲಾಗಿರುವುದು ವಿವಾದಕ್ಕೆ ಗುರಿಯಾಗಿತ್ತು. ‘ಹಿಂದುಗಳು ಹಾಗೂ ಮುಸ್ಲಿಮರ ನಡುವಿನ ಒಗ್ಗಟ್ಟು ಮೂಡಿಸುವ ದಿಸೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಯತ್ನಕ್ಕೆ ಹಿಂದು ಮೂಲಭೂತವಾದಿಗಳ ವಿರೋಧ’, ‘ಗಾಂಧೀಜಿಯವರ ಹತ್ಯೆ ಬಳಿಕ ಆರ್‌ಎಸ್‌ಎಸ್‌ ನಿಷೇಧ’, ಹಾಗೂ ನಾಥುರಾಮ್‌ ಗೋಡ್ಸೆಗೆ ಸಂಬಂಧಿಸಿದ ಅಧ್ಯಾಯಗಳನ್ನು 12ನೇ ತರಗತಿಯ ರಾಜಕೀಯ ಹಾಗೂ ಇತಿಹಾಸದ ಪುಸ್ತಕಗಳಿಂದ ತೆಗೆದುಹಾಕಲಾಗಿದೆ. 2023-24ನೇ ಸಾಲಿನಿಂದ ಹೊಸ ಪುಸ್ತಕಗಳಲ್ಲಿ ಈ ಅಧ್ಯಾಯಗಳು ಇರುವುದಿಲ್ಲ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಮತ್ತೆ ಹಲವು ಅಧ್ಯಾಯಗಳಿಗೆ ಎನ್‌ಸಿಇಆರ್‌ಟಿ ಕೊಕ್‌ ನೀಡಿದೆ.

ಇದನ್ನೂ ಓದಿ: NCERT Textbooks: ಪಠ್ಯದಿಂದ ಗಾಂಧೀಜಿ, ಗೋಡ್ಸೆ, ಆರೆಸ್ಸೆಸ್‌ ವಿಷಯ ಕೈಬಿಟ್ಟ ಎನ್‌ಸಿಇಆರ್‌ಟಿ, ಭಾರಿ ವಿರೋಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

Swati Maliwal: ಸೋಮವಾರ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ದೆಹಲಿ ಮುಖ್ಯಮಂತ್ರಿಯ ಕಾರ್ಯದರ್ಶಿ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಈ ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

VISTARANEWS.COM


on

swati maliwal bibhav kumar
Koo

ಹೊಸದಿಲ್ಲಿ: ಆಮ್‌ ಆದ್ಮಿ ಪಕ್ಷದ (Aam Admi Party) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Rajya Sabha MP Swati Maliwal) ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ (Bibhav Kumar) ಅನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ದೆಹಲಿ ಮುಖ್ಯಮಂತ್ರಿಯ ಕಾರ್ಯದರ್ಶಿ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಈ ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಕೇಜ್ರಿವಾಲ್ ಅವರ ಮೌನವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ದಾಳಿಯ ಸಮಯದಲ್ಲಿ ಸ್ಪಷ್ಟವಾಗಿ ನಿಷ್ಕ್ರಿಯರಾಗಿದ್ದುದಕ್ಕಾಗಿ ಕೇಜ್ರಿವಾಲ್ ಅವರನ್ನು “ಮುಖ್ಯ ಅಪರಾಧಿ” ಎಂದು ಕರೆದಿದ್ದಾರೆ.

ಮಲಿವಾಲ್‌ ಅವರು ದೆಹಲಿ ಮುಖ್ಯಮಂತ್ರಿ ಮನೆಯಿಂದ ಹೊರಬರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸಿಎಂ ನಿವಾಸದಲ್ಲಿ ನಿಯೋಜಿಸಲಾದ ಸಿಬ್ಬಂದಿ ಮತ್ತು ಎಎಪಿ ರಾಜ್ಯಸಭಾ ಸಂಸದೆ ನಡುವೆ ವಾಗ್ವಾದ ನಡೆಯುವುದನ್ನು ಕಾಣಬಹುದು.

“ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ ಮತ್ತು ಸಹಾಯಕ್ಕಾಗಿ ಪದೇ ಪದೆ ಕಿರುಚುತ್ತಿದ್ದೆ. ನನ್ನನ್ನು ರಕ್ಷಿಸಿಕೊಳ್ಳಲೆಂದು ನಾನು ಅವನನ್ನು ನನ್ನ ಕಾಲುಗಳಿಂದ ದೂರ ತಳ್ಳಿದೆ. ಆ ಸಮಯದಲ್ಲಿ ಆತ ನನ್ನ ಮೇಲೆ ಎರಗಿ ಕ್ರೂರವಾಗಿ ಎಳೆದುಕೊಂಡು ಮತ್ತು ಉದ್ದೇಶಪೂರ್ವಕವಾಗಿ ನನ್ನ ಅಂಗಿಯನ್ನು ಮೇಲಕ್ಕೆ ಎಳೆದ” ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ. “ಬಿಭವ್ ಕುಮಾರ್ ಪಶ್ಚಾತ್ತಾಪ ಪಟ್ಟಿಲ್ಲ. ನನ್ನ ಎದೆ, ಹೊಟ್ಟೆ ಮತ್ತು ಸೊಂಟದ ಪ್ರದೇಶಕ್ಕೆ ತನ್ನ ಕಾಲುಗಳಿಂದ ಒದೆಯುವ ಮೂಲಕ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಸ್ವಾತಿ ದೂರಿದ್ದಾರೆ.

 ಸ್ವಾತಿ ಮಾಲಿವಾಲ್‌ ಆರೋಪ ಸುಳ್ಳು ಎಂದು ಆಪ್‌ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಸಿಎಂ ಕಚೇರಿಯಲ್ಲಿ ಗಲಾಟೆ ನಡೆದಿರುವ ಕುರಿತ ವಿಡಿಯೊವನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

“ಸ್ವಾತಿ ಮಾಲಿವಾಲ್‌ ಅವರು ನೀಡಿರುವ ಹೇಳಿಕೆಯು ಸಂಪೂರ್ಣವಾಗಿ ಸುಳ್ಳುಗಳಿಂದ ಕೂಡಿದೆ ಎಂಬುದು ಈ ವಿಡಿಯೊದಿಂದ ಬಯಲಾಗಿದೆ. ಸ್ವಾತಿ ಮಾಲಿವಾಲ್‌ ಅವರು ಹೇಳಿದ ಸುಳ್ಳುಗಳನ್ನು ದೇಶದ ಜನರ ಮುಂದಿಡುತ್ತಿದ್ದೇವೆ” ಎಂದು ಆಪ್‌ ನಾಯಕಿ, ಸಚಿವೆ ಆತಿಶಿ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮದೇ ಪಕ್ಷದ ನಾಯಕಿ ನೀಡಿರುವ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ. ಹಾಗೆಯೇ, ಅವರು ದೆಹಲಿ ಸಿಎಂ ಕಚೇರಿಯಲ್ಲಿ ನಡೆದ ಗಲಾಟೆ ಕುರಿತ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.

ವಿಡಿಯೊದಲ್ಲಿ ಏನಿದೆ?

