Site icon Vistara News

Rahul Gandhi | ಭಾರತ್‌ ಜೋಡೋ ಯಾತ್ರೆಗೆ ಜೂನಿಯರ್‌ ರಾಹುಲ್‌ ಗಾಂಧಿ ಬೆಂಬಲ, ಯಾರಿವರು? ಇಲ್ಲಿದೆ ವಿಡಿಯೊ

Rahul Gandhi Look Alike

ಲಖನೌ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೈಗೊಳ್ಳುತ್ತಿರುವ ಭಾರತ್‌ ಜೋಡೋ ಯಾತ್ರೆಯು ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ರಾಹುಲ್‌ ಗಾಂಧಿಯವರ ನಾಯಕತ್ವ, ಭಾರತ್‌ ಜೋಡೋ ಯಾತ್ರೆಯ ಉದ್ದೇಶಕ್ಕೆ ನಾಗರಿಕರು ಮಾತ್ರವಲ್ಲ ಸೆಲೆಬ್ರಿಟಿಗಳು, ಸಿನಿಮಾ ಸ್ಟಾರ್‌ಗಳು ಬೆಂಬಲ ಸೂಚಿಸುತ್ತಿದ್ದಾರೆ. ಇದರ ಮಧ್ಯೆಯೇ, ರಾಹುಲ್‌ ಗಾಂಧಿಯವರನ್ನೇ ಹೋಲುವ ವ್ಯಕ್ತಿಯೊಬ್ಬರು ಭಾರತ್‌ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದು, ವಿಡಿಯೊ ಈಗ ವೈರಲ್‌ ಆಗಿದೆ.

ಹೌದು, ಭಾಗ್ಪತ್‌ನಲ್ಲಿ ನಡೆಯುತ್ತಿರುವ ಯಾತ್ರೆಗೆ ಕಾಂಗ್ರೆಸ್‌ ಕಾರ್ಯಕರ್ತ ಫೈಸಲ್‌ ಚೌಧರಿ ಅವರು ಬೆಂಬಲ ಸೂಚಿಸಿದ್ದಾರೆ. ಯಾತ್ರೆಯಲ್ಲಿ ಅವರು ಪಾಲ್ಗೊಂಡಿದ್ದು, ರಾಹುಲ್‌ ಗಾಂಧಿ ಅವರನ್ನೇ ಹೋಲುತ್ತಾರೆ ಎಂಬುದು ವಿಶೇಷವಾಗಿದೆ. ಅದರಲ್ಲೂ, ರಾಹುಲ್‌ ಅವರಂತೆಯೇ ಬಿಳಿ ಟಿ-ಶರ್ಟ್‌ ಧರಿಸಿದ ಕಾರಣ ಅವರೇ ಏನೋ ಎಂಬಂತೆ ಜನರಿಗೆ ಭಾಸವಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಫೈಸಲ್‌ ಚೌಧರಿ, “ನಾನು ಮೀರತ್‌ ಕಾಂಗ್ರೆಸ್‌ ಸಮಿತಿ ಸದಸ್ಯನಾಗಿದ್ದೇನೆ. ಕಳೆದ ಮಂಗಳವಾರದಿಂದಲೇ ಪಾದಯಾತ್ರೆ ಕೈಗೊಳ್ಳುತ್ತಿದ್ದೇನೆ. ನಾನು ಕೂಡ ರಾಹುಲ್‌ ಗಾಂಧಿ ಅವರಂತೆಯೇ ಇದ್ದೇನೆ ಎಂದು ಜನ ಹೇಳುತ್ತಿದ್ದಾರೆ. ಅಲ್ಲದೆ, ಜನ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ” ಎಂದಿದ್ದಾರೆ.

ಇದನ್ನೂ ಓದಿ | Viral Video | ವೇದಿಕೆ ಮೇಲೆ ತಂಗಿ ಪ್ರಿಯಾಂಕಾರನ್ನು ಅಪ್ಪಿ, ಮುತ್ತಿಕ್ಕಿ ಮುದ್ದು ಮಾಡಿದ ರಾಹುಲ್​ ಗಾಂಧಿ

Exit mobile version