Site icon Vistara News

Rahul Gandhi: ರಾಯ್‌ ಬರೇಲಿ V/S ವಯನಾಡ್‌-ರಾಹುಲ್‌ ಆಯ್ಕೆ ಯಾವುದು?

Rahul Gandhi

Did Rahul Gandhi skip national anthem? Viral video from Day 1 of 18th Lok Sabha session sparks row

ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆ(Lok Sabha Election 2024)ಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಎರಡೂ ಕ್ಷೇತ್ರದಲ್ಲಿ ಕಣಕ್ಕಿಳಿದು ಅದೃಷ್ಟ ಪರೀಕ್ಷೆ ನಡೆಸಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ರಾಜಕೀಯ ಮರಜನ್ಮ ಕೊಟ್ಟ ಕೇರಳದ ವಯನಾಡು(Wayanad) ಹಾಗೂ ಗಾಂಧಿ ಕುಟುಂಬದ ಭದ್ರಕೋಟೆ ರಾಯ್‌ ಬರೇಲಿ(Rae Bareli) ಕ್ಷೇತ್ರಗಳಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಪ್ರಚಂಡ ಗೆಲುವು ಪಡೆದಿದ್ದಾರೆ. ಎರಡೂ ಕ್ಷೇತ್ರಗಳನ್ನು ಗೆದ್ದಿರುವ ರಾಹುಲ್‌ ಎರಡೂ ಕ್ಷೇತ್ರವನ್ನೂ ಪ್ರತಿನಿಧಿಸುವಂತಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹಾಗಾದರೆ ಈ ಬಾರಿ ರಾಹುಲ್‌ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು?

ರಾಹುಲ್‌ ಗಾಂಧಿಯವರು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಏಕೈಕ ನಾಯಕರಾಗಿದ್ದಾರೆ. ರಾಹುಲ್‌ ಗಾಂಧಿ ಈ ಬಾರಿ ರಾಯ್‌ ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ರಾಜಕೀಯ ಮರುಜನ್ಮ ಕೊಟ್ಟ ವಯನಾಡನ್ನು ತ್ಯಜಿಸಲಿದ್ದಾರೆ ಎಂದು ಕೆಲವು ಹೇಳಿದರೆ, ಮತ್ತೆ ಕೆಲವು ವಯನಾಡನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಾರೆ.

ವಯನಾಡು ಉಳಿಸಿಕೊಳ್ಳಲು ಕಾರಣವೇನು?

2019ರಲ್ಲೂ ರಾಹುಲ್‌ ಗಾಂಧಿ ಅಮೇಥಿ ಮತ್ತು ವಯನಾಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ. ಆ ಸಂದರ್ಭದಲ್ಲಿ ಅವರು ಅಮೇಥಿಯಲ್ಲಿ ಸೋತಾಗ ವಯನಾಡು ಕ್ಷೇತ್ರ ಅವರನ್ನು ಕೈ ಹಿಡಿದಿತ್ತು. ಹೀಗಾಗಿ ಕ್ಷೇತ್ರದ ಬಗ್ಗೆ ರಾಹುಲ್‌ಗೆ ಭಾವನಾತ್ಮಕ ಸಂಬಂಧ ಇದೆ. ವಯನಾಡು ಜನರು ಕೂಡ ತಮ್ಮ ಭಾಷಿಗನಲ್ಲದಿದ್ದರೂ ರಾಹುಲ್‌ ಗಾಂಧಿಗೆ ಅಭೂತಪೂರ್ವ ಪ್ರೀತಿ ತೋರಿದ್ದಾರೆ. ಹೀಗಾಗಿಯೇ 3,64,422ರಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸುವಂತಾಯಿತು. ರಾಹುಲ್‌ ಗಾಂಧಿಗೂ ಅಲ್ಲಿನ ಜನರ ಮೇಲೆ ಅಷ್ಟೇ ಪ್ರೀತಿ ಇದೆ. ಇನ್ನು 2026ರಲ್ಲಿ ಕೇರಳ ಚುನಾವಣೆ ಎದುರಿಸುತ್ತಿದ್ದು, ಒಬ್ಬ ಸಂಸದನಾಗಿ ರಾಹುಲ್‌ ಅಲ್ಲಿ ಮುಂದುವರೆಯುವುದರಿಂದ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಪಕ್ಷಕ್ಕೆ ಬಲತುಂಬಲಿದೆ.

ರಾಯ್‌ ಬರೇಲಿಯ ಕಥೆ ಏನು?

ರಾಯ್ಬರೇಲಿಯಲ್ಲಿ ಸ್ಪರ್ಧಿಸಲು ರಾಹುಲ್ ಗಾಂಧಿ ಅಷ್ಟೊಂದು ಉತ್ಸುಕರಾಗಿರಲಿಲ್ಲ. ಮಿತ್ರ ಅಖಿಲೇಶ್ ಯಾದವ್ ಅವರ ಒತ್ತಾಯದ ಮೇರೆಗೆ ಅವರು ಸ್ಪರ್ಧಿಸಿದ್ದರು. ಅದೂ ಅಲ್ಲದೇ ಈ ಹಿಂದೆ ಅವರ ಅಜ್ಜ ಫಿರೋಜ್, ಅಜ್ಜಿ ಇಂದಿರಾ ಮತ್ತು ತಾಯಿ ಸೋನಿಯಾ ಗಾಂಧಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇನ್ನು ಒಲ್ಲದ ಮನಸ್ಸಿನಲ್ಲಿ ಕಣಕ್ಕಿಳಿದಿದ್ದ ರಾಹುಲ್‌ ನಿರೀಕ್ಷೆಗೂ ಮಿರಿದ ಮಟ್ಟದಲ್ಲಿ ಅಂದರೆ 3,89,341ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ವಯನಾಡಿನ ಮೇಲೆ ಅತಿ ಹೆಚ್ಚಿನ ಒಲವು ಹೊಂದಿರುವ ರಾಹುಲ್‌ ಒತ್ತಡ, ಒತ್ತಾಯಕ್ಕೆ ಮಣಿದು ರಾಯ್‌ ಬರೇಲಿಯನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಏನಂದ್ರಿದ್ದು ಸೋನಿಯಾ?

ಮೇ.17ರಂದು ರಾಯ್‌ ಬರೇಲಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ್ದ ಸೋನಿಯಾ, ನಾನು ನನ್ನ ಮಗನನ್ನು ನಿಮ್ಮ ಕೈಗೆ ಒಪ್ಪಿಸುತ್ತಿದ್ದೇನೆ. ರಾಹುಲ್ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಗಾಂಧಿ ಕುಟುಂಬಕ್ಕೂ ಈ ಮಣ್ಣಿಗೂ ಶತಮಾನಗಳ ನಂಟಿದೆ ಎಂದು ಹೇಳಿದ್ದರು.

ಇದನ್ನೂ ಓದಿ:Chandan Shetty: ತಂಗಿ ತಂಗಿ ಎಂದೇ ಮದುವೆಯಾಗಿದ್ದ ಚಂದನ್‌! ಇವರ ಬಾಳಲ್ಲಿ ವಿಲನ್‌ ಆಗಿದ್ದು ಯಾರು?

Exit mobile version