ದೆಹಲಿ ಸಿಎಂ ಕಚೇರಿಗೆ ಭೇಟಿ ನೀಡಿದ ವೇಳೆ ಸ್ವಾತಿ ಮಾಲಿವಾಲ್‌ ಅವರಿಗೆ ಭದ್ರತಾ ಸಿಬ್ಬಂದಿಯು ಹೊರಗೆ ತೆರಳಿ ಎಂಬುದಾಗಿ ಹೇಳಿದ್ದಾರೆ. ಆದರೆ, ನಾನು ಹೊರಗೆ ಹೋಗಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಭದ್ರತಾ ಸಿಬ್ಬಂದಿಯೊಬ್ಬರಿಗೆ ಬಾಂಡ್ಲಿ (ಬೊಕ್ಕ ತಲೆಯವರು) ಎಂಬುದಾಗಿ ಬೈದಿದ್ದಾರೆ. ನಾನು ಇದರ ಬಗ್ಗೆ ಎಲ್ಲರಿಗೂ ಹೇಳುತ್ತೇನೆ ಎಂದು ಸ್ವಾತಿ ಮಾಲಿವಾಲ್‌ ಅವರು ದೆಹಲಿ ಸಿಎಂ ಕಚೇರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮಾಡಿ, ಆದರೆ ಇಲ್ಲಿಂದ ಹೊರಡಿ ಎಂದು ಸಿಬ್ಬಂದಿ ಸೂಚಿಸಿದ್ದಾರೆ. ಆಗ, ಸ್ವಾತಿ ಮಾಲಿವಾಲ್‌ ಅವರು ಭದ್ರತಾ ಸಿಬ್ಬಂದಿಗೆ ಅವಾಚ್ಯವಾಗಿ ಬೈದಿದ್ದಾರೆ. ಇಷ್ಟೆಲ್ಲ ಅಂಶಗಳು ವಿಡಿಯೊದಲ್ಲಿವೆ.

ಇದನ್ನೂ ಓದಿ: Swati Maliwal: ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

Continue Reading

Lok Sabha Election 2024

Nitin Gadkari: ಯಾವ ಸರ್ಕಾರದಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ: ನಿತಿನ್‌ ಗಡ್ಕರಿ

Nitin Gadkari: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ನಾಸಿಕ್ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಶಿವಸೇನೆಯ ಹೇಮಂತ್ ಗೋಡ್ಸೆ ಪರ ನಡೆದ ಪ್ರಚಾರ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

VISTARANEWS.COM


on

Nitin Gadkari
Koo

ಮುಂಬೈ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಈಗಾಗಲೇ 4 ಹಂತಗಳ ಮತದಾನ ಮುಗಿದಿದೆ. ಮೇ 20ರಂದು 5ನೇ ಹಂತದ ಮತದಾನ ನಡೆಯಲಿದೆ. ಈ ಮಧ್ಯೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಉತ್ತರಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಸಿಕ್ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಶಿವಸೇನೆಯ ಹೇಮಂತ್ ಗೋಡ್ಸೆ ಪರ ನಡೆದ ಪ್ರಚಾರ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ʼʼಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವನ್ನು ಯಾವ ಸರ್ಕಾರದಿಂದಲೂ ಬದಲಾಯಿಸಲು ಸಾಧ್ಯವಾಗದು. ಅದರಲ್ಲಿನ ಸೆಕ್ಷನ್‌ಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ತರಬಹುದಷ್ಟೆ. ಕಾಂಗ್ರೆಸ್ ಸಂವಿಧಾನವನ್ನು 80 ಬಾರಿ ತಿದ್ದುಪಡಿ ಮಾಡಿದೆ. ಅದರ ಹೊರತಾಗಿಯೂ, ನಾವು (ಬಿಜೆಪಿ) ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್‌ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದು ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ.

ʼʼಸಬ್‌ ಕ ಸಾಥ್‌, ಸಬ್‌ ಕ ವಿಕಾಸ್‌ʼ ಎನ್ನುವುದು ನರೆಂದ್ರ ಮೋದಿ ನೇತೃತ್ವದ ಸರ್ಕಾರದ ಧ್ಯೇಯ ವಾಕ್ಯ. ಅದರಂತೆ ಕೇಂದ್ರ ಸರ್ಕಾರ ಸಮಾಜದ ಪ್ರತಿಯೊಬ್ಬರಿಗೂ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದೆ. ಬಡವರು, ಶೋಷಿತರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಅವರಿಗಾಗಿ ವಿವಿಧ ಯೋಜನೆಗಳನ್ನೂ ಪ್ರಕಟಿಸಲಾಗಿದೆʼʼ ಎಂದು ವಿವರಿಸಿದ್ದಾರೆ.

