Site icon Vistara News

Politics with Meat Cooking: ರಾಹುಲ್ ಗಾಂಧಿ, ಲಾಲು, ಚಂಪಾರಣ್ ಮಟನ್ ಅಡುಗೆ ಮತ್ತು ರಾಜಕಾರಣ!

Rahul Gandhi and Champaran Meat Cooking

ನವದೆಹಲಿ: ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ದಿಲ್ಲಿಯಲ್ಲಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ (RJD Leader Lalu Prasad Yadav) ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ್ದ ವಿಡಿಯೋವನ್ನು (Viral Video) ಕಾಂಗ್ರೆಸ್ (Congress Party) ಈಗ ಬಹಿರಂಗ ಮಾಡಿದೆ. ಈ ವೇಳೆ, ರಾಹುಲ್ ಗಾಂಧಿ ಅವರು ಲಾಲು ಜತೆಗೂಡಿ ಚಂಪಾರಣ್ ಮಟನ್ (Chamaparan Meat Cooking) ಅಡುಗೆ ರೆಡಿ ಮಾಡಿದ್ದಾರೆ ಮತ್ತು ರಾಜಕೀಯ ಕುರಿತು ಮಾತುತೆ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ ಸಂಸತ್ ಅನರ್ಹ ತೆರವುಗೊಳಿಸದ ಕೆಲವೇ ಗಂಟನೆಗಳ ನಂತರ ಅಂದರೆ ಆಗಸ್ಟ್ 4ರಂದು ಈ ಭೇಟಿ ನಡೆದಿತ್ತು ಎಂದು ಕಾಂಗ್ರೆಸ್ ಹೇಳಿಕೊಂಡಿದೆ(Meat Cooking).

ಮಾಂಸವನ್ನು ಬಿಹಾರದಿಂದ ತರಲಾಗಿದೆ ಎಂದು ಲಾಲು ಪ್ರಸಾದ್ ಹೇಳುತ್ತಿದ್ದಂತೆ, ಮಿಸಾ ಭಾರತಿ ಅವರ ಸೂಚನೆಯ ಮೇರೆಗೆ ರಾಹುಲ್ ಗಾಂಧಿ ಮಾಂಸವನ್ನು ಮಸಾಲೆಯಲ್ಲಿ ಅದ್ದಿಟ್ಟರು. ಅಡುಗೆ ಕುರಿತು ನಡೆದ ಈ ಮಾತುಕತೆ ವೇಳೆ, ಲಾಲು ಯಾದವ್ ಅವರಿಗೆ ಥಾಯ್ ಆಹಾರ ಇಷ್ಟ ಎಂಬುದು ಗೊತ್ತಾಗುತ್ತದೆ. ಆಗ ರಾಹುಲ್ ಗಾಂಧಿ ಅವರು, ಪ್ರಿಯಾಂಕಾ ಅವರು ಅತ್ಯುತ್ತಮ ಥಾಯಲ್ ಸಲಾಡ್ ಸೋಮ್ ಟಾಮ್ ಮಾಡುತ್ತಾರೆಂದು ಹೇಳಿದರು. ಲಾಲು ಜಿ ಅವರನ್ನು ನಾನು ತುಂಬಾ ತೀಕ್ಷ್ಣ ವ್ಯಕ್ತಿಯಾಗಿ ಕಾಣುತ್ತೇನೆ. ಲಾಲುಜಿಯವರ ರಾಜಕೀಯ ಚಾಣಾಕ್ಷತೆಯನ್ನು ನಾನು ಗೌರವಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವೇಳೆ ರಾಹುಲ್ ಗಾಂಧಿ ಅವರು, ‘ರಾಜಕೀಯದ ಮಸಾಲೆ’ ಏನು ಎಂದು ರಾಹುಲ್ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಅವರನ್ನು ಪ್ರಶ್ನಿಸಿದರು. ”ಅನ್ಯಾಯದ ವಿರುದ್ಧ ಹೋರಾಡಿ, ಹೋರಾಡುವುದೇ ರಾಜಕೀಯದ ಮಸಾಲೆ” ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಪ್ರಿಯಾಂಕಾಗೆ ಚಂಪಾರಣ್ ಮಟನ್‌ನಲ್ಲಿ ಸ್ವಲ್ಪ ಭಾಗವನ್ನು ತೆಗೆದುಕೊಳ್ಳದಿದ್ದರೆ ನಾನು ತೊಂದರೆ ಎದುರಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳುವುದನ್ನು ಕೇಳಬಹುದು. ರಾಹುಲ್ ಗಾಂಧಿಯವರು ಅಡುಗೆ ಮಾಡಬಲ್ಲರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯುರೋಪಿನಲ್ಲಿ ಏಕಾಂಗಿಯಾಗಿದ್ದಾಗ ಸ್ವಲ್ಪ ಅಡುಗೆ ಕಲಿತಿದ್ದೇನೆ. ಆದರೆ ಅದರಲ್ಲಿ ಪರಿಣತ ಅಲ್ಲ ಎಂದರು.

ಈ ಸುದ್ದಿಯನ್ನೂ ಓದಿ: Rahul Gandhi: ಬೆಲೆ ಏರಿಕೆಯಿಂದಾಗಿ ಕಣ್ಣೀರು ಹಾಕಿದ್ದ ವ್ಯಕ್ತಿ ಜತೆ ರಾಹುಲ್ ಗಾಂಧಿ ಲಂಚ್!

ಅಡುಗೆ ಮತ್ತು ಊಟದ ಜತೆ ಲಾಲು ಹಾಗೂ ರಾಹುಲ್ ಗಾಂಧಿ ಅವರು ರಾಜಕಾರಣದ ಕುರಿತು ಮಾತನಾಡುವುದನ್ನು ನೀವು ಕೇಳಬಹುದು. “ಲಾಲು ಜೀ, 15-20 ವರ್ಷಗಳಿಗೊಮ್ಮೆ ಬಿಜೆಪಿ ದ್ವೇಷವನ್ನು ಹರಡಲು ಕಾರಣವೇನು?” ಎಂದು ರಾಹುಲ್ ಗಾಂಧಿ ಕೇಳಿದರು. “ರಾಜಕೀಯ ಹಸಿವು ಎಂದಿಗೂ ಮುಗಿಯುವುದಿಲ್ಲ,” ಎಂದು ಲಾಲು ಪ್ರಸಾದ್ ಯಾದವ್ ಉತ್ತರಿಸಿದರು.

ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ, ದ್ವೇಷದ ಹರಡುವಿಕೆ ಸೀಮಿತವಾಗಿರುತ್ತದೆ. ಆರ್ಥಿಕ ಸ್ಥಿತಿಯು ಕೆಟ್ಟ ಸ್ಥಿತಿಯಲ್ಲಿದ್ದಾಗ, ಅದು (ದ್ವೇಷದ ಹರಡುವಿಕೆ) ಹೆಚ್ಚಾಗುತ್ತದೆ. ಈಗಿನಂತೆ, ಆರ್ಥಿಕ ಸ್ಥಿತಿಯು ಕೆಟ್ಟದಾಗಿದೆ ಮತ್ತು ದ್ವೇಷವು ಹರಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version