ನವ ದೆಹಲಿ: ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ನಾಲ್ಕನೇ ಪುಣ್ಯತಿಥಿಯಂದು (ಆ.16) ಪ್ರಧಾನ ಮಂತ್ರಿ, ರಾಷ್ಟ್ರಪತಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರು ಅಟಲ್ ಅವರ ಸ್ಮಾರಕ ಸದೈವ ಅಟಲ್‌ಗೆ ಆಗಮಿಸಿ ಪುಷ್ಪಗುಚ್ಛಗಳನ್ನು ಅರ್ಪಿಸಿ ನಮನ ಸಲ್ಲಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರು 2018ರಲ್ಲಿ ತುಸುಕಾಲದ ಅಸೌಖ್ಯದ ಬಳಿಕ ಮೃತಪಟ್ಟಿದ್ದರು. ದೇಶದ ಮೊದಲ ಬಿಜೆಪಿ ಪ್ರಧಾನಿಯಾಗಿದ್ದ ಅವರು 1996, 1998 ಹಾಗೂ 1999ರಲ್ಲಿ ಹೀಗೆ ಮೂರು ಬಾರಿ ಪ್ರಧಾನ ಮಂತ್ರಿಯಾಗಿದ್ದ ಅಟಲ್, 1999- 2004ರ ಪೂರ್ಣಾವಧಿ ಪ್ರಧಾನಿಯಾಗಿದ್ದರು. ರಾಜಕೀಯ ಮುತ್ಸದ್ಧಿ, ಅಪ್ರತಿಮ ಸಂಸದೀಯ ಪಟು, ವಾಕ್ಪಟುವಾಗಿದ್ದ ಅಟಲ್, ಕವಿ ಹೃದಯಿಯಾಗಿಯೂ ಪ್ರಸಿದ್ಧರು.
ಇದನ್ನೂ ಓದಿ: ಅಮೃತ ನೆನಪು-75 | ಸ್ವಾತಂತ್ರ್ಯ ಹೋರಾಟದ ಜ್ವಾಲೆಯಲ್ಲಿ ಹವಿಸ್ಸಾದವರು ಇವರು!