ಕಠ್ಮಂಡು: ಕಳೆದ ಎರಡು ಅವಧಿಯಿಂದ ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲದ ಕಾಂಗ್ರೆಸ್ ಪಕ್ಷ ಇತ್ತ ರಾಜ್ಯಗಳಲ್ಲೂ ಅಧಿಕಾರ ಕಳೆದುಕೊಂಡು ಬಹುತೇಕ ನೆಲಕಚ್ಚಿದೆ. 2024ರಕ್ಕೆ ಹೇಗಾದರೂ ಮಾಡಿ ಪಕ್ಷವನ್ನು ಒಂದು ಹಳಿಗೆ ತರಬೇಕು ಎಂದು ಅನಾರೋಗ್ಯವನ್ನೂ ಲೆಕ್ಕಿಸದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಷ್ಟಪಡುತ್ತಿದ್ದರೆ ಅತ್ತ, “ಕಾಂಗ್ರೆಸ್ ಯುವರಾಜ” ಎಂದು ಬಿರುದಾಂಕಿತ ರಾಹುಲ್ ಗಾಂಧಿಯವರು ಪಾರ್ಟಿ ಮಾಡುತ್ತಿದ್ದರು.
ಹೌದು. ದೇಶದ ಅತ್ಯಂತ ಹಳೆಯ ಪಕ್ಷದ ಸಂಕಷ್ಟದಲ್ಲಿರುವಾಗ ರಾಹುಲ್ ಗಾಂಧಿ ಮೋಜು ಮಸ್ತಿ ಮಾಡಲು ನೇಪಾಳದ ನೈಟ್‌ಕ್ಲಬ್‌ನಲ್ಲಿದ್ದರು ಎಂಬುದು ವಿಡಿಯೋದಿಂದ ಬಹಿರಂಗವಾಗಿದೆ. ಈ ಹಿಂದೆಯೂ ರಾಹುಲ್ ಮೇಲೆ ಇಂತಹ ಆರೋಪಗಳಿದ್ದವು. ಮುಂಬೈ ಮೇಲೆ ದಾಳಿ ಸಮಯದಲ್ಲೂ ಅವರು ಅವರು ನೈಟ್‌ಕ್ಲಬ್‌ನಲ್ಲಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಸ್ಟೋಟಗೊಳ್ಳುತ್ತಿರುವ ಸಮಯದಲ್ಲೂ ನೈಟ್ ಕ್ಲಬ್‌ನಲ್ಲಿ ಇದ್ದಾರೆ. ಕಠ್ಮಂಡುವಿನ ವರ್ಲ್ಡ್‌ಕ್ಲಾಸ್ ನೈಟ್ ಕ್ಲಬ್ ಪಾರ್ಟಿಯೊಂದರಲ್ಲಿ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದು ಇದೀಗ ಇಂತಹ ಅನೇಕ ಚರ್ಚೆಗಳಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.
ಪಕ್ಷ ಉಳಿಸಲು ಸೋನಿಯಾ ಹರಸಾಹಸ
ಕಾಂಗ್ರೆಸ್ ಪಕ್ಷವನ್ನು 2024ಕ್ಕೆ ಸಿದ್ಧಪಡಿಸಲು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಅನೇಕರು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜತೆ ಮಾತುಕತೆಯೂ ನಡೆದಿತ್ತು. ಆದರೆ ಅಂತಿಮ ಹಂತದಲ್ಲಿ ಈ ಮಾತುಕತೆ ಮುರಿದುಬಿದ್ದಿದೆ. ಈ ಎಲ್ಲ ಸಮಯದಲ್ಲಿ ರಾಹುಲ್ ಗೈರುಹಾಜರಾಗಿದ್ದರು.
ಹೆಚ್ಚಿನ ಓದಿಗಾಗಿ | ಕಾಂಗ್ರೆಸ್ ಆಫರ್ Not OK ಎಂದ PK: ಪ್ರಶಾಂತ್ ಕಿಶೋರ್ ತೀರ್ಮಾನಕ್ಕೆ 4 ಕಾರಣಗಳು
ರಾಹುಲ್ ಗಾಂಧಿ ವಿದೇಶಿ ಪ್ರವಾಸದಲ್ಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಯಾವ ದೇಶದಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಮೇ 2ರಂದು ಟ್ವೀಟ್ ಮಾಡಿದ್ದ ರಾಹುಲ್, “ಪವರ್ ಕ್ರೈಸಿಸ್, ಜಾಬ್ಸ್ ಕ್ರೈಸಿಸ್, ಫಾರ್ಮರ್ಸ್ ಕ್ರೈಸಿಸ್, ಇನ್ಫೇಷನ್ ಕ್ರೈಸಿಸ್. (ವಿದ್ಯುತ್ ಸಮಸ್ಯೆ, ಉದ್ಯೋಗ ಸಮಸ್ಯೆ, ರೈತರ ಸಮಸ್ಯೆ, ಹಣದುಬ್ಬರ ಸಮಸ್ಯೆ). ಒಂಮೆ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಯನ್ನು ಹೇಗೆ ಹಾಳುಗೆಡವಬೇಕು ಎನ್ನುವುದಕ್ಕೆ ಮೋದಿಯವರ 8 ವರ್ಷದ ಆಡಳಿತ ಒಂದು ಅಧ್ಯಯನ ವಸ್ತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರು ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ರಾಹುಲ್ ಗಾಂಧಿ ಪಾರ್ಟಿಯಲ್ಲಿರುವ ವಿಡಿಯೋವೊಂದು ಈಗ ಬಹಿರಂಗವಾಗಿದೆ.
