Site icon Vistara News

Swachh Sujal Shakti Samman: ಕರ್ನಾಟಕದ ಗೀತಾ ಪವಾರ್ ಸೇರಿ 36 ಮಹಿಳೆಯರಿಗೆ ಸ್ವಚ್ಛ ಸುಜಲ್ ಶಕ್ತಿ ಪ್ರಶಸ್ತಿ ಪ್ರದಾನ

president Droupadi Murmu confers swachh sujal shakti samman to 36 women

ನವದೆಹಲಿ: ಗ್ರಾಮೀಣ ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸುವ ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪೂರ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ, ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ಕೆಲಸ ಮಾಡುತ್ತಿರುವ ಒಟ್ಟು 36 ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕದ ಬೀದರ್ ಜಿಲ್ಲೆಯ ಗೀತಾ ವಿನೋದ್ ಪವಾರ್ ಅವರು ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ. ಈ ವೇಳೆ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೂ ಇದ್ದರು(Swachh Sujal Shakti Samman).

ಕಾರ್ಯಕ್ರಮದಲ್ಲಿ ಜಲ ಶಕ್ತಿ ಅಭಿಯಾನ – ಕ್ಯಾಚ್ ದಿ ರೈನ್ 2023 ಮತ್ತು ರಾಷ್ಟ್ರೀಯ ಜಲ ಮಿಷನ್‌ನ SoPಗಳನ್ನು ಬಿಡುಗಡೆ ಮಾಡಲಾಯಿತು. ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್. ‘ಸ್ವಚ್ಛ ಸುಜಲ್ ಶಕ್ತಿ ಕಿ ಅಭಿವ್ಯಕ್ತಿ’ಯ ಮೊದಲ ಪ್ರತಿಯನ್ನು ರಾಷ್ಟ್ರಪತಿ ಅವರಿಗೆ ನೀಡಿದರು. ಇದೇ ವೇಳೆ, ರಾಷ್ಟ್ರೀಯ ಜಲ ಯೋಜನೆಗಾಗಿ ರೂಪಿಸಲಾದ ‘ಮೈ ಸ್ಟ್ಯಾಂಪ್’ ಅನ್ನು ರಾಜ್ಯ ಸಂವಹನ ಸಚಿವ ದೇವುಸಿನ್ಹ ಜೆಸಿಂಗ್‌ಭಾಯ್ ಚೌಹಾಣ್ ಅವರು ಮೊದಲ ಪ್ರತಿಯನ್ನು ರಾಷ್ಟ್ರಪತಿಗಳಿಗೆ ನೀಡಿದರು.

ಇದನ್ನೂ ಓದಿ: ಕಲಿತ ಶಾಲೆ, ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ, ಭಾವುಕರಾಗಿ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬಳಿಕ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜಲಶಕ್ತಿಯ ಎಲ್ಲ ಮೂರು ಮಿಷನ್‌ಗಳನ್ನು ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ವ-ಸಹಾಯ ಗುಂಪುಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳಲ್ಲಿನ ಮಹಿಳೆಯರ ಪ್ರಯತ್ನಗಳನ್ನು ನಾವು ಗುರುತಿಸುತ್ತೇವೆ. ನೀರಿನ ಸಂರಕ್ಷಣೆ, ನೀರಿನ ನಿರ್ವಹಣೆ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪವು ಸ್ವಚ್ಛ ಭಾರತ ಮಿಷನ್, ಜಲ ಜೀವನ್ ಮಿಷನ್ ಮತ್ತು ಜಲ ಶಕ್ತಿ ಅಭಿಯಾನದ ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.

Exit mobile version