Site icon Vistara News

Indian Science Congress | ನಾಳೆ ಭಾರತೀಯ ವಿಜ್ಞಾನ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

PM Narendra Modi @ Indian National Congress

ನವದೆಹಲಿ: ಜನವರಿ 3ರಂದು ನಾಗ್ಪುರದ ರಾಷ್ಟ್ರಸಂತ ತುಕಡೋಜಿ ಮಹಾರಾಜ ನಾಗ್ಪುರ ವಿಶ್ವವಿದ್ಯಾಲಯ(RTMNU)ದಲ್ಲಿ 108ನೇ ಭಾರತೀಯ ವಿಜ್ಞಾನ ಸಮಾವೇಶ(Indian Science Congress) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 9.30ಕ್ಕೆ ವರ್ಚುವಲ್ ಆಗಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ತಾಂತ್ರಿಕ ಸಂಕಿರಣಗಳನ್ನು 14 ವಿಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ವಿವಿಯ ಮಹಾತ್ಮ ಜ್ಯೋತಿಬಾ ಪುಲೆ ಎಜುಕೇಷನಲ್ ಕ್ಯಾಂಪಸ್‌ನ ವಿವಿಧ ಸ್ಥಳಗಳಲ್ಲಿ ಸಮಾನಾಂತರವಾಗಿ ಸಂಕಿರಣಗಳು ನಡೆಯಲಿವೆ. ಮಹಿಳಾ ಸಬಲೀಕರಣದ ಜತೆಗೆ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಆಶಯದೊಂದಿಗೆ ಈ ಬಾರಿಯ ಭಾರತೀಯ ವಿಜ್ಞಾನ ಸಮಾವೇಶವನ್ನು ಆಯೋಜಿಸಲಾಗಿದೆ.

ಟೆಕ್ನಿಕಲ್ ವಿಚಾರ ಸಂಕಿರಣಗಳ ಹೊರತಾಗಿಯೂ ಈ ಸಮಾವೇಶದಲ್ಲಿ ಮಹಿಳಾ ವಿಜ್ಞಾನ ಸಮಾವೇಶ, ರೈತ ವಿಜ್ಞಾನ ಸಮಾವೇಶ, ಮಕ್ಕಳ ವಿಜ್ಞಾನ ಸಮಾವೇಶ, ಬುಡಕಟ್ಟು ಸಂವಾದ, ವಿಜ್ಞಾನ ಮತ್ತು ಸಮಾಜ ಮತ್ತು ವಿಜ್ಞಾನ ಸಂವಹನ ಸಂವಾದ ಸೇರಿದಂತೆ ಅನೇಕ ಕಾರ್ಯಕ್ರಮಗಳು ಇರಲಿವೆ. ನೊಬೆಲ್ ವಿಜೇತರು, ಭಾರತ ಹಾಗೂ ವಿದೇಶಿ ಸಂಶೋಧಕರು, ಬಾಹ್ಯಾಕಾಶ, ರಕ್ಷಣೆ, ಐಟಿ ಮತ್ತು ವೈದ್ಯಕೀಯ ಸಂಶೋಧನಾ ಸೇರಿದಂತೆ ವಿವಿಧ ಕ್ಷೇತ್ರದ ತಜ್ಞರು ಮತ್ತು ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | Ozone day | ಸದ್ಯದ ತುರ್ತು ಹೊಣೆ, ಓಝೋನ್ ರಕ್ಷಣೆ

Exit mobile version