ಮುಂಬೈ: ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2023-24ನೇ ಸಾಲಿನ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರಿ ಲಾಭ ಗಳಿಸಿವೆ. 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ (Public Sector Banks) ಲಾಭವು ಶೇ.31ರಷ್ಟು ಅಂದರೆ 33,643 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ (Quarter 2) ಲಾಭದ ಪ್ರಮಾಣವು 25,684 ಕೋಟಿ ರೂ. ಇತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಟಾಪ್
ಅತಿ ಹೆಚ್ಚು ಲಾಭ ಗಳಿಕೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಗ್ರಸ್ಥಾನಿಯಾಗಿದೆ. ಪಿಎನ್‌ಬಿಯ ನಿವ್ವಳ ಲಾಭವು 1,756 ಕೋಟಿ ರೂ. ಆಗಿದ್ದು, 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಇದರ ಲಾಭದ ಪ್ರಮಾಣವು ಶೇ.327ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ನಿವ್ಹಳ ಲಾಭವು 411 ಕೋಟಿ ರೂ. ಇತ್ತು. ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಲಾಭವು 1,255 ಕೋಟಿ ರೂ. ಇದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಲಾಭದ ಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಲಾಭದ ಪ್ರಮಾಣವು ಶೇ.90ರಷ್ಟು ಏರಿಕೆಯಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭವು 605 ಕೋಟಿ ರೂ. ಇದೆ. ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಲಾಭದ ಪ್ರಮಾಣವೂ ಶೇ.90ರಷ್ಟು ಏರಿಕೆಯಾಗಿದ್ದು, ನಿವ್ವಳ ಲಾಭವು 3,511ಕ್ಕೆ ಏರಿಕೆಯಾಗಿದೆ.
ಹಾಗೆಯೇ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಲಾಭವು ಶೇ.72ರಷ್ಟು ಏರಿಕೆಯಾಗಿದ್ದು, 920 ಕೋಟಿ ರೂ. ಲಾಭವಾಗಿದೆ. ಇಂಡಿಯನ್ ಬ್ಯಾಂಕ್ ಲಾಭವು ಶೇ.62.2ರಷ್ಟು ಏರಿಕೆಯಾಗಿದ್ದು, 1,988 ಕೋಟಿ ರೂ. ನಿವ್ವಳ ಲಾಭವಾಗಿದೆ. ಬ್ಯಾಂಕ್ ಆಫ್ ಇಂಡಿಯಾ ಲಾಭ ಶೇ.52ರಷ್ಟು ಏರಿಕೆಯಾಗಿದ್ದು, 1,458 ಕೋಟಿ ರೂ. ನಿವ್ವಳ ಲಾಭವಾಗಿದೆ.
ಇದನ್ನೂ ಓದಿ: Privatisation | ಸಾರ್ವಜನಿಕ ವಲಯದ 8 ರಸಗೊಬ್ಬರ ಕಂಪನಿಗಳ ಖಾಸಗೀಕರಣಕ್ಕೆ ಬ್ರೇಕ್
ಕೆನರಾ ಬ್ಯಾಂಕ್ ಲಾಭವು ಶೇ.43ರಷ್ಟು ಏರಿಕೆಯಾಗಿದೆ. ನಿವ್ವಳ ಲಾಭವು 3,606 ಕೋಟಿ ರೂ. ಆಗಿದೆ. ಬ್ಯಾಂಕ್ ಆಫ್ ಬರೋಡಾ ಲಾಭದ ಪ್ರಮಾಣ ಶೇ.28.37ರಷ್ಟು ಜಾಸ್ತಿಯಾಗಿದ್ದು, 4,253 ಕೋಟಿ ರೂ. ನಿವ್ವಳ ಲಾಭವಾಗಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಲಾಭ ಶೇ.24.75ರಷ್ಟು ಆಗಿದೆ. ನಿವ್ವಳ ಲಾಭ 625 ಕೋಟಿ ರೂ. ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಾಭ ಶೇ.8.02ರಷ್ಟು ಏರಿಕೆಯಾಗಿದ್ದು, ನಿವ್ವಳವಾಗಿ 14,330 ಕೋಟಿ ರೂ. ಲಾಭ ಗಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