ಲಖನೌ: ದೇಶಾದ್ಯಂತ ಸಂಚರಿಸುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಹೊರತಾಗಿಯೂ ಕಾಂಗ್ರೆಸ್ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದಾರೆ. ರೈತರು, ಕುಶಲಕರ್ಮಿಗಳು, ಯುವಕರೊಂದಿಗೆ ಬೆರೆಯುವ ಮೂಲಕ ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ರಾಹುಲ್ ಗಾಂಧಿ ಅವರು ಶುಕ್ರವಾರ (ಜುಲೈ 26) ಉತ್ತರ ಪ್ರದೇಶದಲ್ಲಿ ಚಪ್ಪಲಿ ಅಂಗಡಿಯೊಂದಕ್ಕೆ (Cobbler Shop) ದಿಢೀರನೆ ಭೇಟಿ ನೀಡಿ, ಅಲ್ಲಿ ಚಪ್ಪಲಿ ಹೊಲಿಯುವ ಮೂಲಗ ಗಮನ ಸೆಳೆದಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಹಾಜರಾದರು. ಕೋರ್ಟ್‌ಗೆ ಹಾಜರಾದ ಬಳಿಕ ಲಖನೌಗೆ ವಾಪಸಾಗುವ ವೇಳೆ ವಿಧಾಯಕ ನಗರದಲ್ಲಿರುವ ಚಮ್ಮಾರನ ಅಂಗಡಿಗೆ ತೆರಳಿದ ಅವರು, ಮಾತುಕತೆ ನಡೆಸುವ ಜತೆಗೆ ಚಪ್ಪಲಿ ಹೊಲಿದರು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
2023ರ ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ಅವರು ದೆಹಲಿಯ ಕೀರ್ತಿ ನಗರ ಫರ್ನಿಚರ್ ಮಾರುಕಟ್ಟೆಗೆ ತೆರಳಿದ್ದರು. ಆಗ ಅವರು ಹಲವು ಮೇಜುಗಳನ್ನು ತಯಾರಿಸಿದ್ದರು. ಕಾರ್ಪೆಂಟರ್‌ಗಳ ಜತೆಗೂಡಿ ರಾಹುಲ್ ಗಾಂಧಿ ಅವರು ಮೇಜುಗಳನ್ನು ತಯಾರಿಸಿದ್ದರು. ಈ ಮೇಜುಗಳನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಹಾಗೂ ಕಾರ್ಪೆಂಟರ್‌ಗಳು ಜತೆಗೂಡಿ ಪ್ರಮೀಳಾ ಬಾಯಿ ಚವ್ಹಾಣ್ ಶಾಲೆಗೆ ದೇಣಿಗೆಯಾಗಿ ನೀಡಿದ್ದರು. ಕಾರ್ಕರ್‌ಡೂಮಾದಲ್ಲಿರುವ ಶಾಲೆಗೆ ಮೇಜುಗಳನ್ನು ದೇಣಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಮಾಹಿತಿ ನೀಡಿತ್ತು.
#WATCH | Congress MP & LoP Lok Sabha Rahul Gandhi meets and interacts with a cobbler during his visit to UP's Sultanpur pic.twitter.com/gwEhvGuJ95
— ANI (@ANI) July 26, 2024
ಬೈಕ್ ರಿಪೇರಿ ಮಾಡಿದ್ದ ರಾಹುಲ್ ಗಾಂಧಿ
2023ರ ಜೂನ್‌ನಲ್ಲಿ ರಾಹುಲ್ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್ ರಿಪೇರಿ ಅಂಗಡಿಗಳಿಗೆ ತೆರಳಿ ಬೈಕ್ ರಿಪೇರಿ ಮಾಡಿದ್ದರು. “ಬೈಕ್ ರಿಪೇರಿ ಅಂಗಡಿಗಳಿಗೆ ತೆರಳಿ, ನಾನೂ ವ್ರೆಂಚ್‌ಗಳನ್ನು ತಿರುಗಿಸಿದೆ. ಅವರಿಂದ ಬೈಕ್ ರಿಪೇರಿ ಮಾಡುವುದನ್ನು ಕಲಿತೆ. ಬೈಕ್ ರಿಪೇರಿ ಮಾಡುವ ಇಂತಹ ಕೈಗಳೇ ಭಾರತವನ್ನು ನಿರ್ಮಿಸಿವೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಾನು ಮತ್ತೆ ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದೇನೆ” ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: Acharya Pramod Krishnam: ರಾಹುಲ್ ಗಾಂಧಿಯನ್ನು ‘ರಾಷ್ಟ್ರೀಯ ಸಮಸ್ಯೆ’ ಎಂದ ಆಚಾರ್ಯ ಪ್ರಮೋದ್ ಕೃಷ್ಣಂ!