Site icon Vistara News

Rahul Gandhi: “ಅದಾನಿ-ಅಂಬಾನಿ… ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Parliament Sessions

Parliament Sessions

ಉತ್ತರಪ್ರದೇಶ: ಲೋಕಸಭಾ ಚುನಾವಣೆ(Lok Sabha Election 2024)ಗಾಗಿ ಕಾಂಗ್ರೆಸ್‌ಗೆ ಅಂಬಾನಿ ಹಾಗೂ ಅದಾನಿಯಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಹಣ ಸಂದಾಯವಾಗಿದೆ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi)ಗೆ ಇದೀಗ ರಾಹುಲ್‌ ಗಾಂಧಿ(Rahul Gandhi) ತಿರುಗೇಟು ಕೊಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂಬಾನಿ ಅದಾನಿಯ ಹೆದರಿ ಎಲ್ಲೂ ಪ್ರಸ್ತಾಪಿಸಿಯೇ ಇರಲಿಲ್ಲ. ಇದೀಗ ತಾವು ಸೋಲುತ್ತೇವೆ ಎಂಬುದು ಖಚಿತವಾಗಿರುವುದರಿಂದ ಈ ಉದ್ಯಮಿಗಳ ಹೆಸರು ಎತ್ತಿದ್ದಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಸ್ಪರ್ಧಿಸುತ್ತಿರುವ ಕನೌಜ್‌ ಲೋಕಸಭಾ ಕ್ಷೇತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಭಯಗೊಂಡಾಗ ಮಾತ್ರ ತನ್ನ ರಕ್ಷಣೆಗೆ ಇನ್ನೊಬ್ಬರ ಹೆಸರು ಹೇಳುತ್ತಾನೆ. ಅದೇ ರೀತಿ ಇಂಡಿಯಾ ಒಕ್ಕೂಟದಿಂದಾಗಿ ತಮ್ಮ ಸೋಲು ಖಚಿತ ಎಂದು ಅನಿಸಿದಾಗ ಪ್ರಧಾನಿ ಮೋದಿ ತನ್ನ ಇಬ್ಬರು ಸ್ನೇಹಿತರ ಹೆಸರನ್ನು ಎತ್ತಿದ್ದಾರೆ. ಕಾಪಾಡಿ.. ಕಾಪಾಡಿ. ಇಂಡಿಯಾ ಒಕ್ಕೂಟ ನನ್ನನ್ನು ಸೋಲಿಸುತ್ತಾರೆ ಅಂತಾ ಅದಾನಿ ಅಂಬಾನಿಯತ್ತ ಓಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೇ ಗೊತ್ತಿದೆ ಅದಾನಿ-ಅಂಬಾನಿಯವರು ಟೆಂಪೋಗಟ್ಟಲೇ ಹಣ ಕಳಿಸುತ್ತಾ ಅಂತಾ. ಅವರಿಗೆ ವೈಯಕ್ತಿಕವಾಗಿ ಇದರ ಅನುಭವ ಇದೆ. ಪ್ರಧಾನಿ ಮೋದಿ ಕೇವಲ 22ಉದ್ಯಮಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಬಿಜೆಪಿ, ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನಿಮ್ಮನ್ನು ಈ ವಿಚಾರದಿಂದ ಬೇರೆಡೆ ಸೆಳೆಯಲು ಯತ್ನಿಸುತ್ತಾರೆ. ನೀವು ಅದರ ಕಡೆ ವಿಚಲಿತರಾಗಬೇಡಿ ಎಂದು ರಾಹುಲ್‌ ಗಾಂಧಿ ಜನರಲ್ಲಿ ಮನವಿ ಮಾಡಿದರು.

ಮೋದಿ ಹೇಳಿದ್ದೇನು?

ತೆಲಂಗಾಣದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿದರು. “ಕಾಂಗ್ರೆಸ್‌ ಮಹಾರಾಜ (ರಾಹುಲ್‌ ಗಾಂಧಿ) ಈಗ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ, ಚುನಾವಣೆಗಾಗಿ ಉದ್ಯಮಿಗಳಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಕಾಳಧನವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಇದೇ ಕಾರಣಕ್ಕಾಗಿ ರಾಹುಲ್‌ ಗಾಂಧಿ ಅವರು ಅಂಬಾನಿ, ಅದಾನಿ ಬಗ್ಗೆ ಈಗ ಮಾತನಾಡುತ್ತಿಲ್ಲ” ಎಂದು ಟೀಕಿಸಿದ್ದರು.

ಇದನ್ನೂ ಓದಿ:Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

ಕಳೆದ ಐದು ವರ್ಷಗಳಿಂದ ರಾಹುಲ್‌ ಗಾಂಧಿ ಅವರು ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದರು. ರಾಫೆಲ್‌ ವಿಚಾರವಾಗಿ ಮಾಡಿದ ಆರೋಪವು ನೆಲಕಚ್ಚಿತು. ಅದಾದ ಬಳಿಕ ಐವರು ಉದ್ಯಮಿಗಳು, ಐವರು ಉದ್ಯಮಿಗಳು ಎಂದು ಪರೋಕ್ಷ ಆರೋಪ ಶುರುವಿಟ್ಟುಕೊಂಡರು. ಅದಾದ ಬಳಿಕ ಅಂಬಾನಿ-ಅದಾನಿ ಎಂದು ನೇರವಾಗಿ ಆರೋಪ ಮಾಡಿದರು. ಆದರೆ, ಚುನಾವಣೆ ಘೋಷಣೆಯಾಗುತ್ತಲೇ ರಾಹುಲ್‌ ಗಾಂಧಿ ಅವರು ಅಂಬಾನಿ ಹಾಗೂ ಅದಾನಿ ಹೆಸರೇ ಎತ್ತುತ್ತಿಲ್ಲ. ರಾಹುಲ್‌ ಗಾಂಧಿ ಏಕೆ ಈಗ ರಾತ್ರೋರಾತ್ರಿ ಬದಲಾದರು? ಏಕೆ ಅವರು ಅಂಬಾನಿ-ಅದಾನಿ ಹೆಸರು ಹೇಳುತ್ತಿಲ್ಲ” ಎಂದು ಪ್ರಶ್ನಿಸಿದ್ದರು.

Exit mobile version