ಲಂಡನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಕೊನೆಗೂ ತಮ್ಮ ಮಗಳ ಫೋಟೊವನ್ನು ರಿವೀಲ್ ಮಾಡಿದ್ದಾರೆ. ಬ್ರಿಟನ್ ಮಾಸಪತ್ರಿಕೆ ವೋಗ್ಗೆ (Vogue Magazine) ಮಗಳ ಜತೆಗಿರುವ ಫೋಟೊವನ್ನು ಪ್ರಿಯಾಂಕಾ ಚೋಪ್ರಾ ನೀಡಿದ್ದಾರೆ. ಫೋಟೊವನ್ನು ಚೋಪ್ರಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ.
ಕಳೆದ ವರ್ಷದ ಜನವರಿಯಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ ಅವರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದೇವೆ ಎಂದು ಘೋಷಿಸಿದ್ದರು. ಮಗಳಿಗೆ ಅವರು ಮಾಲತಿ ಮೇರಿ ಚೋಪ್ರಾ ಜೋನಸ್ ಎಂದು ನಾಮಕರಣ ಮಾಡಿದ್ದಾರೆ. ಆದರೆ, ಇದುವರೆಗೆ ಅವರು ಮಗಳ ಫೋಟೊವನ್ನು ಸಾರ್ವಜನಿಕವಾಗಿ ರಿವೀಲ್ ಮಾಡಿರಲಿಲ್ಲ. ಈಗ ಬ್ರಿಟನ್ ಮ್ಯಾಗಜಿನ್ಗೆ ಅವರು ಮಗಳ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೊದಲ್ಲೂ ಮಗಳ ಮುಖ ಕಾಣಿಸಿಲ್ಲ.
“ಸರೋಗಸಿ ಮೂಲಕ 28 ತಿಂಗಳಿಗೇ ಮಾಲತಿ ಹುಟ್ಟಿದಳು. ಆಗ ಅವಳು ಹಲವು ಸಮಸ್ಯೆ ಎದುರಿಸಿದಳು. ಆದರೂ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವುದು ಹಿತವಾದ ಅನುಭವ. ಅವಳು ಬಂದ ಮೇಲೆ ನಮಗೆ ಹೊಸ ಜೀವನ ಆರಂಭವಾದಂತಾಗಿದೆ” ಎಂಬುದು ಸೇರಿ ಹಲವು ವಿಷಯಗಳನ್ನು ವೋಗ್ ಜತೆ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ 2018ರಲ್ಲಿ ಮದುವೆಯಾಗಿದ್ದಾರೆ.
ಇದನ್ನೂ ಓದಿ | Priyanka Chopra | ತಾಯ್ನಾಡಿಗೆ ಬರುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ: ಕುತೂಹಲ ಹೆಚ್ಚಾಯ್ತು ಅಂದ್ರು ಪಿಗ್ಗಿ ಫ್ಯಾನ್ಸ್!