ರಾಯ್‌ಬರೇಲಿ: ಸದಾ ರಾಜಕೀಯದಲ್ಲಿ ಸಕ್ರಿಯರಾಗಿರುವ ಕಾಂಗ್ರೆಸ್ ಮುಖಂಡ(Congress Leader) ರಾಹುಲ್ ಗಾಂಧಿ(Rahul Gandhi) ಇನ್ನೂ ಎಲಿಜಿಬಲ್ ಬ್ಯಾಚುರಲ್ ಆಗಿಯೇ ಉಳಿದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರು ಯಾವಾಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂಬ ಪ್ರಶ್ನೆ ಅವರ ಬೆಂಬಲಿಗರಲ್ಲಿ ಇದ್ದೇ ಇದೆ. ಆದರೂ ಅದ್ಯಾವುದಕ್ಕೂ ತಲೆಗೆಡಿಸಿಕೊಳ್ಳದ ರಾಹುಲ್ ಆ ಬಗ್ಗೆ ಮೌನ ತಳೆದಿದ್ದರು. ಈ ಬಾರಿ ಲೋಕಸಭಾ ಚುನಾವಣೆ(Lok Sabha Election 2024)ಯಲ್ಲಿ ರಾಯ್ ಬರೇಲಿಯಿಂದಲೂ ಕಣಕ್ಕಿಳಿದಿರುವ ರಾಹುಲ್ ಗಾಂಧಿ ಇಂದು ಭಾಗಿಯಾದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.
ರಾಯ್ ಬರೇಲಿಯಲ್ಲಿ ಇಂದು ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಆಪ್ತ ಕೆ.ಎಲ್ ಶರ್ಮಾ ಜೊತೆ ಭಾಗಿಯಾದ ರಾಹುಲ್ ಗಾಂಧಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಭಾಷಣದ ಕೊನೆಯಲ್ಲಿ ಕಾರ್ಯಕರ್ತರು ರಾಹುಲ್ ಗಾಂಧಿಯವರನ್ನು ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಆಗ ವೇದಿಕೆಯಲ್ಲಿದ್ದ ಪ್ರಿಯಾಂಕಾ, ರಾಹುಲ್ ಬಳಿಗೆ ಬಂದು ಸಭಿಕರು ಏನೋ ಕೇಳುತ್ತಿದ್ದಾರೆ ನೋಡಿ ಅಂದಿದ್ದಾರೆ. ತಕ್ಷಣ ರಾಹುಲ್ ಏನು ಎಂದು ಪ್ರಶ್ನಿಸಿದ್ದಾರೆ. ಆಗ ಕಾರ್ಯಕರ್ತರು ನಿಮ್ಮ ಮದುವೆ ಯಾವಾಗ ಎಂದು ಮತ್ತೊಮ್ಮೆ ಕೇಳಿದ್ದಾರೆ. ಆಗ ನಗುತ್ತಾ ಉತ್ತರಿಸಿದ ಅಬ್ ಜಲ್ದೀ ಹೀ ಕರ್ನೀ ಪಡೇಗಿ(ಬೇಗ ಮದುವೆ ಆಗ್ಲೇ ಬೇಕಿದೆ) ಎಂದು ಹೇಳಿದ್ದಾರೆ.
When someone asked about Rahul Gandhi's marriage in a rally in Raebareli, UP.
— Anshuman Sail Nehru (@AnshumanSail) May 13, 2024
See reaction from Priyanka Gandhi. pic.twitter.com/LI1oL0nbLx
ರಾಯ್ ಬರೇಲಿಯಲ್ಲಿ ರಾಹುಲ್ ಭಾವುಕ ಮಾತು
ರಾಯ್‌ಬರೇಲಿಯ ಮಹಾರಾಜ್‌ಗಂಜ್‌ನಲ್ಲಿ ಭಾವನಾತ್ಮಕವಾಗಿ ಮಾತನಾಡಿದ ರಾಹುಲ್ ಗಾಂಧಿ, ರಾಯ್ ಬರೇಲಿಯ ಜೊತೆ ನಮಗೆ 100 ವರ್ಷಗಳ ನಂಟಿದೆ. ಕೆಲವು ದಿನಗಳ ಹಿಂದೆ ನಾನು ನನ್ನ ಅಮ್ಮನ ಜೊತೆ ಕುಳಿತು ಮಾತನಾಡುವಾಗ ನನಗೆ ಇಬ್ಬರು ತಾಯಂದಿರು ಒಬ್ಬರು ಸೋನಿಯಾ ಮತ್ತೊಬ್ಬರು ಇಂದಿರಾ ಗಾಂಧಿ ಎಂದು ಹೇಳಿದ್ದೆ. ಆ ಮಾತು ನನ್ನ ತಾಯಿಗೆ ಇಷ್ಟ ಆಗಿರಲಿಲ್ಲ. ನಾನು ಆಮೇಲೆ ನಿಧಾನವಾಗಿ ಅವರಿಗೆ ವಿವರಿಸಿದೆ.. ತನ್ನ ಮಕ್ಕಳಿಗೆ ಸರಿಯಾದ ದಾರಿ ತೋರಿಸಿ ಅವರನ್ನು ರಕ್ಷಿಸುವವಳೇ ನಿಜವಾದ ತಾಯಿ. ನನ್ನ ಇಬ್ಬರು ತಾಯಂದಿರೂ ನನಗೆ ಅದನ್ನು ಮಾಡಿದ್ದಾರೆ. ಈ ಕ್ಷೇತ್ರ ನನ್ನ ಇಬ್ಬರೂ ತಾಯಂದಿರಿಗೂ ಕರ್ಮಭೂಮಿ. ಹೀಗಾಗಿಯೇ ನಾನು ರಾಯ್ ಬರೇಲಿಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು
ಇದನ್ನೂ ಓದಿ:Gold Heist Case: ಬಹುಕೋಟಿ ಚಿನ್ನ, ವಿದೇಶಿ ಕರೆನ್ಸಿ ದರೋಡೆ; ಭಾರತೀಯ ಮೂಲದ ವ್ಯಕ್ತಿ ಲಾಕ್!
ಬಿಜೆಪಿ ಮತ್ತು ಆರ್ ಎಸ್‌ಎಸ್ ಸಂವಿಧಾನವನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ. ಅವರು ಅಧಿಕಾರಕ್ಕೆ ಬಂದ ಕೂಡಲೇ ಸಂವಿಧಾನವನ್ನೇ ಬದಲಿಸುತ್ತೇವೆ ಎಂದಿದ್ದರು. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ನಾನು ಘೋಷಿಸುತ್ತೇನೆ ಎಂದರು