Site icon Vistara News

Rajya Sabha Election: 9 ರಾಜ್ಯಗಳ 12 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ; ಸೆ.3ಕ್ಕೆ ಮತದಾನ

Rajya Sabha Election

ನವದೆಹಲಿ: ದೇಶದ 9 ರಾಜ್ಯಗಳ 12 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಆಯೋಗವು (Election Commission Of India) ಚುನಾವಣಾ (Rajya Sabha Election) ದಿನಾಂಕ ಘೋಷಣೆ ಮಾಡಿದೆ. ಸೆಪ್ಟೆಂಬರ್‌ 12ರಂದು ಮತದಾನ ನಡೆಯಲಿದ್ದು, 9 ರಾಜ್ಯಗಳ ವಿಧಾನಸಭೆಗಳ ಮೂಲಕ ಸದಸ್ಯರು ಆಯ್ಕೆಯಾಗಲಿದ್ದಾರೆ. ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌, ಸರ್ಬಾನಂದ ಸೋನೋವಾಲ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಸೇರಿ ಹಲವರು ಲೋಕಸಭೆಗೆ ಆಯ್ಕೆಯಾಗಿರುವ ಕಾರಣ ಸ್ಥಾನಗಳು ಖಾಲಿಯಾಗಿವೆ.

ಚುನಾವಣೆ ಆಯೋಗವು ಆಗಸ್ಟ್‌ 14ರಂದು ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್‌ 21ರೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ಆಗಸ್ಟ್‌ 22ರಂದು ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ಸೆಪ್ಟೆಂಬರ್‌ 3ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರ, ಬಿಹಾರ, ಅಸ್ಸಾಂನ ತಲಾ 2, ಮಧ್ಯಪ್ರದೇಶ, ಹರಿಯಾಣ, ಒಡಿಶಾ, ತೆಲಂಗಾಣ, ಹರಿಯಾಣ ಹಾಗೂ ತ್ರಿಪುರದ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಎನ್‌ಡಿಎ ಬಲಾಬಲ ಹೇಗಿದೆ?

ರಾಜ್ಯಸಭೆಯಲ್ಲಿ ಎನ್‌ಡಿಎ ಬಲವು 101 ಇದೆ. ಒಟ್ಟು 245 ಸದಸ್ಯರ ಬಲದ ರಾಜ್ಯಸಭೆಯಲ್ಲಿ ಈಗ 225 ಸದಸ್ಯರು ಇದ್ದು, ಬಹುಮತಕ್ಕೆ 113 ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಆದಾಗ್ಯೂ, ಒಬ್ಬ ಸ್ವತಂತ್ರ ಅಭ್ಯರ್ಥಿ ಹಾಗೂ 7 ನಾಮನಿರ್ದೇಶನಗೊಂಡಿರುವ ಸದಸ್ಯರ ಬಲವೂ ಎನ್‌ಡಿಎಗೆ ಇದೆ. ಅಲ್ಲಿಗೆ, ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತಕ್ಕೆ ಇನ್ನೂ 4 ಸದಸ್ಯರ ಕೊರತೆ ಇದೆ. ಬಿಜೆಪಿಯು 87 ಸದಸ್ಯರನ್ನು ಹೊಂದಿದೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟವು 87 ಸದಸ್ಯರನ್ನು ಹೊಂದಿದೆ. ಇವರಲ್ಲಿ ಕಾಂಗ್ರೆಸ್‌ 26, ತೃಣಮೂಲ ಕಾಂಗ್ರೆಸ್‌ 13, ಆಮ್‌ ಆದ್ಮಿ ಪಕ್ಷ, ಡಿಎಂಕೆ ತಲಾ 10 ಸದಸ್ಯರನ್ನು ಹೊಂದಿವೆ. ಉಳಿದ ಸ್ಥಾನಗಳು ತೆಲಂಗಾಣದ ಬಿಆರ್‌ಎಸ್‌, ನಾಮನಿರ್ದೇಶಿತ ಸದಸ್ಯರು ಹಾಗೂ ಸ್ವತಂತ್ರ ಸದಸ್ಯರಾಗಿದ್ದಾರೆ. ಆದಾಗ್ಯೂ ಬಿಜೆಪಿಯು ಪ್ರಸಕ್ತ ವರ್ಷ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಈಗ 12 ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಕಾರಣ ಸ್ಥಾನ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಿದೆ.

ಇದನ್ನೂ ಓದಿ: Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

Exit mobile version