ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚಾಯ್‌ವಾಲಾ ಆಗಿದ್ದರು ಎಂಬುದು ತುಂಬ ಹಳೆಯ ಸುದ್ದಿ. ಅವರು ರೈಲು ನಿಲ್ದಾಣಗಳಲ್ಲಿ ಚಹಾ ಮಾರಾಟ ಮಾಡುತ್ತಿದ್ದರು ಎಂಬುದನ್ನು ಓದಿ ತಿಳಿದುಕೊಂಡಿದ್ದೇವೆ. ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬೈಕ್ ರಿಪೇರಿವಾಲಾ ಎಂಬುದು ಎಷ್ಟು ಜನರಿಗೆ ಗೊತ್ತು? ಹಾಂ, ಹಾಗಂತ ಅವರೇನೂ ತುಂಬ ವರ್ಷಗಳ ಹಿಂದೆ ಬೈಕ್ ರಿಪೇರಿ ಮಾಡುತ್ತಿರಲಿಲ್ಲ. ದೆಹಲಿಯಲ್ಲಿ ಬೈಕ್ ರಿಪೇರಿ ಅಂಗಡಿಗೆ ಹೋಗಿರುವ ರಾಹುಲ್ ಗಾಂಧಿ, ಹಲವು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೊಗಳೀಗ ವೈರಲ್ ಆಗಿವೆ.
ಹೌದು, ಭಾರತ್ ಜೋಡೋ ಯಾತ್ರೆ ಮೂಲಕ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ ರಾಹುಲ್ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್ ರಿಪೇರಿ ಅಂಗಡಿಗಳಿಗೆ ತೆರಳಿದ್ದಾರೆ. “ಬೈಕ್ ರಿಪೇರಿ ಅಂಗಡಿಗಳಿಗೆ ತೆರಳಿ, ನಾನೂ ವ್ರೆಂಚ್‌ಗಳನ್ನು ತಿರುಗಿಸಿದೆ. ಅವರಿಂದ ಬೈಕ್ ರಿಪೇರಿ ಮಾಡುವುದನ್ನು ಕಲಿತೆ. ಬೈಕ್ ರಿಪೇರಿ ಮಾಡುವ ಇಂತಹ ಕೈಗಳೇ ಭಾರತವನ್ನು ನಿರ್ಮಿಸಿವೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಾನು ಮತ್ತೆ ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದೇನೆ” ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಪೋಸ್ಟ್
ರಾಹುಲ್ ಗಾಂಧಿ ಭೇಟಿ ಕುರಿತು ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದೆ. “ಗ್ರೀಸ್ ಮೆತ್ತಿದ ಅಂಗಿಗಳು ಭಾರತದ ಹೆಮ್ಮೆ ಹಾಗೂ ಸ್ವಾವಲಂಬನೆಯ ಸಂಕೇತವಾಗಿವೆ. ಒಬ್ಬ ನಿಜವಾದ ಜನನಾಯಕ ಮಾತ್ರ ಅಂತಹ ಕೈಗಳನ್ನು ಪ್ರೋತ್ಸಾಹಿಸುತ್ತಾನೆ. ರಾಹುಲ್ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್ ರಿಪೇರಿ ಅಂಗಡಿಗಳಿಗೆ ಭೇಟಿ ನೀಡಿದರು. ಹಾಗೆಯೇ, ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದಾರೆ” ಎಂದು ಫೋಟೊಗಳ ಸಮೇತ ಕಾಂಗ್ರೆಸ್ ಟ್ವೀಟ್ ಮಾಡಿದೆ.
यही हाथ हिंदुस्तान बनाते हैं
— Congress (@INCIndia) June 27, 2023
इन कपड़ों पर लगी कालिख
हमारी ख़ुद्दारी और शान है
ऐसे हाथों को हौसला देने का काम
एक जननायक ही करता है
📍 दिल्ली के करोल बाग में बाइक मैकेनिक्स के साथ श्री @RahulGandhi
‘भारत जोड़ो यात्रा’ जारी है… pic.twitter.com/0CeoHKxOan
ಇದನ್ನೂ ಓದಿ: Rahul Gandhi: ನನ್ನ ಮುಖದಲ್ಲಿ ಮತ್ತೆ ನಗು ಮೂಡಿಸಿದ ವ್ಯಕ್ತಿ ನೀವು ಎಂದು ರಾಹುಲ್ ಗಾಂಧಿಗೆ ರಮ್ಯಾ ಸ್ಪೆಷಲ್ ವಿಶ್!
ರಾಹುಲ್ ಗಾಂಧಿ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ ಭಾರತ್ ಜೋಡೋ ಯಾತ್ರೆಗೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ದೊರೆತಿದೆ. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 145 ದಿನ ಸುಮಾರು 4 ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿದರು. ದೇಶದ ಪ್ರತಿಯೊಂದು ಊರಿನಲ್ಲೂ ರಾಹುಲ್ ಗಾಂಧಿ ಅವರಿಗೆ ಜನಸ್ಪಂದನೆ ಉತ್ತಮವಾಗಿತ್ತು. ಕಾಂಗ್ರೆಸ್‌ನ ನೂರಾರು ನಾಯಕರು ಕೂಡ ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದರು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