Site icon Vistara News

Bharat Jodo Yatra: ರಾಹುಲ್ ಗಾಂಧಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಗೆ ಇಂದು ತೆರೆ

Ready To Pay Any Price, Rahul Gandhi First Reaction after disqualification

ರಾಹುಲ್‌ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಸೋಮವಾರ ಕಾಶ್ಮೀರದ ಶ್ರೀನಗರದಲ್ಲಿ ತೆರೆ ಬೀಳಲಿದೆ. ಈ ಯಾತ್ರೆ ಸುಮಾರು 5 ತಿಂಗಳಿಂದ ನಡೆದಿತ್ತು. ದೇಶದುದ್ದಕ್ಕೂ ಸಂಚರಿಸಿದ ಭಾರತ್ ಯಾತ್ರೆ, ದೇಶವನ್ನು ಪ್ರೀತಿ, ವಿಶ್ವಾಸಗಳಿಂದ ಜೋಡಿಸುವ ಪ್ರಯತ್ನವಾಗಿ ಕಾಂಗ್ರೆಸ್ ಹಮ್ಮಿಕೊಂಡಿತ್ತು. ಈ ಯಾತ್ರೆಯ ಹಿಂದೆ ರಾಜಕಾರಣ ಇಲ್ಲ ಎಂದು ಹೇಳಿತ್ತಾದರೂ, ಅಂತಿಮವಾಗಿ ರಾಹುಲ್ ಗಾಂಧಿ ಅವರಿಗೆ ನಾಯಕತ್ವದ ಇಮೇಜ್ ತಂದು ಕೊಡುವ ಪ್ರಯತ್ನ ಈ ಯಾತ್ರೆಯ ಹಿಂದೆ ಇದೆ ಎನ್ನಲಾಗುತ್ತಿದೆ.

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿ, 2023ರ ಜನವರಿ 30ರಂದು ಅಂತ್ಯವಾಗುತ್ತಿದೆ. 135 ದಿನಗಳ ಕಾಲ ನಡೆದ ಈ ಯಾತ್ರೆಯು ಸುಮಾರು 4 ಸಾವಿರ ಕಿ.ಮೀ ಸಂಚರಿಸಿದೆ.

ಶ್ರೀನಗರದಲ್ಲಿ ಇಂದು ಯಾತ್ರೆ ಅಂತ್ಯ

ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದ್ದ ಭಾರತ್ ಜೋಡೋ ಯಾತ್ರೆ ಈಗ ಕಾಶ್ಮೀರದ ಶ್ರೀನಗರಕ್ಕೆ ಬಂದು ತಲುಪಿದೆ. ಶ್ರೀನಗರದ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಯಾತ್ರೆಯನ್ನು ಸಂಪನ್ನ ಮಾಡಲಿದ್ದಾರೆ ರಾಹುಲ್ ಗಾಂಧಿ ಅವರು. ಅಂತಿಮ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಬಹುತೇಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ನ ಎಲ್ಲ ರಾಜ್ಯ ಘಟಕ ಅಧ್ಯಕ್ಷರು, ಸಂಸದರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು

21 ಪಕ್ಷಗಳಿಗೆ ಆಹ್ವಾನ

ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭದಲ್ಲ ಪಾಲ್ಗೊಳ್ಳಲು 21 ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಈ ಪೈಕಿ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್ ಆಹ್ವಾನವನ್ನು ತಿರಸ್ಕರಿಸಿವೆ. ಒಟ್ಟು 12 ಪಕ್ಷಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಜತೆಗೆ, ಉಳಿದ ರಾಜಕೀಯ ಪಕ್ಷಗಳ ಬೆಂಬಲಿಸಿ ಪತ್ರ ಬರೆದಿವೆ.

Exit mobile version