Site icon Vistara News

Narendra Modi: ಮೋದಿ ಕಾಲಿಗೆ ನಮಸ್ಕರಿಸಿ ತಮ್ಮ ದೇಶಕ್ಕೆ ಸ್ವಾಗತಿಸಿದ ಪಪುವಾ ನ್ಯೂಗಿನಿಯಾ ಪ್ರಧಾನಿ; ಇಲ್ಲಿದೆ ವಿಡಿಯೊ

Narendra Modi

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಯಾವುದೇ ದೇಶಕ್ಕೆ ಹೋಗಲಿ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಅನಿವಾಸಿ ಭಾರತೀಯರು ಸೇರಿ ಆ ದೇಶದ ನಾಗರಿಕರು ಕೂಡ ಮೋದಿ (Narendra Modi) ಅವರನ್ನು ಸ್ವಾಗತಿಸಲು ಸಜ್ಜಾಗಿರುತ್ತಾರೆ. ಜಾಗತಿಕ ನಾಯಕರು ಕೂಡ ಮೋದಿ ಅವರಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೇ ನರೇಂದ್ರ ಮೋದಿ ಅವರಿಂದ ಆಟೋಗ್ರಾಫ್‌ ಪಡೆದಿರುವ ಉದಾಹರಣೆಯೂ ಇದೆ. ಇದರ ಬೆನ್ನಲ್ಲೇ, ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್‌ ಮರಾಪೆ ಅವರು ನರೇಂದ್ರ ಮೋದಿ ಅವರ ಕಾಲಿಗೆ ನಮಸ್ಕರಿಸಿ, ತಮ್ಮ ದೇಶಕ್ಕೆ ಸ್ವಾಗತಿಸಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಪಪುವಾ ನ್ಯೂಗಿನಿಯಾದಲ್ಲಿ ಮೇ 22ರಂದು ಇಂಡಿಯಾ-ಪೆಸಿಫಿಕ್‌ ಐಲ್ಯಾಂಡ್ಸ್‌ ಕೋಪರೇಷನ್‌ (FIPIC) ಸಭೆ ನಡೆಯಲಿದೆ. ಇದಕ್ಕಾಗಿ ಮೋದಿ ಅವರು ಪಪುವಾ ನ್ಯೂಗಿನಿಯಾಗೆ ತೆರಳಿದ್ದಾರೆ. ಮೋದಿ ಅವರು ತಮ್ಮ ದೇಶಕ್ಕೆ ಆಗಮಿಸುತ್ತಲೇ ಅವರನ್ನು ತಬ್ಬಿಕೊಂಡು ಜೇಮ್ಸ್‌ ಮರಾಪೆ ಸ್ವಾಗತಿಸಿದರು. ಇದೇ ವೇಳೆ, ಮೋದಿ ಕಾಲು ಮುಟ್ಟಿ ಅವರು ನಮಸ್ಕರಿಸಿದರು. ಭಾರತದಲ್ಲಿ ಹಿರಿಯರಿಗೆ ನಮಸ್ಕರಿಸಿ ಗೌರವ ಸಲ್ಲಿಸುವ ಪದ್ಧತಿ ಇದೆ. ಇದನ್ನೇ ಜೇಮ್ಸ್‌ ಅವರು ಕೂಡ ಅನುಸರಿಸಿದರು.

ಇಲ್ಲಿದೆ ವಿಡಿಯೊ

ಪಪುವಾ ನ್ಯೂಗಿನಿಯಾಗೆ ತೆರಳುವ ಮೂಲಕ ನರೇಂದ್ರ ಮೋದಿ ಹೊಸ ದಾಖಲೆ ಸೃಷ್ಟಿಸಿದರು. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಪಪುವಾ ನ್ಯೂಗಿನಿಯಾಗೆ ತೆರಳಿದ್ದಾರೆ. ಇದು ಕೂಡ ಮೋದಿ ಅವರಿಗೆ ವಿಶೇಷ ಗೌರವ ನೀಡಲು ಕಾರಣವಾಗಿದೆ. ಜಿ-7 ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಅವರು ಜಪಾನ್‌ನಲ್ಲಿದ್ದಾಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಮೋದಿ ಆಟೋಗ್ರಾಫ್‌ ತೆಗೆದುಕೊಂಡಿದ್ದು ಕೂಡ ಸುದ್ದಿಯಾಗಿದೆ.

ಇದನ್ನೂ ಓದಿ: G7 Summit: ಪ್ರಧಾನಿ ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!

ಜಿ7 ಶೃಂಗಸಭೆಯ ವೇಳೆ ಅಧ್ಯಕ್ಷ ಜೋ ಬಿಡನ್ ಅವರು ಪ್ರಧಾನಿ ಮೋದಿಯವರ ಬಳಿಗೆ ಬಂದು ಭಾರತದ ಪ್ರಧಾನ ಮಂತ್ರಿಯ ಕಾರ್ಯಕ್ರಮಕ್ಕೆ ಹಾಜರಾಗಲು ಪ್ರಮುಖ ನಾಗರಿಕರಿಂದ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ, ಸಿಡ್ನಿಯಲ್ಲಿ ಸಮುದಾಯ ಸ್ವಾಗತಕ್ಕಾಗಿ 20,000 ಸಾಮರ್ಥ್ಯವಿದೆ. ಆದರೆ, ಹಾಜರಾಗಲು ಬರುತ್ತಿರುವ ವಿನಂತಿಗಳನ್ನು ಈ ಸಾಮರ್ಥ್ಯಕ್ಕೆ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದೇ ವೇಳೆ, 90 ಸಾವಿರ ಆಸನ ವ್ಯವಸ್ಥೆ ಇರುವ ಭಾರತದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ ವಿಜಯಯಾತ್ರೆಯಲ್ಲಿ ಹೇಗೆ ಅವರನ್ನು ಜನರು ಸ್ವಾಗತಿಸಿದರು ಎಂಬುದನ್ನು ನೆನಪಿಸಿಕೊಂಡರು.

Exit mobile version