Site icon Vistara News

Rajeev Chandrasekhar: 10 ವರ್ಷಗಳಲ್ಲಿ 80 ಕೋಟಿ ಮಂದಿ ಬಡತನದಿಂದ ಹೊರಗೆ; ವಿಶ್ವಸಂಸ್ಥೆಯಲ್ಲೇ ಮೋದಿ ಆಡಳಿತಕ್ಕೆ ಪ್ರಶಂಸೆ

Rajeev Chandrasekhar

ಕಳೆದ ಹತ್ತು ವರ್ಷಗಳಲ್ಲಿ ಭಾರತದ 80 ಕೋಟಿ ಜನರು ಬಡತನದಿಂದ (poverty) ಹೊರಬಂದಿದ್ದು, ಇದಕ್ಕಾಗಿ ವಿಶ್ವಸಂಸ್ಥೆ ಜನರಲ್‌ ಅಸೆಂಬ್ಲಿ (ಯುಎನ್‌ಜಿಎ) ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ (UNGA president Dennis Francis) ಅವರು ಭಾರತವನ್ನು ಶ್ಲಾಘಿಸಿರುವುದನ್ನು ಪ್ರಸ್ತಾಪಿಸಿರುವ ಬಿಜೆಪಿ ನಾಯಕ (bjp leader) ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ( Rajeev Chandrasekhar), ಭಾರತದಲ್ಲಿ ನಡೆದಿರುವ ಪರಿವರ್ತನೆಗೆ ಇದು ಸಾಕ್ಷಿ ಎಂದಿದ್ದಾರೆ.

ಪ್ರಧಾನಿ ಮೋದಿ ತಮ್ಮ ಡಿಜಿಟಲ್ ಸರ್ಕಾರದ ನೀತಿಗಳ ಮೂಲಕ 80 ಕೋಟಿ ಜನರು ಬಡತನದಿಂದ ಮತ್ತು 25 ಕೋಟಿ ಜನರಿಗೆ ಬಹು ಬಡತನದಿಂದ ಹೊರಬರಲು ಸಹಾಯ ಮಾಡಿದ್ದಾರೆ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಎಂದ ಅವರು, ಪ್ರತಿ ದೇಶವು ತಮ್ಮ ಬಡವರನ್ನು ಮುನ್ನಡೆಸಲು ಈ ರೀತಿಯ ನೀತಿಗಳನ್ನು ರೂಪಿಸಬೇಕು ಎಂದು ಹೇಳಿದರು.


ತಂತ್ರಜ್ಞಾನ ಮತ್ತು ಮೊಬೈಲ್ ಫೋನ್‌ಗಳಿಂದ 80 ಕೋಟಿ ಜನರ ಜೀವನದಲ್ಲಿ ಈ ಬದಲಾವಣೆಯಾಗಿದೆ. 2014ರ ಮೊದಲು ವಿಶ್ವದ ಮುಂದೆ ಭಾರತ ಸರ್ಕಾರದ ನಿರೂಪಣೆಯೆಂದರೆ ಸರ್ಕಾರವು ಅತ್ಯಂತ ನಿಷ್ಕ್ರಿಯವಾಗಿದೆ, ಸರ್ಕಾರಿ ವ್ಯವಸ್ಥೆಯು ತುಂಬಾ ಸೋರಿಕೆ ಮತ್ತು ಭ್ರಷ್ಟವಾಗಿದೆ ಎಂದಾಗಿತ್ತು. ಭಾರತದಲ್ಲಿ ಬ್ಯಾಂಕಿಂಗ್ ಸೇರ್ಪಡೆ ಕೇವಲ ಶ್ರೀಮಂತ ಮತ್ತು ಮಧ್ಯಮ ವರ್ಗದವರಿಗೆ ಆಗಿತ್ತು. ಬಡವರಿಗೆ ಬ್ಯಾಂಕಿಂಗ್ ವ್ಯವಸ್ಥೆ ಸಂಪರ್ಕ ಕಡಿತವಾಗಿತ್ತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