ʼʼನಾಸಿಕ್‌ನ ಎರಡು ಪ್ರಮುಖ ಬೆಳೆಗಳಾದ ಈರುಳ್ಳಿ ಮತ್ತು ದ್ರಾಕ್ಷಿಯ ಸಂಗ್ರಹಣೆ ಮತ್ತು ಸಂಸ್ಕರಣೆಗೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆʼʼ ಎಂದೂ ಸಚಿವರು ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ಆರೋಪ ಹೊರಿಸಿದ್ದ ಖರ್ಗೆ

ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈ ಹಿಂದೆ ಆರ್‌ಎಸ್‌ಎಸ್‌ ನಾಯಕ ಮೋಹನ್ ಭಾಗವತ್ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನದಲ್ಲಿ ಬದಲಾವಣೆಗಳನ್ನು ತರುವುದಾಗಿ ಘೋಷಿಸಿದ್ದರು. ಜತೆಗೆ ಅನೇಕ ಬಿಜೆಪಿ ನಾಯಕರು ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ. ಈ ಎಲ್ಲದರ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆʼʼ ಎಂದಿದ್ದರು. ಜತೆಗೆ ʼʼಸಂವಿಧಾನ ಬದಲಾವಣೆ ನಿಜವಾಗಿಯೂ ನಿಮ್ಮ ಉದ್ದೇಶವಲ್ಲದಿದ್ದರೆ, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ನೀವು ಏಕೆ ಕ್ರಮ ಕೈಗೊಳ್ಳಬಾರದು?” ಎಂದು ಮೋದಿ ಅವರನ್ನು ಪ್ರಶ್ನಿಸಿದ್ದರು. ʼʼನೀವು (ಮೋದಿ) ನಿಮ್ಮ 56 ಇಂಚಿನ ಎದೆಯ ಬಗ್ಗೆ ಪದೇ ಪದೆ ಮಾತನಾಡುತ್ತೀರಿ. ಆದರೆ ಸಂವಿಧಾನದ ವಿರುದ್ಧವಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಯಾಕೆ?ʼʼ ಎಂದು ಕೇಳಿದ್ದರು.

ಇದನ್ನೂ ಓದಿ: Lok Sabha Election 2024: ಮೋದಿ ಮತ್ತೆ ಪ್ರಧಾನಿ, ಎನ್‌ಡಿಗೆ 400: ನಿತಿನ್‌ ಗಡ್ಕರಿ; 2026ರಲ್ಲಿ ಬುಲೆಟ್‌ ಟ್ರೇನ್:‌ ಅಶ್ವಿನಿ ವೈಷ್ಣವ್

ಪ್ರಸ್ತುತ ನಡೆಯುತ್ತಿರುವ ಚುನಾವಣೆಯು ಸಿದ್ಧಾಂತಗಳ ನಡುವಿನ ಕದನ ಎಂದಿದ್ದ ಖರ್ಗೆ, ʼʼಒಂದು ಬಣ ಬಡವರಿಗಾಗಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಬಣ ಧರ್ಮದ ಆಧಾರದಲ್ಲಿ ತಮ್ಮ ಶ್ರೀಮಂತ ಗೆಳೆಯರಿಗಾಗಿ ಕಣ್ಣಕ್ಕಿಳಿದಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಕಡಿಮೆ ಮಾಡಲು ನಾವು ಹೋರಾಟ ನಡೆಸುತ್ತಿದ್ದೇವೆʼʼ ಎಂದು ಹೇಳಿದ್ದರು.

Continue Reading

ವಿದೇಶ

Advisory for Students: ಕಿರ್ಗಿಸ್ತಾನದಲ್ಲಿನ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಭಾರತ, ಪಾಕಿಸ್ತಾನ; ಕಾರಣವೇನು?

