ಭುವನೇಶ್ವರ: ಜಗತ್ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಎರಡು ದಿನ ವಾರ್ಷಿಕ ರಥಯಾತ್ರೆ (Puri Jagannath Yatra) ಇಂದಿನಿಂದ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಬರೋಬ್ಬರಿ 53 ವರ್ಷಗಳ ನಂತರ ಜಗತ್ಪ್ರಸಿದ್ಧ ಜಗನ್ನಾಥನ ವಾರ್ಷಿಕ ರಥಯಾತ್ರೆ ನಡೆಯುತ್ತಿದೆ.
ಇನ್ನು ಪ್ರಸಿದ್ಧ ಜಗನ್ನಾಥ ದೇಗುಲದ ವಾರ್ಷಿಕ ರಥಯಾತ್ರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದು,, ಅವರು ಲಕ್ಷಾಂತರ ಭಕ್ತರೊಂದಿಗೆ ಈ ರಥಯಾತ್ರೆಯನ್ನು ವೀಕ್ಷಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದ್ದು, ಸಾಮಾನ್ಯವಾಗಿ ಒಂದೇ ದಿನದಲ್ಲಿ ನಡೆಯುವ ಯಾತ್ರೆಯನ್ನು ಸುಗಮವಾಗಿ ನಡೆಸಲು ಒಡಿಶಾ ಸರ್ಕಾರ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#InPics | Rath Yatra 2024: President Droupadi Murmu offers prayers to the Holy Trinity in front of the chariots
— OTV (@otvnews) July 7, 2024
(Pic Credit: Rakesh Roul)#RathaJatra #RathYatra2024 #RathYatraWithOTV #Odisha pic.twitter.com/AesVxyhVGH
ಜಗನ್ನಾಥ ದೇವಾಲಯದ ಮೂರು ದೇವರುಗಳಾದ ಜಗನ್ನಾಥ, ಬಲರಾಮ್ ಮತ್ತು ಸುಭದ್ರಾ ಮೂರು ವಿಭಿನ್ನ ರಥಗಳಲ್ಲಿ ಸವಾರಿ ಮಾಡುತ್ತಾರೆ. ಈ ಕಾರಣಕ್ಕಾಗಿ ರಥಯಾತ್ರೆಯನ್ನು ರಥೋತ್ಸವ ಎಂದು ಕರೆಯುತ್ತಾರೆ. ಅವರ ವಿಭಿನ್ನ ರಥಗಳನ್ನು ನಂದಿಘೋಷ, ತಾಳಧ್ವಜ ಮತ್ತು ದೇವದಳನ ಎಂದು ಕರೆಯಲಾಗುತ್ತದೆ. ಭಗವಾನ್ ಜಗನ್ನಾಥನ ನಂದಿಘೋಷ ರಥವು ಹದಿನೆಂಟು ಚಕ್ರಗಳನ್ನು ಹೊಂದಿದೆ. ಭಗವಾನ್ ಬಲರಾಮನ ತಾಳಧ್ವಜ ರಥವು ಹದಿನಾರು ಚಕ್ರಗಳನ್ನು ಹೊಂದಿದೆ ಮತ್ತು ಸುಭದ್ರೆಯ ಪದ್ಮಧ್ವಜ ರಥವು ಹದಿನಾಲ್ಕು ಚಕ್ರಗಳನ್ನು ಹೊಂದಿದೆ.
Odisha Police using AI-Powered Technology First Time for #RathYatra Traffic Management .IG Drones has partnered with Odisha based Leading Drone Techa and AI company IG Drones backed by StartUp #Odisha. #JagannathRathYatra #jagannathpuri #ArtificialIntelligence pic.twitter.com/G70M8ztSzl
— Manish Prasad (@manishindiatv) July 7, 2024
ಗ್ರಹಗಳು ಮತ್ತು ನಕ್ಷತ್ರಪುಂಜಗಳ ಲೆಕ್ಕಾಚಾರದ ಪ್ರಕಾರ, ಈ ವರ್ಷ ಎರಡು ದಿನಗಳ ರಥಯಾತ್ರೆಗಳನ್ನು ಆಯೋಜಿಸಲಾಗಿದೆ ಎಂದು ತಜ್ಞರು ಹೇಳುತ್ತಾರೆ, ಆದರೆ ಈ ಹಿಂದೆ 1971 ರಲ್ಲಿ ಎರಡು ದಿನಗಳ ರಥಯಾತ್ರೆಯನ್ನು ಆಯೋಜಿಸಲಾಗಿತ್ತು. ಸಂಪ್ರದಾಯಕ್ಕೆ ಹೊರತಾಗಿ, ಮೂರು ಸಹೋದರ-ಸಹೋದರಿ ದೇವತೆಗಳಾದ ಭಗವಾನ್ ಶ್ರೀಕೃಷ್ಣ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರ ದೇವರಿಗೆ ಸಹ ಇಂದು ಭಾನುವಾರದಂದು ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಗಿದೆ.
#WATCH | Large number of devotees gather in Odisha's Puri to take the darshan of Lord Jagannath as the two-day Lord Jagannath Rath Yatra to commence today. pic.twitter.com/C1qFOnLn6e
— ANI (@ANI) July 7, 2024
ಇದನ್ನೂ ಓದಿ: Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