2014ರ ಮೊದಲು ಕೇವಲ 17 ಕೋಟಿ ಜನರಿಗೆ ಇಂಟರ್ನೆಟ್ ಸಂಪರ್ಕ ಲಭ್ಯವಿತ್ತು. 2014ರ ಅನಂತರ ಪ್ರಧಾನಿ ಮೋದಿ ಈ 17 ಕೋಟಿ ಇಂಟರ್ನೆಟ್ ಸಂಪರ್ಕವನ್ನು 10 ವರ್ಷಗಳಲ್ಲಿ 90 ಕೋಟಿಗೆ ಪರಿವರ್ತಿಸಿದರು. 14 ಕೋಟಿ ಜನರು ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರು, ಇಂದು 52 ಕೋಟಿ ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಇವೆಲ್ಲವನ್ನೂ ಒಟ್ಟುಗೂಡಿಸಿ 25 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಕೋವಿಡ್ ಸಮಯದಲ್ಲಿ 80 ಕೋಟಿ ಜನರಿಗೆ ಪಡಿತರವನ್ನು ಒದಗಿಸಲಾಗಿದೆ. 200 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಅನ್ನು ತಂತ್ರಜ್ಞಾನದ ಸಹಾಯದಿಂದ ನಿರ್ವಹಿಸಲಾಗಿದೆ ಎಂದು ರಾಜೀವ್‌ ವಿವರಿಸಿದ್ದಾರೆ.

ಇತರ ದೇಶಗಳು ಸಹ ಭಾರತದ ಹೆಜ್ಜೆಗಳನ್ನು ಅನುಸರಿಸಬೇಕು ಎಂದು ಬ್ರಿಟನ್‌ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹೇಳಿದ್ದರು. ಹತ್ತು ವರ್ಷಗಳಲ್ಲಿ ಏನಾಯಿತು ಎಂದು ನಮ್ಮ ವಿರೋಧ ಪಕ್ಷಗಳು ಕೇಳುತ್ತವೆ. ಆದರೆ ಪ್ರಧಾನಿ ಮೋದಿ ಬಡವರು ಮತ್ತು ರೈತರಿಗಾಗಿ ಏನು ಮಾಡಿದ್ದಾರೆ ಎಂಬುದು ಜಗತ್ತಿಗೆ ತಿಳಿದಿದೆ, ನಮಗೂ ತಿಳಿದಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಅವರನ್ನು ಸಬಲೀಕರಣಗೊಳಿಸಲಾಗಿದೆ. ಜಗತ್ತು ಅದನ್ನು ಒಪ್ಪಿಕೊಳ್ಳುತ್ತದೆ ಎಂದಿದ್ದಾರೆ ರಾಜೀವ್‌ ಚಂದ್ರಶೇಖರ್‌.

ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

ಕ್ಷಿಪ್ರ ಅಭಿವೃದ್ಧಿಗಾಗಿ ಡಿಜಿಟಲೀಕರಣದ ಬಳಕೆಯನ್ನು ಒತ್ತಿಹೇಳುತ್ತಾ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನದ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಕಳೆದ 5-6 ವರ್ಷಗಳಲ್ಲಿ 800 ಮಿಲಿಯನ್ ಜನರನ್ನು ಬಡತನದಿಂದ ಮೇಲಕ್ಕೆತ್ತಿರುವ ಭಾರತದ ಕ್ರಮವನ್ನು ಶ್ಲಾಘಿಸಿದ್ದರು. ಭಾರತದ ಗ್ರಾಮೀಣ ಪ್ರದೇಶದ ಜನರ ಕೇವಲ ಸ್ಮಾರ್ಟ್‌ಫೋನ್ ಸ್ಪರ್ಶದಿಂದ ಹೇಗೆ ಪಾವತಿಗಳನ್ನು ಮತ್ತು ಬಿಲ್‌ಗಳನ್ನು ಸುಲಭವಾಗಿ ಪಾವತಿಸುತ್ತಿದ್ದಾರೆ ಎಂಬುದನ್ನು ಅವರು ತಿಳಿಸಿದ್ದರು.

Exit mobile version