ಲಕ್ನೋ: ಲೋಕಸಭಾ ಚುನಾವಣೆಯ(Lok Sabha election 2024) ಪ್ರಚಾರದ ವೇಳೆ ನಾಯಕರ ನಡುವೆ ಪರಸ್ಪರ ಟೀಕಾ ಪ್ರಹಾರ, ವಾಗ್ದಾಳಿ ಬಿರುಸಿನಿಂದ ಸಾಗಿದೆ. ಇಷ್ಟು ದಿನ ತಮ್ಮನ್ನು ಶೆಹಜಾದೆ(ರಾಜಕುಮಾರ) ಎಂದು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ(Narendra Modi)ಯವರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ(Rahul Gandhi) ರಾಜ ಎಂದು ಕರೆದಿದ್ದಾರೆ. ಲಕ್ನೋದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಅಲ್ಲ.. ಅವರು ರಾಜ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ
ನಾನು ನಿಜವನ್ನೇ ಹೇಳುತ್ತಿದ್ದೇನೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ ಬದಲಾಗಿ ಅವರು ರಾಜ. ಅವರಿಗೆ ಸಂಪುಟ, ಸಂಸತ್ ಅಥವಾ ಸಂವಿಧಾನ ಇದ್ಯಾವುದೂ ಸಂಬಂಧವೇ ಇಲ್ಲ. ಅವರು 21ನೇ ಶತಮಾನ ಮಹಾರಾಜ. ನಿಜವಾದ ಅಧಿಕಾರವನ್ನು ತಮ್ಮ ಕೈಯಲ್ಲಿಟ್ಟುಕೊಂಡಿರು ಒಂದಿಬ್ಬರು ಶ್ರೀಮಂತರ ಎದುರು ಅವರು ಮಹಾರಾಜ. ನಾನು ಪ್ರಧಾನಿ ಮೋದಿವರಿಗೆ ಚರ್ಚೆಗೆ ಬರುವಂತೆ ಬಹಿರಂಗ ಸವಾಲು ಎಸೆಯುತ್ತಿದ್ದೇನೆ ಎಂದರು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 180 ಸ್ಥಾನಗಳನ್ನೂ ಪಡೆಯುವುದಿಲ್ಲ. ಅಲ್ಲದೇ ಈ ಬಾರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ ಎಂಬುದನ್ನು ನಾನು ಬೇಕಿದ್ದರೆ ಬರೆದು ಕೊಡುತ್ತೇನೆ ಎಂದ್ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಅವರನ್ನು ರಾಜಕುಮಾರರು ಎಂದು ಟೀಕಿಸಿದ್ದರು. ತುಷ್ಠೀಕರಣ ರಾಜಕೀಯ ನಡೆಸುವ ಉದ್ದೇಶದಿಂದ ಇಬ್ಬರು ರಾಜಕುಮಾರರು ಒಗ್ಗೂಡಿದ್ದಾರೆ ಎಂದು ಅವರು ಹೇಳಿದ್ದರು.
ಕಾಂಗ್ರೆಸ್ ತಪ್ಪು ಮಾಡಿದೆ, ತಿದ್ದಿಕೊಳ್ಳುತ್ತೇವೆ
ಇದೇ ವೇಳೆ ಅವರು ಹಿಂದೆ ಕಾಂಗ್ರೆಸ್ ತಪ್ಪುಗಳು ಮಾಡಿವೆ. ಅದನ್ನು ತಿದ್ದಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಬದಲಾವಣೆ ಬೇಕಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬಹಳಷ್ಟು ಬದಲಾವಣೆಗಳನ್ನು ಅಳವಡಿಸಿಕೊಳ್ಳಲಿದೆ. ನಾನೊಬ್ಬ ಕಾಂಗ್ರೆಸ್ಸಿಗನಾಗಿ ಕಾಂಗ್ರೆಸ್ ಪಕ್ಷ ಕೂಡ ತಪ್ಪುಗಳನ್ನು ಮಾಡಿದೆ ಎಂದು ನಾನು ಹೇಳುತ್ತೇನೆ ಎಂದರು. ನಾನು ಅಧಿಕಾರಗಳ ನಡುವೆಯೇ ಹುಟ್ಟಿದವನು. ಆದರೂ ನನಗೆ ಅಧಿಕಾರದ ಬಗ್ಗೆ ಯಾವುದೇ ವ್ಯಾಮೋಹ ಇಲ್ಲ. ಇದು ಜನರಿಗೆ ಸಹಾಯ ಮಾಡಲು ಇರುವ ವ್ಯವಸ್ಥೆ ಅಷ್ಟೇ ಎಂದರು.
No one can say the truth…Yes we also did mistakes and we need ro change our political discourse
— Shubhra (@shubhshaurya1) May 10, 2024
He is exactly mirror image of his father 🫡#RahulParBharosaHai#RahulGandhi pic.twitter.com/QDq32bDbuY