ಅಮೇಥಿಯ ಸಂಸದೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರ ಕ್ಷೇತ್ರವಾದ ವಯನಾಡ್‌ಗೆ ಭೇಟಿ ನೀಡುತ್ತಿರುವ ಸಮಯದಲ್ಲಿ ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಈ ವಿಡಿಯೋವನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದು, “ಯಾರು ? ಅವರು ಯಾರು?” ಎಂಬ ಶಿರ್ಹಂಷಿಕೆ ನೀಡಿದ್ಚಿದಾರೆ. ಬಿಜೆಪಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಈ ವಿಡಿಯೋವನ್ನು ಟ್ವಿಟರ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ | Explainer: ಕಾಂಗ್ರೆಸ್ ಉಳಿಸೋಕೆ ಪ್ರಶಾಂತ್ ಕಿಶೋರ್ ಪ್ಲಾನ್ ಏನು?
ಅನೇಕರು ಟ್ವಿಟ್ಟರ್‌ನಲ್ಲಿ ಇನ್ನೂ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಪಾರ್ಟಿಯಲ್ಲಿ ರಾಹುಲ್ ಜತೆಗಿರುವ ಮಹಿಳೆ ನೇಪಾಳದಲ್ಲಿರುವ ಚೀನಾ ರಾಯಭಾರಿ ಹೂ ಯಾಂಕಿ ಎಂದು ಊಹಿಸಿದ್ದಾರೆ. ಇದೀಗ ವಿವಾಹವಾಗುತ್ತಿರುವ ಸುಮ್ನಮಾ ಉದಾಸ್ ತಂದೆ ಭೀಮ್ ಉದಾಸ್ ಮ್ಯಾನ್ಮಾರ್‌ನಲ್ಲಿ ನೇಪಾಳದ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಹೀಗಾಗಿ ಅವರಿಗೆ ರಾಯಭಾರ ಕಚೇರಿಗಳ ಸಂಪರ್ಕ ಇರಬಹುದು. ಹಾಗೊಂದು ವೇಳೆ ಚೀನಾದ ರಾಯಭಾರಿಯನ್ನು ರಾಹುಲ್ ಭೇಟಿ ಮಾಡಿದ್ದರೆ, ಈಗಾಗಲೆ ಭಾರತ ಮತ್ತು ಚೀನಾ ಸಂಬಂಧಗಳು ಸೂಕ್ಷ್ಮವಾಗಿರುವ ಸಂದರ್ಭದಲ್ಲಿ ಈ ವಿಚಾರ ಗಂಭೀರವಾಗಬಹುದು. ಅಲ್ಲದೆ, ನೇಪಾಳ ಪ್ರಧಾನಿಯನ್ನು ಈಕೆ ಹನಿಟ್ರಾಪ್‌ಗೆ ಒಳಪಡಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಮರ್ಥನೆ ಆಗುತ್ತಿಲ್ಲ
ರಾಹುಲ್ ಗಾಂಧಿ ಪಾರ್ಟಿಯಲ್ಲಿರುವ ಘಟನೆಯನ್ನು ಸಮರ್ಥನೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಇಲ್ಲಿವರೆಗೆ ಮುಂದೆ ಬಂದಿಲ್ಲ. ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವಾ ಮೊಯ್ತ್ರಾ ರಾಹುಲ್ ಸಮರ್ಥನೆ ಮಾಡಿಕೊಂಡಿದ್ದಾರೆ. “ರಾಹುಲ್ ಗಾಂಧಿ ಅಥವಾ ಇನ್ಯಾರೋ ನೈಟ್‌ಕ್ಲಬ್ ಅಥವಾ ಮದುವೆ ಪಾರ್ಟಿಯಲ್ಲಿರುವುದು ಬೇರೆಯವರಿಗೆ ಏನು ಸಂಬಂಧ? ಕೆಟ್ಟ ಮನಸ್ಸಿನ ಬಿಜೆಪಿ ಟ್ರೋಲ್‌ಗಳು ತಮ್ಮ ಕೈಯಿಂದ ಆಗುವ ಕೆಲಸ ಮಾಡಲಿ” ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ, ಇತ್ತೀಚೆಗೆ ಅಮಾನತ್ತಾದ ಸಂಜಯ್ ಝಾ ಟ್ವೀಟ್ ಮಾಡಿ, ಕಾಂಗ್ರೆಸ್ ತನ್ನ ಆದ್ಯತೆಗಳನ್ನು ನಿರ್ಧರಿಸಿಕೊಳ್ಳಲಿ. ಭಾರತದ ವಿಚಾರ ಅಥವಾ ರಾಹುಲ್ ಗಾಂಧಿ ವಿಚಾರ. ಈದೇ ಸಮಯದಲ್ಲಿ ಬಿಜೆಪಿಗೆ ಸಿಕ್ಕ ಮುಕ್ತ ಅವಕಾಶ ಇದು” ಎಂದು ಲೇವಡಿ ಮಾಡಿದ್ದಾರೆ.