Site icon Vistara News

ರಾಷ್ಟ್ರಪತಿ ಮುರ್ಮು ಮೊದಲ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಸಾಲುಗಳು!

murmu

ನವ ದೆಹಲಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಭಾನುವಾರ ತಮ್ಮ ಮೊದಲ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಕವಿ, ಕನ್ನಡದ ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸುತ್ತಾ ಭಾಷಣ ಮುಗಿಸಿದ್ದು ವಿಶೇಷವಾಗಿತ್ತು.

ʼʼಕನ್ನಡ ಭಾಷೆಯಲ್ಲಿ ಬರೆದು ಆ ಮೂಲಕ ಭಾರತದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ ಕುವೆಂಪು ಅವರು ಬರೆದಿದ್ದಾರೆ: ʼನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ, ಮೂಡುವುದು ಮೂಡುವುದು ನವಭಾರತದ ಲೀಲೆ’ʼ ಎಂದು ಹೇಳಿದ ಮುರ್ಮು, ನಂತರ ಅದರ ಅರ್ಥವನ್ನು ವಿವರಿಸಿದರು. ʼʼನಾವೂ ನೀವೂ ಎಲ್ಲರೂ ನಾಶವಾಗುತ್ತೇವೆ. ಆದರೆ ನಮ್ಮ ತ್ಯಾಗದಿಂದ ದೇಶವನ್ನು ಕಟ್ಟಬೇಕು. ಮಾತೃಭೂಮಿಯ ಉನ್ನತಿಗಾಗಿ ಹಾಗೂ ಸಹ ನಾಗರಿಕರ ಏಳಿಗಾಗಿ ಯುವಕರು ಸಂಪೂರ್ಣ ತ್ಯಾಗಕ್ಕೆ ಸಜ್ಜಾಗಬೇಕುʼʼ ಎಂದು ಅವರು ಹೇಳಿದರು.

ʼʼನಮಗೆ ದೊರೆತಿರುವುದೆಲ್ಲವೂ ನಮ್ಮ ಪ್ರೀತಿಯ ದೇಶ ನಮಗೆ ಕೊಟ್ಟಿರುವ ಭಾಗ್ಯ. ನಮ್ಮ ದೇಶದ ಸುರಕ್ಷತೆ, ಭದ್ರತೆ, ಪ್ರಗತಿ ಹಾಗೂ ಉನ್ನತಿಗೆ ನಮ್ಮಿಂದ ಆಗುವ ಎಲ್ಲವನ್ನೂ ಕೊಡಲು ಪ್ರತಿಜ್ಞೆ ಮಾಡಬೇಕು. ಭವ್ಯ ಭಾರತವನ್ನು ಕಟ್ಟುವ ಮೂಲಕ ನಮ್ಮ ಇರುವಿಕೆಗೆ ಅರ್ಥ ಸಿಗುತ್ತದೆ’ʼ ಎಂದು ಅವರು ನುಡಿದರು.

ಇದನ್ನೂ ಓದಿ: Amrit Mahotsav | ಕೆಂಪು ಕೋಟೆ ಮೇಲೆ ಮೊದಲ ಬಾರಿ ಬುಲೆಟ್‌ಪ್ರೂಫ್‌ ಶೀಲ್ಡ್‌ನಲ್ಲಿ ಮೋದಿ ಭಾಷಣ?

Exit mobile version