ಬ್ರೆಸಿಲಿಯಾ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಬ್ರೆಜಿಲ್ ಪ್ರವಾಸ ಕೈಗೊಂಡಿದ್ದು, ಭಾರತ ಹಾಗೂ ಬ್ರೆಜಿಲ್ ನಡುವಿನ ರಾಜತಾಂತ್ರಿಕ ಸಂಬಂಧ ವೃದ್ಧಿಗೆ ಆದ್ಯತೆ ನೀಡಿದ್ದಾರೆ. ಭಾರತ ಮತ್ತು ಬ್ರೆಜಿಲ್ ನಡುವಿನ ರಾಜತಾಂತ್ರಿಕ ಸಂಬಂಧದ 75 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಅವರು ಪ್ರವಾಸ ಕೈಗೊಂಡಿದ್ದು, ಎರಡೂ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವುದು ಕೂಡ ಅವರ ಉದ್ದೇಶವಾಗಿದೆ.
ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡಿದ್ದು, ಈ ಕಾರ್ಯತಂತ್ರದ ವ್ಯಾಪಾರ ವಿಸ್ತರಣೆಗೆ ಒತ್ತು ನೀಡುವುದು ಹಾಗೂ ಆರ್ಥಿಕ ಅಭಿವೃದ್ಧಿಯ ಉತ್ತೇಜನ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅವರು ಹಲವು ಸಭೆ ನಡೆಸಿದರು. ಅದರಲ್ಲೂ, ಪ್ರಹ್ಲಾದ್ ಜೋಶಿ ಅವರು 10 ಸಂಸತ್ ಸದಸ್ಯರ ನಿಯೋಗದೊಂದಿಗೆ, ಬ್ರೆಜಿಲಿಯನ್ ಸಂಸತ್ತಿನ ಫೆಡರಲ್ ಸೆನೆಟ್‌ನ ಅಧ್ಯಕ್ಷ ರೋಡ್ರಿಗೋ ಒಟಾವಿಯೊ ಸೊರೆಸ್ ಪಶೇಕೊ (Mr. Rodrigo Otavio Soares Pacheco) ಅವರೊಂದಿಗೂ ಸಭೆ ನಡೆಸಿದರು.
ಸಂವಾದ ಕಾರ್ಯಕ್ರಮದ ನಂತರದಲ್ಲಿ ಭಾರತೀಯ ರಾಯಭಾರಿ ಶ್ರೀ ಸುರೇಶ್ ರೆಡ್ಡಿಯವರು ಏರ್ಪಡಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿ ಸಂತೋಷವಾಯಿತು. ಈ ವಿಶೇಷ ಆತಿಥ್ಯ ನೀಡಿದ ಶ್ರೀ ಸುರೇಶ್ ರೆಡ್ಡಿಯವರಿಗೆ ಹಾಗೂ ಬ್ರೆಜಿಲ್ನ ಜನಪ್ರತಿನಿಧಿಗಳಿಗೆ ಧನ್ಯವಾದಗಳು.
— Pralhad Joshi (@JoshiPralhad) June 14, 2023
ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ವಿಸ್ತರಣೆಗೆ 273 ಕೋಟಿ ರೂ.; ಕೇಂದ್ರಕ್ಕೆ ಪ್ರಲ್ಹಾದ್ ಜೋಶಿ ಧನ್ಯವಾದ
ಇನ್ನು ಇದೇ ವೇಳೆ ನಿಯೋಗವು ಬ್ರೆಸಿಲಿಯಾ ಮತ್ತು ರಿಯೊ ಡಿ ಜನೈರೊ ನಗರದಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗಳಿಗೆ ನಮನ ಸಲ್ಲಿಸಿತು. ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರೋಡ್ರಿಗೋ ಒಟಾವಿಯೊ ಸೊರೆಸ್ ಪಶೇಕೊ ಅವರನ್ನು ಜೋಶಿ ಅವರು ಭಾರತಕ್ಕೆ ಆಹ್ವಾನಿಸಿದರು.