Site icon Vistara News

ಅಂಬಾನಿ ಭಾವಿ ಸೊಸೆಯ ಅರಂಗೇಟ್ರಂ: ಯಾರು ಈ ರಾಧಿಕಾ ಮರ್ಚಂಟ್?

radhika merchant

ಮುಂಬಯಿ: ಜೂನ್ 5ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಒಂದು ಭರತನಾಟ್ಯ ಆರಂಗೇಟ್ರಂ ನಡೆಯಿತು. ಇದಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದವರು ಉದ್ಯಮಿ ಮುಕೇಶ್‌ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮಗ ಅನಂತ್‌ ಅಂಬಾನಿ.

ಯಾಕೆ ಇವರು ಈ ಕಾರ್ಯಕ್ರಮಕ್ಕೆ ಆಗಮಿಸಿದರು. ಸಿಂಪಲ್.‌ ಆವತ್ತಿನ ಆರಂಗೇಟ್ರಂ ಮಾಡಿದ ಕಲಾವಿದೆಯ ಹೆಸರು ರಾಧಿಕಾ ಮರ್ಚಂಟ್.‌ ಈಕೆ ಅನಂತ್‌ ಅಂಬಾನಿಯ ಭಾವಿ ಪತ್ನಿ.

ಈ ಕಾರ್ಯಕ್ರಮವನ್ನು ಆಯೋಜಿಸಿದ್ದವರು ಸ್ವತಃ ಮುಕೇಶ್‌ ಅಂಬಾನಿ. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಮುಕೇಶ್‌ ಅವರ ಸಹೋದರ ಅನಿಲ್‌ ಅಂಬಾನಿ ಮತ್ತು ಅವರ ಪತ್ನಿ ಹಾಜರಿದ್ದುದು ಹಾಗೂ ಅತಿಥಿಗಳನ್ನು ಸ್ವಾಗತಿಸ್ತಾ ಇದ್ದುದು ಕಂಡುಬಂತು. ಅಮೀರ್‌ ಖಾನ್‌, ಸಲ್ಮಾನ್‌ ಖಾನ್‌, ರಣವೀರ್‌ ಸಿಂಗ್‌ ಸೇರಿದಂತೆ ಬಾಲಿವುಡ್‌ನ ಘಟಾನುಘಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಬಹುಶಃ ಇದು ಸ್ಟಾರ್‌ಗಳಿಂದ ತುಂಬಿ ತುಳುಕಿದ, ಈ ದೇಶದ ಬಹು ದುಬಾರಿ ಆಗಿರಲೂಬಹುದು.‌

ಇದನ್ನೂ ಓದಿ: ವಿಶ್ವದ TOP 10 ಶ್ರೀಮಂತರ ಪಟ್ಟಿ ಔಟ್, ಇದರಲ್ಲಿದ್ದಾರೆ ಇಬ್ಬರು ಭಾರತೀಯರು!

ಯಾರು ಈ ರಾಧಿಕಾ ಮರ್ಚಂಟ್?

ಅಂಬಾನಿ ಅವರ ಕುಟುಂಬ ಸಮಾರಂಭಗಳಲ್ಲಿ ರಾಧಿಕಾ ಮರ್ಚೆಂಟ್ ಆಗಾಗ ಪಾಲ್ಗೊಳ್ಳುವುದು ಕಂಡುಬಂದಿದೆ. ಮುಕೇಶ್‌ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ಭಾವಿ ಪತ್ನಿ ಈಕೆ. ಇವಳು ಶಾಸ್ತ್ರೀಯ ಭರತನಾಟ್ಯ ಕಲಿತಿದ್ದಾಳೆ. ಇವರ ಮೊದಲ ವೇದಿಕೆಯ ನೃತ್ಯ ಪ್ರದರ್ಶನವನ್ನು ಅಂಬಾನಿ ಕುಟುಂಬ ಆಯೋಜಿಸಿತು. ಈವೆಂಟ್‌ನ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆದವು. ಯಾರೀಕೆ ಎಂದು ನೆಟಿಜನ್‌ಗಳು ಆಶ್ಚರ್ಯಪಟ್ಟರು.

ರಾಧಕಾ ಎನ್‌ಕೋರ್ ಹೆಲ್ತ್‌ಕೇರ್ ಸಿಇಒ ಆಗಿರುವ ವೀರೆನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ಈಕೆಗೆ ಅನಂತ್ ಅಂಬಾನಿ ಅವರೊಂದಿಗೆ ನಿಶ್ಚಿತಾರ್ಥ ಆಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. 24 ವರ್ಷದ ರಾಧಿಕಾ, ಅವರ ಭರತನಾಟ್ಯ ಗುರು ಭಾವನಾ ಠಾಕರ್. ಶ್ರೀ ನಿಭಾ ಆರ್ಟ್ಸ್‌ನಲ್ಲಿ ಶಾಸ್ತ್ರೀಯ ನೃತ್ಯ ಕಲಿಕೆ.

ಇದನ್ನೂ ಓದಿ: Reliance Industries: ಭಾರತದ ಮೊದಲ 100 ಬಿಲಿಯನ್‌ ಡಾಲರ್‌ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌

ರಾಧಿಕಾ ಮರ್ಚೆಂಟ್ ಜನಿಸಿದ್ದು ಡಿಸೆಂಬರ್ 18, 1994ರಂದು. ಗುಜರಾತ್ ಮೂಲದವರು. ಮುಂಬೈನ ದಿ ಕ್ಯಾಥೆಡ್ರಲ್, ಜಾನ್ ಕಾನನ್ ಶಾಲೆ ಮತ್ತು ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ. ಬಿ.ಡಿ. ಸೋಮಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಐಬಿ ಡಿಪ್ಲೋಮಾ ಮಾಡಿದ್ದಾರೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪದವಿಯ ನಂತರ ಭಾರತಕ್ಕೆ ಮರಳಿ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಮಾರಾಟ ವೃತ್ತಿಪರರಾಗಿ ಕೆಲಸ ಪ್ರಾರಂಭಿಸಿದರು.

ನೀತಾ ಅಂಬಾನಿ ಮತ್ತು ಅವರ ಮಗಳು ಇಶಾ ಅವರೊಂದಿಗೆ ರಾಧಿಕಾ ಅವರಿಗೆ ಆಪ್ತವಾದ ಸಂಬಂಧ ಇದೆ ಎಂದು ತಿಳಿಯಲಾಗಿದೆ. ಇಶಾ ಅಂಬಾನಿ ಅವರ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಆಕಾಶ್‌ ಅಂಬಾನಿ ಅವರ ಪತ್ನಿ ಶ್ಲೋಕಾ ಮೆಹ್ತಾ ಅವರ ಜೊತೆಗೆ ರಾಧಿಕಾ ಮರ್ಚಂಟ್‌ ಕೂಡ ಡ್ಯಾನ್ಸ್‌ ಪ್ರದರ್ಶನ ನೀಡಿದ್ದರು.

Exit mobile version