Site icon Vistara News

Draupadi Murmu: ಹೊಸ ಕಟ್ಟಡದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಭಾಷಣ; ಸೆಂಗೋಲ್‌ ಸ್ವಾಗತ; “ರಾಮ ಮಂದಿರದ ಶತಮಾನದ ಕನಸು ನನಸು…ʼʼ

draupadi murmu sengol

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ನಿರ್ಮಾಣವು ಶತಮಾನಗಳ ಕನಸಾಗಿತ್ತು, ಅದು ಈಗ ನಿಜವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಹೇಳಿದ್ದಾರೆ. ಇಂದು ಆರಂಭವಾದ ಸಂಸತ್ತಿನ ಉಭಯ ಸದನಗಳ ಜಂಟಿ ಬಜೆಟ್‌ (budget 2024) ಅಧಿವೇಶನವನ್ನು (Parliament Joint Session) ಉದ್ದೇಶಿಸಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಭಾಷಣ ಮಾಡಲು ಸಂಸತ್ ಭವನಕ್ಕೆ ʼಬಗ್ಗಿʼಯಲ್ಲಿ (ಕುದುರೆ ಗಾಡಿ) ಆಗಮಿಸಿದರು. ರಾಷ್ಟ್ರಪತಿಯವರ ಮುಂದೆ ʼಸೆಂಗೊಲ್’ ದಂಡಧಾರಿಗಳು ಆಗಮಿಸಿದರು. ಅವರ ಹಿಂದೆ ಸ್ಪೀಕರ್ ಓಂ ಬಿರ್ಲಾ (Speaker Om Birla), ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ (Jagdeep Dhankar) ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇದ್ದರು.

ದ್ರೌಪದಿ ಮುರ್ಮು ಅವರು ಬಜೆಟ್‌ ಮುಂಚಿತವಾಗಿ ಮಾತನಾಡಿ, ಬಡತನ ನಿರ್ಮೂಲನೆಯಲ್ಲಿ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿದರು. ಭಾರತವು ಅದರ ಬಾಲ್ಯದಿಂದಲೂ ʼಗರೀಬಿ ಹಠಾವೋʼ ಘೋಷಣೆಯನ್ನು ಕೇಳಿದೆ. ಆದರೆ ಇಂದು, ನಮ್ಮ ಜೀವನದಲ್ಲಿ ಮೊದಲ ಬಾರಿಗೆ, ಬಡತನವನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸಿರುವುದನ್ನು ನಾವು ಕಾಣಬಹುದು ಎಂದರು.

“ಇದು ಹೊಸ ಸಂಸತ್ತಿನ ಕಟ್ಟಡದಲ್ಲಿ ನನ್ನ ಮೊದಲ ಭಾಷಣವಾಗಿದೆ. ಈ ಹೊಸ ಕಟ್ಟಡವನ್ನು ʼಅಮೃತ್ ಕಾಲ’ದ ಆರಂಭದಲ್ಲಿ ನಿರ್ಮಿಸಲಾಗಿದೆ. ಇದು ʼಏಕ ಭಾರತ, ಶ್ರೇಷ್ಠ ಭಾರತ’ದ ಸಾರವಾಗಿದೆ. ಈ ಹೊಸ ಕಟ್ಟಡದಲ್ಲಿ ನಾವು ಸಕಾರಾತ್ಮಕ ಚರ್ಚೆಯನ್ನು ನಡೆಸುತ್ತೇವೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ರದ್ದತಿಗಳನ್ನು ಅವರು ಐತಿಹಾಸಿಕ ಸಾಧನೆಗಳೆಂದು ಬಣ್ಣಿಸಿದರು. ಮುರ್ಮು ಅವರು ನೀತಿ ಆಯೋಗದ ದತ್ತಾಂಶಗಳನ್ನು ಉಲ್ಲೇಖಿಸಿದರು. ಈ ಸರ್ಕಾರದ ಅಧಿಕಾರಾವಧಿಯಲ್ಲಿ ಬಡತನ ನಿರ್ಮೂಲನೆಯಲ್ಲಿ ಗಣನೀಯ ಪ್ರಗತಿಯನ್ನು ಕಾಣಬಹುದು. ಒಂದು ದಶಕದ ಅವಧಿಯಲ್ಲಿ ಸರಿಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವರದಿಯಾಗಿದೆ. ಇದು ಆಡಳಿತದ ಸಾಮಾಜಿಕ-ಆರ್ಥಿಕ ನೀತಿಗಳ ಸಾಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಮುರ್ಮು ಆಡಿದ ಇನ್ನಷ್ಟು ಮಾತುಗಳು ಹೀಗಿವೆ:

ಇದನ್ನೂ ಓದಿ: CM Siddaramaiah: ರಾಷ್ಟ್ರಪತಿಗೆ ಏಕವಚನ ಪ್ರಯೋಗ; ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ ಎಂದ ಎಚ್‌ಡಿಕೆ

Exit mobile version