ಪಟಾನಾ: ಕಳೆದ ಆರು ದಿನಗಳಿಂದ ಕಾಣೆಯಾಗಿದ್ದ ಶಿವ ದೇಗುಲದ ಅರ್ಚಕರೊಬ್ಬರು ಗುಂಡಿಕ್ಕಿ ಕೊಂದು ಅವರ ಕಣ್ಣುಗಳನ್ನು ಹೊರತೆಗೆಯಲಾಗಿದೆ ಮತ್ತು ಜನನಾಂಗಗಳನ್ನು ಕತ್ತರಿಸಿದ ಭೀಕರ ಘಟನೆ ಬಿಹಾರದ ಗೋಪಾಲ್ಗಂಜ್ (Bihar Clash) ಜಿಲ್ಲೆಯಲ್ಲಿ ಶನಿವಾರ ವರದಿಯಾಗಿದೆ. ಈ ಘಟನೆಯ ಬಳಿಕ ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಉಂಟಾಗಿದೆ. ಈ ಸಮಯದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜಿಲ್ಲೆಯ ದಾನಾಪುರ ಗ್ರಾಮದ ಶಿವ ದೇವಾಲಯದ ಅರ್ಚಕ ಮನೋಜ್ ಕುಮಾರ್ ಆರು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಸಹೋದರ ಅಶೋಕ್ ಕುಮಾರ್ ಶಾ ಬಿಜೆಪಿಯ ಮಾಜಿ ವಿಭಾಗೀಯ ಅಧ್ಯಕ್ಷರಾಗಿದ್ದಾರೆ. ಈ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಅವರ ಮೃತದೇಹ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮನೋಜ್ ಕುಮಾರ್ ತನ್ನ ಮನೆಯಿಂದ ದೇವಸ್ಥಾನಕ್ಕೆ ಹೋದ ಬಳಿಕ ಕಣ್ಮರೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಡ ಮಾಡಿದ್ದರು. ಆದರೆ ಅವನನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಇದೀಗ ಹೆಣವಾಗಿ ಪತ್ತೆಯಾಗಿದ್ದಾರೆ.
ಶನಿವಾರ, ಪೊಲೀಸರು ಮನೋಜ್ಕುಮಾರ್ ಶವವನ್ನು ಗ್ರಾಮದ ಪೊದೆಗಳಲ್ಲಿ ಪತ್ತೆ ಮಾಡಿದ್ದಾರೆ. ಸುದ್ದಿ ತಿಳಿದ ಸ್ಥಳೀಯರು ಪೊಲೀಸರ ನಿರ್ಲಕ್ಷ್ಯದ ಆರೋಪ ಹೊರಿಸಿ ಗಲಾಟೆ ಮಾಡಲು ಆರಂಭಿಸಿದರು. ಘರ್ಷಣೆಗಳು ಸಂಭವಿಸಿದಾಗ ಸ್ಥಳೀಯರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದರು.
ಗೋಲಿಬಾರ್
ಪೊಲೀಸರು ಗಾಳಿಯಲ್ಲಿ ನಿರಂತರವಾಗಿ ಗುಂಡು ಹಾರಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗೋಪಾಲ್ಗಂಜ್ ಸದರ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಪ್ರಾಂಜಲ್ ನಂತರ ಸ್ಥಳಕ್ಕೆ ತಲುಪಿ ಉದ್ರಿಕ್ತ ಸ್ಥಳೀಯರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: Solar Plant : ನಾಗ್ಪುರದಲ್ಲಿ ಸೋಲಾರ್ ಉತ್ಪನ್ನಗಳ ಕಂಪನಿಯಲ್ಲಿ ಸ್ಫೋಟ: 9 ಮಂದಿ ಸಾವು
ಮನೋಜ್ ಕುಮಾರ್ ಕಣ್ಮರೆಯಾದಾಗ ದೇವಸ್ಥಾನದಲ್ಲಿದ್ದ ಅವರ ಇನ್ನೊಬ್ಬ ಸಹೋದರ ಸುರೇಶ್ ಶಾ ಇದ್ದರು. ಮನೋಜ್ ಕುಮಾರ್ ಎಲ್ಲೋ ಹೊರಗೆ ಹೋಗಿದ್ದಾರೆ ಮರಳಿ ಬರಬಹುದು ಎಂದು ಅವರ ಕುಟುಂಬ ಭಾವಿಸಿತ್ತು.
“ಜಿಲ್ಲಾಡಳಿತದ ಕೆಲವು ಜನರು ಬಂದು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ ಎಂದು ಎಂದು ಭರವಸೆ ನೀಡಿದ್ದರು. ಆದರೆ ಆರು ದಿನಗಳ ನಂತರ ನನ್ನ ಸಹೋದರನ ಶವ ಪತ್ತೆಯಾಗಿದೆ. ಕೊಲೆ ಹೇಗೆ ಮತ್ತು ಏಕೆ ನಡೆಯಿತು ಎಂದು ನಮಗೆ ತಿಳಿದಿಲ್ಲ” ಎಂದು ಸುರೇಶ್ ಶಾ ಹೇಳಿದರು.
ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಸಾಕಷ್ಟು ಪೊಲೀಸ್ ಪಡೆಯನ್ನು ಕರೆಸಲಾಗಿದೆ ಎಂದು ಎಸ್ಡಿಪಿಒ ಪ್ರಾಂಜಲ್ ಹೇಳಿದ್ದಾರೆ. “ಹೆದ್ದಾರಿಯನ್ನು ಈಗ ತೆರವುಗೊಳಿಸಲಾಗಿದೆ. ಜನರು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಪ್ರಕರಣದಲ್ಲಿ, ಎಫ್ಐಆರ್ ದಾಖಲಿಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು