Site icon Vistara News

Rahul Gandhi: ಸಂಸತ್‌‌ನಲ್ಲಿ ವಕ್ಫ್ ಚರ್ಚೆ ವೇಳೆ ನಿದ್ದೆ ಮಾಡುತ್ತಿದ್ದ ರಾಹುಲ್ ಗಾಂಧಿ! ವಿಡಿಯೊ ವೈರಲ್

Rahul Gandhi

ನವದೆಹಲಿ: ಸಂಸತ್‌ ಅಧಿವೇಶನ(Parliament Session)ದಲ್ಲಿ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಮೂಲಕ ಗಮನ ಸೆಳೆಯುವ ರಾಹುಲ್‌ ಗಾಂಧಿ(Rahul Gandhi) ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ನಿನ್ನೆ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ(Waqf Amendment Bill) ಮಂಡನೆಯಾಗುತ್ತಿದ್ದ ವೇಳೆ ರಾಹುಲ್‌ ಗಾಂಧಿ ನಿದ್ದೆಗೆ ಜಾರಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿರುವಾಗ ನಿದ್ದೆಗೆ ಜಾರಿದ್ದಾರೆ. ಈ ಕುರಿತಾದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ಚರ್ಚೆಯ ಸಮಯದಲ್ಲಿ ನಿದ್ರೆಗೆ ಜಾರಿದ ವಿರೋಧ ಪಕ್ಷದ ಸಂಸದರನ್ನು ಲೇವಡಿ ಮಾಡಿದ್ದಾರೆ.

ಇನ್ನು ರಾಹುಲ್‌ ಮಾತ್ರವಲ್ಲದೇ ಪ್ರತಿಪಕ್ಷದ ಕೆಲವು ಸಂಸದರು ಮಹತ್ವದ ಚರ್ಚೆ ಸಂದರ್ಭದಲ್ಲಿ ನಿದ್ದೆಗೆ ಜಾರಿದ್ದಾರೆ. ವಿಡಿಯೋದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಮಾತನಾಡುತ್ತಿರುವುದು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದಾಗಿದೆ. ಕಿರಣ್ ರಿಜಿಜು ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಸಂಸದರು ನಿದ್ದೆಗೆ ಜಾರಿರುವ ಬಗ್ಗೆ ಗಿರಿರಾಜ್ ಸಿಂಗ್ ತಿಳಿಸುತ್ತಾರೆ. ಕಿರಣ್ ರಿಜಿಜು ಪಕ್ಕದಲ್ಲಿ ಕುಳಿತಿರುವ ಬಿಜೆಪಿ ಸಂಸದರು ಭೂಪೇಂದ್ರ ಯಾದವ್ ಮತ್ತು ಜಿತೇಂದ್ರ ಸಿಂಗ್ ಸೇರಿದಂತೆ ನಿದ್ರಿಸುತ್ತಿರುವವರ ಕಡೆ ಕೈ ತೋರಿಸಿ ನಗುತ್ತಾರೆ. “ಅದಕ್ಕಾಗಿಯೇ ನಾನು ನಿಮಗೆ ನಿದ್ದೆ ಬರುವಂತೆ ಮಾಡುವುದರಿಂದ ಮಧ್ಯೆ ಮಾತನಾಡಬೇಡಿ ಅಥವಾ ಪದೇ ಪದೇ ಅಡ್ಡಿಪಡಿಸಬೇಡಿ ಎಂದು ಹೇಳುತ್ತೇನೆ” ಎಂದು ಕಿರಣ್ ರಿಜಿಜು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Parliament Session: ವಕ್ಫ್ ತಿದ್ದುಪಡಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಸರ್ಕಾರ ಪ್ರಸ್ತಾಪ

Exit mobile version