Site icon Vistara News

Rahul Gandhi: “ಮೋದಿ ಅಯೋಧ್ಯೆಯಲ್ಲಿ ಸ್ಪರ್ಧಿಸಿದ್ದರೆ…” ಪ್ರಧಾನಿಯನ್ನು ಮತ್ತೆ ಕೆಣಕಿದ ರಾಹುಲ್‌

Rahul Gandhi

ಅಹಮದಾಬಾದ್‌: ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಮತ್ತೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ ಸೋಲಿನ ಭಯ ಇದ್ದ ಕಾರಣವೇ ಅವರು ಸ್ಪರ್ಧಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅವರು ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಈ ಬಾರಿ ಪ್ರಧಾನಿ ಮೋದಿ ಅಯೋಧ್ಯೆಯಿಂದ ಕಣಕ್ಕಿಯಲು ಮುಂದಾಗಿದ್ದರು. ಆದರೆ ಅವರ ಜೊತೆಗಾರರು ಅವರು ಆ ಕ್ಷೇತ್ರದಿಂದ ಸ್ಪರ್ಧಿಸುವುದು ಬೇಡ ಎಂದುಅವರ ಬೆಂಬಲಿಗರೇ ಸೂಚಿಸಿದ್ದರು.ಅವರು ಆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ ಖಂಡಿತ ಸೋಲುತ್ತಿದ್ದರು. ಅದೂ ಅವರಿಗೂ ಗೊತ್ತಿತ್ತು. ಬಿಜೆಪಿಯ ಭದ್ರಕೋಟೆಯಂತಿದ್ದ ಅಯೋಧ್ಯೆಯಲ್ಲೇ ನಾವು ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದೇವೆ. ಒಂದು ವೇಳೆ ಮೋದಿ ಅಯೋಧ್ಯೆಯಲ್ಲಿ ಸ್ಪರ್ಧಿಸಿದ್ದರೆ ಮೋದಿಯ ರಾಜಕೀಯ ಭವಿಷ್ಯ ಸಂಪೂರ್ಣವಾಗಿ ಕೊನೆಯಾಗುತ್ತಿತ್ತು ಎಂದು ಹೇಳಿದ್ದಾರೆ.

ಪ್ರಧಾನಿ ಮಾತೆತ್ತಿದರೆ ತಮಗೆ ನೇರವಾಗಿ ದೇವರ ಜೊತೆ ಸಂಪರ್ಕ ಇದೆ ಅನ್ನುತ್ತಾರೆ. ಹಾಗಿರುವಾಗ ರಾಮ ಜನ್ಮಭೂಮಿ ಅಯೋಧ್ಯೆಯಲ್ಲೇ ಏಕೆ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿಲ್ಲ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ಮೋದಿ ಸಾಮಾನ್ಯ ವ್ಯಕ್ಯಿಯಲ್ಲ. ದೇವರ ಆದೇಶದ ಮೇರೆಗೆ ಅವರು ಕೆಲಸ ಮಾಡುವವರು. ಅವರ ಆತ್ಮದ ಜೊತೆ ಪರಮಾತ್ಮ ಸಂವಹನ ನಡೆಸುತ್ತಾನೆ. ಪರಮಾತ್ಮನ ಸೂಚನೆಯ ಮೇರೆಗೆ ಅವರು ನೋಟು ಅಮಾನೀಕರದಂತಹ ಮಹತ್ವದ ನಿರ್ಧಾರವನ್ನು ದಿಢೀರ್‌ ಅಂತ ಘೋಷಿಸುತ್ತಾರೆ. ದೇವರ ಆದೇಶದ ಮೇರೆಗೇ ಬಡವರ ಬದಲಿಗೆ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಅದಾನಿ ಅಂಬಾನಿಯವರನ್ನು ಆಮಂತ್ರಿಸಲಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ಜನರನ್ನು ದೂರವಿಡಲಾಗಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ಸೂಕ್ತ ಪಾಠ ಕಲಿಸಿದ್ದಾರೆ” ಎಂದು ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿ 2019ರ 62 ಸ್ಥಾನಗಳಿಂದ 33 ಸ್ಥಾನಕ್ಕೆ ಇಳಿಕೆಯಾದೆರ ಸಮಾಜವಾದಿ ಪಾರ್ಟಿ 37 ಹಾಗೂ ಕಾಂಗ್ರೆಸ್​ 6 ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಒಕ್ಕೂಟ ಒಟ್ಟು 43 ಸ್ಥಾನಗಳನ್ನು ಗಳಿಸಿಕೊಂಡಿದೆ. ಇದು ಕೇಂದ್ರಲ್ಲಿ ಸರಳ ಬಹುಮತದೊಂದಿಗೆ ಸರ್ಕಾರ ರಚಿಸುವ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟದ ಶಕ್ತಿಯೂ ಧಕ್ಕೆ ತಂದಿದೆ.

ಇದನ್ನೂ ಓದಿ: Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ; 6 ಜನರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

Exit mobile version