Advisory for Students: ಕಿರ್ಗಿಸ್ತಾನದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿರುದ್ಧ ದೊಡ್ಡ ಪ್ರಮಾಣದ ಗುಂಪು ಹಿಂಸಾಚಾರ ವರದಿಯಾಗುತ್ತಿರುವುದರಿಂದ ಅಲ್ಲಿರುವ ತನ್ನ ಪ್ರಜೆಗಳಿಗೆ ಮನೆಯೊಳಗೆ ಇರುವಂತೆ ಭಾರತ ಮತ್ತು ಪಾಕಿಸ್ತಾನ ಸಲಹೆ ನೀಡಿದೆ. ಜತೆಗೆ ಭಾರತ ಹೆಲ್ಪ್‌ಲೈನ್‌ ಆರಂಭಿಸಿದೆ. ಸಮಸ್ಯೆ ಕಂಡು ಬಂದರೆ ಹೆಲ್ಪ್‌ಲೈನ್‌ ನಂಬರ್‌ 0555710041ಕ್ಕೆ ಕರೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ.

VISTARANEWS.COM


on

Advisory for Students
Koo

ನವದೆಹಲಿ: ಮಧ್ಯ ಏಷ್ಯಾದ ಕಿರ್ಗಿಸ್ತಾನ (Kyrgyzstan)ದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿರುದ್ಧ ದೊಡ್ಡ ಪ್ರಮಾಣದ ಗುಂಪು ಹಿಂಸಾಚಾರ ವರದಿಯಾಗುತ್ತಿರುವುದರಿಂದ ಅಲ್ಲಿರುವ ತನ್ನ ಪ್ರಜೆಗಳಿಗೆ ಮನೆಯೊಳಗೆ ಇರುವಂತೆ ಭಾರತ ಸಲಹೆ ನೀಡಿದೆ (Advisory for Students).

ʼʼನಮ್ಮ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಆದರೂ ವಿದ್ಯಾರ್ಥಿಗಳಿಗೆ ಮನೆಯೊಗಳೇ ಇರುವಂತೆ ಸಲಹೆ ನೀಡಿದ್ದೇವೆ. ಯಾವುದೇ ಸಮಸ್ಯೆ ಬಂದರೆ ತಕ್ಷಣ ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದೇವೆʼʼ ಎಂದು ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೆಲ್ಪ್‌ಲೈನ್‌ ಆರಂಭ

ಜತೆಗೆ ರಾಯಭಾರ ಕಚೇರಿ ಹೆಲ್ಪ್‌ಲೈನ್‌ ಕೂಡ ಆರಂಭಿಸಿದೆ. ʼʼಸಮಸ್ಯೆ ಕಂಡು ಬಂದರೆ ನಮ್ಮ ಹೆಲ್ಪ್‌ಲೈನ್‌ ನಂಬರ್‌ 0555710041ಕ್ಕೆ ಕರೆ ಮಾಡಿ. ಇದು 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆʼʼ ಎಂದಿರುವ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

ಏನಿದು ಕಿರ್ಗಿಸ್ತಾನದಲ್ಲಿನ ಸಮಸ್ಯೆ?

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೇ 13ರಂದು ಕಿರ್ಗಿಸ್ತಾನದ ಬಿಷ್ಕೆಕ್‌ನ ಹಾಸ್ಟೆಲ್‌ನಲ್ಲಿ ಸ್ಥಳೀಯರು ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ನಡುವೆ ಆರಂಭವಾದ ಘರ್ಷಣೆಯ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಬಿಷ್ಕೆಕ್‌ನಲ್ಲಿ ಗುಂಪುಗೂಡಿದ ಪ್ರತಿಭಟನಾಕಾರರು ರಸ್ತೆ ಸಂಚಾರವನ್ನು ತಡೆದಿದ್ದರು ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಈಗಾಗಲೇ ಹಲವರನ್ನು ಬಂಧಿಸಿವೆ. ಕಿರ್ಗಿಸ್ತಾನ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಪ್ರತಿ ವರ್ಷ ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲಿಯೂ ಇಲ್ಲಿನ ವೈದ್ಯಕೀಯ ಶಿಕ್ಷಣ ಬಲು ಜನಪ್ರಿಯ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸ್ಥಳೀಯರು ಮತ್ತು ವಿದೇಶಿ ವಿದ್ಯಾರ್ಥಿಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಿರುತ್ತದೆ.

