Site icon Vistara News

Rahul Gandhi: ಸ್ತ್ರೀಯರ ಖಾತೆಗೆ 1 ಲಕ್ಷ ರೂ.; ಭರವಸೆ ನೀಡಿ ಉಲ್ಟಾ ಹೊಡೆದ ರಾಹುಲ್‌ ಗಾಂಧಿ!

Rahul Gandhi

Rahul Gandhi in Raebareli: Congress Leader's Visit Met with Jai Shri Ram Slogans

ವಯನಾಡು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಸೇರಿ ಎಲ್ಲ ಪಕ್ಷಗಳು ಸಾಲು ಸಾಲು ಉಚಿತ ಘೋಷಣೆಗಳನ್ನು ಮಾಡುತ್ತಿವೆ. ಇದರ ಮಧ್ಯೆಯೇ, “ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ಒಂದು ಲಕ್ಷ ರೂ. ಜಮೆ ಮಾಡುವ ಮೂಲಕ ಒಂದೇ ಏಟಿಗೆ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ” ಎಂದು ಭರವಸೆ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರೀಗ ಉಲ್ಟಾ ಹೊಡೆದಿದ್ದಾರೆ. ಆ ಮೂಲಕ ಅಧಿಕಾರಕ್ಕೆ ಬರುವ ಮೊದಲೇ ಯುಟರ್ನ್‌ ತೆಗೆದುಕೊಂಡಿದ್ದಾರೆ.

ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆ ಏನು?

ರಾಜಸ್ಥಾನದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಮಾತನಾಡಿದ್ದರು. “ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ, ಒಂದೇ ಏಟಿಗೆ ದೇಶದಲ್ಲಿರುವ ಬಡತನವನ್ನು ನಿರ್ಮೂಲನೆ ಮಾಡುತ್ತದೆ. ನೀವು ಬಡತನ ರೇಖೆಗಿಂತ ಕೆಳಗಿನವರಾದರೆ, ನಿಮ್ಮ ಖಾತೆಗೆ ಒಂದು ಲಕ್ಷ ರೂ. ಜಮೆಯಾಗುತ್ತದೆ. ಆ ಮೂಲಕ ಏಕಕಾಲಕ್ಕೆ ದೇಶದ ಜನರ ಬಡತನವನ್ನು ನಿರ್ಮೂಲನೆ ಮಾಡಲಾಗುತ್ತದೆ.

ಈಗ ಹೇಳುತ್ತಿರುವುದು ಏನು?

ಬಡತನ ನಿರ್ಮೂಲನೆ ಕುರಿತು ವಯನಾಡಿನಲ್ಲಿ ರಾಹುಲ್‌ ಗಾಂಧಿ ಅವರು ಯು ಟರ್ನ್‌ ತೆಗೆದುಕೊಂಡಿದ್ದಾರೆ. “ಒಂದೇ ಏಟಿಗೆ ಬಡತನವನ್ನು ನಿರ್ಮೂಲನೆ ಮಾಡಲಾಗುತ್ತದೆ ಎಂಬುದಾಗಿ ಯಾರೂ ಹೇಳಿಲ್ಲ. ಆದರೆ, ನಾವು ಆ ದಿಸೆಯಲ್ಲಿ ಕಠಿಣ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರು ಬಡತನ ನಿರ್ಮೂಲನೆ ಕುರಿತ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. “ನಮ್ಮಲ್ಲೊಬ್ಬ ರಾಯಲ್‌ ಜಾದೂಗಾರ ಇದ್ದಾರೆ. ಅವರು ಒಂದೇ ಏಟಿಗೆ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದಿದ್ದಾರೆ” ಎಂಬುದಾಗಿ ಪ್ರಧಾನಿ ಟಾಂಗ್‌ ಕೊಟ್ಟಿದ್ದರು.

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಘೋಷಿಸಿದ ಕೊಡುಗೆಗಳು

ಇದನ್ನೂ ಓದಿ: Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Exit mobile version