ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್‌ನಲ್ಲಿ ಸುಭಾಷ್ ಚಂದ್ರ ಬೋಸ್ (Central Vista) ಅವರ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ. ಏಕಶಿಲೆಯ ಗ್ರಾನೈಟ್‌ನಲ್ಲಿ ನೇತಾಜಿ ಅವರ ೨೮ ಅಡಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಇದನ್ನು ಕೆತ್ತಲು ಶಿಲ್ಪಿಗಳು ೨೬ ಸಾವಿರ ಗಂಟೆ ವ್ಯಯಿಸಿದ್ದಾರೆ.
ಸೆಂಟ್ರಲ್ ವಿಸ್ಟಾ ಯೋಜನೆಯಡಿ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿ ಭವನದವರೆಗಿನ ರಾಜಪಥ (ಕರ್ತವ್ಯ ಪಥ) ವ್ಯಾಪ್ತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಇಂಡಿಯಾ ಗೇಟ್‌ನಲ್ಲಿ ೨೮ ಅಡಿ ಎತ್ತರದ, 65 ಮೆಟ್ರಿಕ್ ಟನ್‌ನ ಪ್ರತಿಮೆ ಅಳವಡಿಸಲಾಗಿದೆ. ಆಧುನಿಕ ಉಪಕರಣಗಳನ್ನು ಬಳಸಿ ಶಿಲ್ಪಿಗಳು ಸಾಂಪ್ರದಾಯಿಕ ಶೈಲಿಯಲ್ಲಿಯೇ ಮೂರ್ತಿಯನ್ನು ಕೆತ್ತಿದ್ದಾರೆ. ಇದಕ್ಕೆ ಮೋದಿ ಅವರು ವಿಧ್ಯುಕ್ತ ಚಾಲನೆ ನೀಡಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮದಿನದ ಹಿನ್ನೆಲೆಯಲ್ಲಿ ಜನವರಿ ೨೩ರ ಪರಾಕ್ರಮ ದಿವಸದಂದು ನೇತಾಜಿಯವರ “ಹಾಲೋಗ್ರಾಂ ಪ್ರತಿಮೆ”ಯನ್ನು ಮೋದಿ ಅನಾವರಣಗೊಳಿಸಿದ್ದರು. ಈಗ ಇದೇ ಜಾಗದಲ್ಲಿ ನೇತಾಜಿ ಅವರ ನೈಜ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ.
ಇದನ್ನೂ ಓದಿ | Rajpath | ಬ್ರಿಟಿಷರ ಕಾಲದ ಹೆಸರಿಗೆ ವಿದಾಯ, ರಾಜಪಥದ ಹೆಸರು ಬದಲಿಸಲು ತೀರ್ಮಾನ, ಏನದು ಹೊಸ ಹೆಸರು?