2023ರ ಏಪ್ರಿಲ್ ವೇಳೆಗೆ ಕಿರ್ಗಿಸ್ತಾನದ ವಿವಿಧ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಸುಮಾರು 9,500 ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದರು ಎಂದು ಅಂಕಿ-ಅಂಶ ತಿಳಿಸಿದೆ.

ಪಾಕಿಸ್ತಾನದಿಂದಲೂ ಮಾರ್ಗಸೂಚಿ ಬಿಡುಗಡೆ

ಭಾರತ ಜತೆಗೆ ಇದೀಗ ಪಾಕಿಸ್ತಾನ ಕೂಡ ತನ್ನ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವರದಿಯಾಗುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಬಿಷ್ಕೆಕ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಸಲಹೆ ನೀಡಿದೆ. ಕಿರ್ಗಿಸ್ತಾನ್ ಮತ್ತು ಈಜಿಪ್ಟ್ ವಿದ್ಯಾರ್ಥಿಗಳ ನಡುವಿನ ಸಂಘರ್ಷದ ವಿಡಿಯೊ ಮೇ 13ರಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ವಿದೇಶಿ ವಿದ್ಯಾರ್ಥಿಗಳ ವಿರುದ್ಧದ ಹಿಂಸಾಚಾರವನ್ನು ಉಲ್ಲೇಖಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ʼʼವೈದ್ಯಕೀಯ ವಿಶ್ವ ವಿದ್ಯಾನಿಯಲಗಳ ಹಾಸ್ಟೆಲ್‌, ಖಾಸಗಿ ಪಿಜಿ ಸೇರಿ ವಿದೇಶಿ ವಿದ್ಯಾರ್ಥಿಗಳಿರುವ ಕಟ್ಟಡಗಳೇ ಪ್ರತಿಭಟನಾಕಾರರ ಗುರಿ. ಈಗಾಗಲೇ ಹಿಂಸಾಚಾರದಲ್ಲಿ ಕೆಲವು ಪಾಕಿಸ್ತಾನದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲʼʼ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

ಪರಿಸ್ಥಿತಿ ತಿಳಿಯಾಗುವವರೆಗೆ ಮನೆಯೊಳಗೆ ಇರಿ ಎಂದು ಸಲಹೆ ನೀಡಿರುವ ಪಾಕಿಸ್ತಾನದ ರಾಯಭಾರ ಕಚೇರಿ ತನ್ನ ದೇಶದ ಸುಮಾರು 250 ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಸ್ಥರನ್ನು ಸಂಪರ್ಕಿಸಿದೆ. ಸ್ಥಳೀಯರು ಎಲ್ಲ ವಿದೇಶಿಗರನ್ನು ಗುರಿಯಾಗಿಸಿದ್ದಾರೆ. ಪಾಕಿಸ್ತಾನದವರು ಮಾತ್ರ ಇವರ ಟಾರ್ಗೆಟ್‌ ಅಲ್ಲ. ಯಾವುದೇ ಕಾರಣಕ್ಕೂ ಭಯ ಪಡಬೇಡಿ ಎಂದು ಹೇಳಿದೆ.

Continue Reading

Lok Sabha Election 2024

JP Nadda: ಬಿಜೆಪಿ ಈಗ ಬೆಳೆದಿದೆ, ಸಶಕ್ತವಾಗಿದೆ; ಆರ್‌ಎಸ್‌ಎಸ್ ನೆರವಿನ ಪ್ರಶ್ನೆಗೆ ನಡ್ಡಾ ಉತ್ತರ

JP Nadda: ಬಿಜೆಪಿ ಬೆಳವಣಿಗೆಗೆ ಆರ್‌ಎಸ್‌ಎಸ್‌ ಕೊಡುಗೆ ನೀಡಿದೆ. ಈಗ ಪಕ್ಷ ತನ್ನದೇ ಆದ ವ್ಯವಹಾರ ನಡೆಸಲು, ನಿರ್ಧಾರ ತೆಗೆದುಕೊಳ್ಳಲು ಸಮರ್ಥವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ʼʼಆರಂಭದಲ್ಲಿ, ನಾವು ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದೆವು ಮತ್ತು ಆಗ ಆರ್‌ಎಸ್‌ಎಸ್‌ನ ಅಗತ್ಯವಿತ್ತು. ಇಂದು ನಾವು ಬೆಳೆದಿದ್ದೇವೆ ಮತ್ತು ನಾವು ಸಮರ್ಥರಾಗಿದ್ದೇವೆ. ಬಿಜೆಪಿ ತನ್ನಷ್ಟಕ್ಕೆ ತಾನೇ ಜವಾಬ್ದಾರಿ ತೆಗೆದುಕೊಳ್ಳುತ್ತಿದೆ. ಅದೇ ವ್ಯತ್ಯಾಸʼʼ ಎಂದು ತಿಳಿಸಿದ್ದಾರೆ.

VISTARANEWS.COM


on

JP Nadda
Koo

ನವದೆಹಲಿ: ಬಿಜೆಪಿ ಬೆಳವಣಿಗೆಗೆ ಆರ್‌ಎಸ್‌ಎಸ್‌ (RSS) ಕೊಡುಗೆ ನೀಡಿದೆ. ಈಗ ಪಕ್ಷ ತನ್ನದೇ ಆದ ವ್ಯವಹಾರ ನಡೆಸಲು, ನಿರ್ಧಾರ ತೆಗೆದುಕೊಳ್ಳಲು ಸಮರ್ಥವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಹೇಳಿದ್ದಾರೆ. ಆರ್‌ಎಸ್‌ಎಸ್‌ ಸೈದ್ಧಾಂತಿಕ ನಿಲುವಾಗಿದ್ದು, ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾಜಿ ಪ್ರದಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಕ್ಕೆ ಹೋಲಿಸಿದರೆ ಪ್ರಸ್ತುರ ಆರ್‌ಎಸ್‌ಎಸ್‌ನ ಉಪಸ್ಥಿತಿ ಬಿಜೆಪಿಯಲ್ಲಿ ಹೇಗೆ ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ ಅವರು, ʼʼಆರಂಭದಲ್ಲಿ, ನಾವು ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದೆವು ಮತ್ತು ಆಗ ಆರ್‌ಎಸ್‌ಎಸ್‌ನ ಅಗತ್ಯವಿತ್ತು. ಇಂದು ನಾವು ಬೆಳೆದಿದ್ದೇವೆ ಮತ್ತು ನಾವು ಸಮರ್ಥರಾಗಿದ್ದೇವೆ. ಬಿಜೆಪಿ ತನ್ನಷ್ಟಕ್ಕೆ ತಾನೇ ಜವಾಬ್ದಾರಿ ತೆಗೆದುಕೊಳ್ಳುತ್ತಿದೆ. ಅದೇ ವ್ಯತ್ಯಾಸʼʼ ಎಂದು ಹೇಳಿದ್ದಾರೆ.

