ನವದೆಹಲಿ: ಲಡಾಕ್ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ, ಆಕ್ರಮಣಕಾರಿ ನೀತಿಗಳ ಮೂಲಕ ಉಪಟಳ ಮಾಡುವ ಚೀನಾಗೆ ತಿರುಗೇಟು ನೀಡಲು ಭಾರತವು ದೇಶೀಯವಾಗಿಯೇ ಪ್ರಾಜೆಕ್ಟ್ ಜೋರಾವರ್ (Project Zorawar) ಯೋಜನೆ ಅಡಿಯಲ್ಲಿ ಲಘು ಯುದ್ಧ ಟ್ಯಾಂಕ್‌ಗಳನ್ನು (Light Tanks) ನಿರ್ಮಿಸಲಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (DRDO) ಹಾಗೂ ಖಾಸಗಿ ಕಂಪನಿಯಾದ ಎಲ್ & ಟಿ ಜಂಟಿಯಾಗಿ ಯುದ್ಧ ಟ್ಯಾಂಕ್‌ಗಳನ್ನು ತಯಾರಿಸಿದ್ದು, ಇವುಗಳ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ.
“ಯುದ್ಧ ಟ್ಯಾಂಕ್‌ಗಳ ಕಾರ್ಯಚಟುವಟಿಕೆಯನ್ನು ನೋಡುವುದೇ ನಮಗೆ ಸಂತಸದ ಸಂಗತಿಯಾಗಿದೆ. ಯುದ್ಧ ಟ್ಯಾಂಕ್‌ಗಳು ನಮಗೆ ಹೆಮ್ಮೆ ಎನಿಸುತ್ತವೆ. ಕೇವಲ ಎರಡೂವರೆ ವರ್ಷಗಳಲ್ಲಿಯೇ ಯುದ್ಧ ಟ್ಯಾಂಕ್‌ಗಳನ್ನು ದೇಶೀಯವಾಗಿಯೇ ತಯಾರಿಸಲಾಗಿದೆ. ಮೊದಲ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದು, ಆರು ತಿಂಗಳವರೆಗೆ ಪ್ರಯೋಗ ನಡೆಸಲಾಗುತ್ತದೆ. ಇದಾದ ನಂತರ ಸೇನೆಯಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ” ಎಂಬುದಾಗಿ ಡಿಆರ್‌ಡಿಒ ಮುಖ್ಯಸ್ಥ ಡಾ. ಸಮೀರ್ ವಿ. ಕಾಮತ್ ಮಾಹಿತಿ ನೀಡಿದರು.
#WATCH | Exclusive footage of the light tank Zorawar developed jointly by DRDO and Larsen and Toubro. The tank project being developed for the Indian Army was reviewed by DRDO chief Dr Samir V Kamat in Hazira, Gujarat today. The tank has been developed by the DRDO to meet the… pic.twitter.com/bkJHdWkoWo
— ANI (@ANI) July 6, 2024
ಜೋರಾವರ್ ಟ್ಯಾಂಕ್‌ಗಳ ವೈಶಿಷ್ಟ್ಯವೇನು?
- ಮಿಲಿಟರಿ ಜನರಲ್ ಆಗಿದ್ದ ಜೋರಾವರ್ ಸಿಂಗ್ ಅವರ ಸ್ಮರಣಾರ್ಥ ಯುದ್ಧ ಟ್ಯಾಂಕ್‌ಗಳನ್ನು ತಯಾರಿಸುವ ಯೋಜನೆಗೆ ಪ್ರಾಜೆಕ್ಟ್ ಜೋರಾವರ್ ಎಂದು ಹೆಸರಿಸಲಾಗಿದೆ
- 2027ರ ವೇಳೆಗೆ ಯುದ್ಧ ಟ್ಯಾಂಕ್‌ಗಳನ್ನು ಭಾರತೀಯ ಸೇನೆಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
- ಲಡಾಕ್ ಗಡಿಯಲ್ಲಿ, ಅದರಲ್ಲೂ ಎತ್ತರದ ಪ್ರದೇಶಗಳಲ್ಲಿ ಯುದ್ಧ ಟ್ಯಾಂಕ್‌ಗಳನ್ನು ನಿಯೋಜಿಸಿ, ಚೀನಾಗೆ ಸೆಡ್ಡು ಹೊಡೆಯುವ ದಿಸೆಯಲ್ಲಿ ಇವುಗಳನ್ನು ತಯಾರಿಸಲಾಗಿದೆ
- ಟಿ-72 ಹಾಗೂ ಟಿ-90 ಯುದ್ಧ ಟ್ಯಾಂಕ್ಗಳಿಗಿಂತ ಸುಲಭವಾಗಿ ಇವು ಗುಡ್ಡಗಾಡು ಪ್ರದೇಶಗಳನ್ನು ಹತ್ತುವ, ನದಿಗಳನ್ನು ದಾಟುತ್ತವೆ
- ಲಘು ಕ್ಷಿಪಣಿಗಳನ್ನು ಉಡಾವಣೆ ಮಾಡುವ, ಡ್ರೋನ್ಗಳನ್ನು ಹೊಡೆದುರುಳಿಸುವ, ಶತ್ರುಗಳ ಚಲನವಲನಗಳ ಕುರಿತು ಎಚ್ಚರಿಕೆ ನೀಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ
- ಇವುಗಳು 25 ಟನ್ ತೂಕಗಳಿರುವ ಕಾರಣ ಬೆಟ್ಟ-ಗುಡ್ಡಗಳನ್ನು ಸುಲಭವಾಗಿ ಹತ್ತುತ್ತವೆ. ಟಿ-90 ಯುದ್ಧ ಟ್ಯಾಂಕ್ಗಳಿಗಿಂತ ಅರ್ಧದಷ್ಟು ತೂಕ ಹೊಂದಿವೆ
- ಆರಂಭದಲ್ಲಿ 59 ಯುದ್ಧ ಟ್ಯಾಂಕ್‌ಗಳನ್ನು ಸೇನೆಗೆ ಅಳವಡಿಸಲಾಗುತ್ತದೆ. ನಂತರದಲ್ಲಿ 354 ಯುದ್ಧ ಟ್ಯಾಂಕ್‌ಗಳನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ
ಇದನ್ನೂ ಓದಿ: Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