ನವದೆಹಲಿ: ಕಾಂಗ್ರೆಸ್ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ (Acharya Pramod Krishnam) ಅವರು ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್‌ನಿಂದ (Congress) ಉಚ್ಚಾಟನೆಗೊಂಡಿರುವ, ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಅವರು, ಇಂಡಿಯಾ ಡೈಲಿ ಲೈವ್ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತ, “ರಾಹುಲ್ ಗಾಂಧಿ (Rahul Gandhi) ಅವರು ಈಗ ರಾಷ್ಟ್ರೀಯ ಸಮಸ್ಯೆ” ಎಂಬುದಾಗಿ ಹೇಳಿದ್ದಾರೆ.
“ರಾಹುಲ್ ಗಾಂಧಿ ಅವರು ಇದುವರೆಗೆ ಕಾಂಗ್ರೆಸ್‌ನ ಸಮಸ್ಯೆಯಾಗಿದ್ದರು. ಈಗ ಅವರು ರಾಷ್ಟ್ರೀಯ ಸಮಸ್ಯೆಯಾಗಿ ಬದಲಾಗಿದ್ದಾರೆ” ಎಂದು ಟೀಕಿಸಿದರು. ಇನ್ನು, ಪಂಜಾಬ್ ಮಾಜಿ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರು ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್‌ಪಾಲ್ ಸಿಂಗ್ ಪರವಾಗಿ ಮಾತನಾಡಿದ್ದನ್ನು ಕೂಡ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಟೀಕಿಸಿದರು. ಇನ್ನು, ದೇಶದಲ್ಲಿ ರಾಜಕೀಯ ಇರಬೇಕು, ಆದರೆ, ರಾಜಕೀಯಕ್ಕಾಗಿ ದೇಶವನ್ನು ಬಿಟ್ಟುಕೊಡಬಾರದು ಎಂದು ಕೂಡ ಹೇಳಿದರು.
#IndiaManch पर आचार्य प्रमोद कृष्णम LIVE#acharyapramodkrishnam #IndiaManchonIndiaDaily #indiamanch #indiadailyconclave #IndiaDailyLive@Vivekshandilyaa @Kanchanjais @AcharyaPramodk pic.twitter.com/OWTFU6wPRR
— India Daily Live (@IndiaDLive) July 26, 2024
ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಕುರಿತು ಮಾತನಾಡಿದ್ದರು. “ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ” ಎಂದು ಹೇಳಿದ್ದರು. ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಜೈ ಪ್ಯಾಲೆಸ್ತೀನ್ ಎಂದು ಅಸಾದುದ್ದೀನ್ ಓವೈಸಿ ಘೋಷಣೆ ಕೂಗಿದ ಕುರಿತು ಪ್ರತಿಕ್ರಿಯಿಸಿದ್ದ ಅವರು, “ಇದು ಭಾರತ ಸಂಸತ್ತು. ಭಾರತದ ಸಂಸತ್‌ನಲ್ಲಿ ಹಾಗೆ ಘೋಷಣೆ ಕೂಗುವುದು ಸರಿಯಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದರು.
ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಾಂಗ್ರೆಸ್ ನಾಯಕರೂ ಆಗಿದ್ದರು. ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಇವರನ್ನು ಕೆಲವು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿತ್ತು. ಇದಾದ ಬಳಿಕ ನರೇಂದ್ರ ಮೋದಿ ಅವರು ಕಲ್ಕಿ ದೇವಾಲಯಕ್ಕೆ ಭೇಟಿ ನೀಡಿ, ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಹೊಗಳಿದ್ದರು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಯನ್ನು ಭೇಟಿಯಾದ ರೈತರು; ಆ.15ರಂದು ದೇಶಾದ್ಯಂತ ರ‍್ಯಾಲಿಗೆ ನಿರ್ಧಾರ!