ಹಾಗಾದರೆ ಪ್ರಸ್ತುತ ಬಿಜೆಪಿಗೆ ಆರ್‌ಎಸ್‌ಎಸ್‌ನ ಬೆಂಬಲದ ಅಗತ್ಯವಿಲ್ಲವೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನೋಡಿ, ಪಕ್ಷ ಬೆಳೆದಿದೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಆರ್‌ಎಸ್‌ಎಸ್‌ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಮತ್ತು ನಮ್ಮದು ರಾಜಕೀಯ ಸಂಘಟನೆ. ಹೀಗಾಗಿ ಇಲ್ಲಿ ಅಗತ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಸೈದ್ಧಾಂತಿಕ ರಂಗ. ನಾವು ನಮ್ಮ ವ್ಯವಹಾರಗಳನ್ನು ನಮ್ಮದೇ ಆದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ. ರಾಜಕೀಯ ಪಕ್ಷಗಳು ಅದನ್ನೇ ಮಾಡಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಥುರಾ ಮತ್ತು ಕಾಶಿಯ ವಿವಾದಿತ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸುವ ಯಾವುದೇ ಯೋಜನೆಯನ್ನು ಬಿಜೆಪಿ ಹೊಂದಿಲ್ಲ ಎಂದು ನಡ್ಡಾ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಬಿಜೆಪಿಗೆ ಅಂತಹ ಯಾವುದೇ ಆಲೋಚನೆ, ಯೋಜನೆ ಅಥವಾ ಬಯಕೆ ಇಲ್ಲ. ಈ ಕುರಿತು ಯಾವುದೇ ಚರ್ಚೆಗಳೂ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಬಡವರು, ಶೋಷಿತರು, ದಲಿತರು, ಮಹಿಳೆಯರು, ಯುವಕರು, ರೈತರತ್ತ ಗಮನ ಕೇಂದ್ರೀಕರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. “ಈ ವಿಭಾಗಗಳನ್ನು ಮುಖ್ಯವಾಹಿನಿಗೆ ತರಬೇಕು ಮತ್ತು ಸಬಲೀಕರಣಗೊಳಿಸಬೇಕು. ನಾವು ಅವರನ್ನು ಬಲಪಡಿಸಲು ಯತ್ನಿಸುತ್ತಿದ್ದೇವೆ” ಎಂದು ನಡ್ಡಾ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Narendra Modi: ಕಾಂಗ್ರೆಸ್‌ ಗೆದ್ದರೆ ಬುಲ್ಡೋಜರ್‌ನಿಂದ ರಾಮಮಂದಿರ ನೆಲಸಮ ಎಂದ ಮೋದಿ!

ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರಂತಹ ಬಿಜೆಪಿ ನಾಯಕರು ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ನೆನಪಿಸಿದಾಗ, “ಬಿಜೆಪಿ ತನ್ನ ಪಾಲಂಪುರ್ ನಿರ್ಣಯದಲ್ಲಿ (ಜೂನ್ 1989) ರಾಮ ಮಂದಿರದ ಬೇಡಿಕೆಯನ್ನು ಸೇರಿಸಿತ್ತು. ಸುದೀರ್ಘ ಹೋರಾಟದ ನಂತರ ದೇವಾಲಯ ನಿರ್ಮಾಣದ ಕನಸು ನನಸಾಯಿತು. ರಾಮ ಮಂದಿರ ನಮ್ಮ ಕಾರ್ಯಸೂಚಿಯಲ್ಲಿತ್ತುʼʼ ಎಂದ ನಡ್ಡಾ ಅವರು, ʼʼನಮ್ಮದು ದೊಡ್ಡ ಪಕ್ಷ ಮತ್ತು ಪ್ರತಿಯೊಬ್ಬ ನಾಯಕರಿಗೂ ಅವರದ್ದೇ ಆದ ಭಾಷಣ ಶೈಲಿ ಇರುತ್ತದೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲʼʼ ಎಂದು ತಿಳಿಸಿದ್ದಾರೆ.

Continue Reading
Advertisement
RCB FANS BIKE RALLY
ಕ್ರೀಡೆ3 mins ago

RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

Pavithra Jayaram Chandrakant are just friends, daughter said
ಕಿರುತೆರೆ10 mins ago

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Powerful Bike
ಪ್ರಮುಖ ಸುದ್ದಿ12 mins ago

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Road Accident
ಶಿವಮೊಗ್ಗ23 mins ago

Road Accident : ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Kannada stone inscription found in Kashi Use as a foot bridge at the ghat
ಶಿವಮೊಗ್ಗ30 mins ago

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Road Accident
ಬೆಂಗಳೂರು ಗ್ರಾಮಾಂತರ52 mins ago

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Hyderabadi Biryani
ಪ್ರಮುಖ ಸುದ್ದಿ1 hour ago

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Job Alert
ಉದ್ಯೋಗ1 hour ago

Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Sangeetha Sringeri Wore Lioness Logo On Her Belt
ಬಿಗ್ ಬಾಸ್1 hour ago

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

swati maliwal bibhav kumar
ಪ್ರಮುಖ ಸುದ್ದಿ1 hour ago

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ18 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