ನವದೆಹಲಿ: ವಸಾಹತುಶಾಹಿ ಕಾಲದ ಹೆಸರುಗಳನ್ನು ಬದಲಾಯಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ದೆಹಲಿಯಲ್ಲಿರುವ ರಾಜಪಥ (Rajpath) ಹಾಗೂ ನೂತನ ಸಂಸತ್ ಭವನ “ಸೆಂಟ್ರಲ್ ವಿಸ್ಟಾ”ದ ಹುಲ್ಲುಹಾಸು ಪ್ರದೇಶಕ್ಕೆ ಕೇಂದ್ರ ಸರ್ಕಾರವು “ಕರ್ತವ್ಯ ಪಥ” (Kartavya Path) ಎಂದು ನಾಮಕರಣ ಮಾಡಲು ತೀರ್ಮಾನಿಸಿದೆ.
ಬ್ರಿಟಿಷರ ಕಾಲದ ಸಂಪ್ರದಾಯ, ಚಿನ್ಹೆ, ಹೆಸರುಗಳನ್ನು ಮಾರ್ಪಾಡು ಮಾಡುವುದು ಹಾಗೂ ಅವುಗಳಲ್ಲಿ ದೇಶೀಯತೆಯನ್ನು ಅಡಕಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಅದರಂತೆ, ರಾಜಪಥ ಹಾಗೂ ಸೆಂಟ್ರಲ್ ವಿಸ್ಟಾದ ಹುಲ್ಲುಹಾಸು ಪ್ರದೇಶಕ್ಕೆ ಕರ್ತವ್ಯ ಪಥ ಎಂದು ಹೆಸರಿಸಲಾಗಿದೆ. ಸುಭಾಷ್ ಚಂದ್ರ ಬೋಸ್ ಮೂರ್ತಿಯಿಂದ ರಾಜಭವನದವರೆಗಿನ ಇಡೀ ಪ್ರದೇಶವನ್ನು ಇನ್ನು ಕರ್ತವ್ಯ ಪಥ ಎಂದೇ ಕರೆಯಲಾಗುತ್ತದೆ.
ಇತ್ತೀಚೆಗಷ್ಟೇ ಕೇಂದ್ರ ಸರಕಾರವು ನೌಕಾಪಡೆಯ ಧ್ವಜವನ್ನು ದೇಶೀಯವಾಗಿ ರೂಪಿಸಿದೆ. ನೌಕಾಪಡೆ ಧ್ವಜದಲ್ಲಿ ಬ್ರಿಟಿಷರ ಕಾಲದ ಸೇಂಟ್ ಜಾರ್ಜ್ ಕ್ರಾಸ್ ತೆಗೆದು, ದೇಶೀಯವಾಗಿ ರೂಪಿಸಲಾಗಿದೆ. ಇದಕ್ಕೂ ಮೊದಲು ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗ ಎಂದು ನಾಮಕರಣ ಮಾಡಲಾಗಿತ್ತು.
ಇದನ್ನೂ ಓದಿ | ವಿಸ್ತಾರ ವಿಶೇಷ | ನೌಕಾಪಡೆಗೆ ಛತ್ರಪತಿ ಶಿವಾಜಿ ಮಹಾರಾಜರ ಛಾಪು: ನೂತನ ಧ್ವಜ ಅನಾವರಣ