ನವ ದೆಹಲಿ: ಮೇಕ್ ಇನ್ ಇಂಡಿಯಾಕ್ಕೆ ( Make in India) ಮತ್ತೊಂದು ಪುಷ್ಟಿ ಲಭಿಸಿದೆ. ಸ್ವದೇಶಿ ನಿರ್ಮಿತ 4,276 ಕೋಟಿ ರೂ.ಗಳ ರಕ್ಷಣಾ ವಲಯದ ಸಾಧನಗಳನ್ನು ಖರೀದಿಸಲು ರಕ್ಷಣಾ ಖರೀದಿ ಮಂಡಳಿ (DAC) ಅನುಮೋದನೆ ನೀಡಿದೆ.
ಹೆಲಿನಾ (HELINA) Anti Tank Guided Missilȩş, VSHORAD ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್ ಕ್ರೂಸ್ ಮಿಸೈಲ್ ಲಾಂಚರ್, ಯುದ್ಧ ನೌಕೆಗೆ ಅಗತ್ಯವಿರುವ ಫೈರ್ ಕಂಟ್ರೋಲ್ ಸಿಸ್ಟಮ್ ಅನ್ನು ಖರೀದಿಸಲು 4,276 ಕೋಟಿ ರೂ. ಬಳಕೆಯಾಗಲಿದೆ. ಇವೆಲ್ಲವೂ ಸ್ವದೇಶಿ ನಿರ್ಮಿತ ಸಾಧನಗಳಾಗಿವೆ.
ಶತ್ರುಗಳ ಯುದ್ಧ ನೌಕೆಗಳನ್ನು ಧ್ವಂಸಗೊಳಿಸಲು, ಕ್ಷಿಪಣಿಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಇವುಗಳು ಹೊಂದಿವೆ.