Site icon Vistara News

ಉತ್ತರ ಪ್ರದೇಶದ ಬಾಲಕಿ ಮೈಮೇಲೆ ಮೂಡುತ್ತಿವೆ ‘ರಾಧೆ’, ‘ರಾಮ್’ ಹೆಸರು! ಇದನ್ನು ಕಂಡು ವೈದ್ಯರಿಗೂ ಶಾಕ್!

Radhe and Ram words on body of 8 year old girl in Uttar Pradesh

ನವದೆಹಲಿ: ಉತ್ತರ ಪ್ರದೇಶದ (Uttar Pradesh) 8 ವರ್ಷದ ಬಾಲಕಿಯೊಬ್ಬಳು ದಿಢೀರ್‌ನೇ ವಿಚಿತ್ರ ಕಾರಣಕ್ಕೆ ಪ್ರಸಿದ್ಧಿಯಾಗುತ್ತಿದ್ದಾಳೆ. ಈ ಬಾಲಕಿಯ ಮೈ ಮೇಲೆ ಹಿಂದಿ ಭಾಷೆಯಲ್ಲಿ ರಾಧೆ (Radhe) ಮತ್ತು ರಾಮ್ (Ram) ಹೆಸರು ಮೂಡುತ್ತಿವೆ! ಹೌದು, ನಂಬಲು ಅಸಾಧ್ಯವಾದರೂ ಇದು ಸತ್ಯ. ಬಾಲಕಿಯ ಮೈ ಮೇಲೆ ಮೂಡತ್ತಿರುವ ಈ ಹೆಸರಿನ ಭಾವ ಚಿತ್ರಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಉತ್ತರ ಪ್ರದೇಶದ ಹರ್ದೋಯ್‌ನ 8 ವರ್ಷದ ಸಾಕ್ಷಿ (Girl Sakshi) ಎಂಬ ಬಾಲಕಿಯೇ ಈ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಕೆಲವರು ಇದನ್ನು ಪವಾಡ ಎಂದು ಹೇಳುತ್ತಿದ್ದಾರೆ. ಉಳಿದವರು ಕೌತುಕ ಎಂದು ಬಣ್ಣಿಸುತ್ತಿದ್ದಾರೆ(Viral News).

ಸಾಕ್ಷಿಯ ಮೈ ಮೈಲೆ ರಾಧೆ ಮತ್ತು ರಾಮ್ ಹೆಸರು ಮೂಡುತ್ತಿರುವುದನ್ನು ಮೊದಲಿಗೆ ಕಂಡ ಬಾಲಕಿಯ ತಂದೆ ವಿಚಲಿತರಾಗಿದ್ದರು. ಕೂಡಲೇ ತಮ್ಮ ಮಗಳನ್ನು ಅವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿನ ವೈದ್ಯರಿಗೆ ಯಾಕೆ ಹೀಗೆ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಹಾಗಾಗಿ, ವೈದ್ಯಕೀಯ ಕಾಲೇಜುಗೆ ಕರೆದಕೊಂಡು ಹೋಗುವಂತೆ ತಿಳಿಸಿದ್ದರು. ವಾಸ್ತವದಲ್ಲಿ ಇದೊಂದು ವೈದ್ಯಲೋಕಕ್ಕೆ ಇದೊಂದು ಸವಾಲಾಗಿದೆ ಎಂದು ಅವರು ಹೇಳಿದ್ದರು. ಹಿಂದಿ ಭಾಷೆಯಲ್ಲಿ ರಾಧೆ ಮತ್ತು ರಾಮ್ ಹೆಸರು ಮಾತ್ರ ಮೂಡಿ ಬರಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಬಾಲಕಿಯ ತಂದೆ ದೇವೇಂದ್ರ ಶಾಹಿಜಾನ್ ಅವರು ಮದೋಗಂಜ್‌ನಲ್ಲಿ ವಾಸವಾಗಿದ್ದಾರೆ. ಕೆಲವು ದಿನಗಳ ಹಿಂದೆ ಮಗಳ ಮೇಲೆ ಈ ರೀತಿಯಾಗಿ ಅಕ್ಷರಗಳು ಮೂಡಲಾರಂಭಿಸಿದವು. ಮೊದಲಿಗೆ ನಮಗೆ ಅಚ್ಚರಿಯಾಯಿತು. ಬಳಿಕ ಕೂಡಲೇ ಆಸ್ಪತ್ರೆಗೆ ಸೇರಿಸಿದೆವು. ಆದರೆ, ವೈದ್ಯರು ಯಾವುದೇ ಪರಿಹಾರವನ್ನು ಸೂಚಿಸಲಿಲ್ಲ. ಬದಲಿಗೆ ಅವರೂ ಅಚ್ಚರಿ ಪಟ್ಟರು ಎಂದು ಬಾಲಕಿಯ ತಂದೆ ದೇವೇಂದ್ರ ಹೇಳಿದ್ದಾರೆ. ಆದರೆ, ತಮ್ಮ ಮಗಳು ಬಹಳ ದೈವಭಕ್ತೆ. ದೇವರನ್ನು ಪೂಜೆಸುತ್ತಿದ್ದಳು. ಅದೇ ಕಾರಣಕ್ಕೆ ದೇವರ ಹೆಸರು ಆಕೆಯ ದೇಹದ ಮೇಲೆ ಮೂಡುತ್ತಿರಬಹುದು ಎನ್ನುತ್ತಾರೆ ಅವರು.

ಈ ಸುದ್ದಿಯನ್ನೂ ಓದಿ: ಹೆಣ್ಣು ಕಲಿತರೆ ಗರ್ಭಿಣಿಯಾಗಲು ಗಂಡನಿಗೆ ಅವಕಾಶವೇ ನೀಡಲ್ಲ, ಆದರೆ…! ಬಿಹಾರ ಸಿಎಂ ನಿತೀಶ್ ಎಡವಟ್ಟು!

ಬಾಲಕಿಯ ಅಜ್ಜ ಕೂಡ ಮೊಮ್ಮಗಳಿಗೆ ದೈವ ಭಕ್ತಿ ಹೆಚ್ಚು ಎಂದು ಹೇಳಿದ್ದಾರೆ. ಅದೇ ಕಾರಣಕ್ಕಾಗಿ ಸಾಕ್ಷಿಯ ಮೇಲೆ ದೇವರ ಹೆಸರಗಳು ಮೂಡುತ್ತಿವೆ ಎಂದು ಅವರು ಹೇಳಿಕೊಂಡಿದ್ದಾರೆ. ದೈವ ಭಕ್ತಿಯಿಂದಾಗಿ ಇಂಥ ಪವಾಡಗಳು ಸಂಭವಿಸುತ್ತವೆ ಎಂದು ಬಾಲಕಿಯ ಅಜ್ಜ ಹೇಳಿದ್ದಾರೆ. ಆದರೆ, ಬಾಲಕಿಯ ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ ಮೂಡುತ್ತಿರುವ ಈ ಅಕ್ಷರಗಳ ಹಿಂದಿನ ರಹಸ್ಯ ಮಾತ್ರ ಬಯಲಾಗಿಲ್ಲ. ಅದು ನಿಜವಾಗಿಯೂ ಪವಾಡವೋ ಅಥವಾ ಇನ್ನೇನಾದರೂ ಬೇರೆ ಸಂಗತಿ ಇದೆಯೇ ಎಂಬುದನ್ನು ಪತ್ತೆ ಹಚ್ಚಬೇಕಿದೆ.

ಈ ಸುದ್ದಿಯ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ

Exit mobile version