Rajya Sabha Election: 9 ರಾಜ್ಯಗಳ 12 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ; ಸೆ.3ಕ್ಕೆ ಮತದಾನ - Vistara News

ದೇಶ

Rajya Sabha Election: 9 ರಾಜ್ಯಗಳ 12 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ; ಸೆ.3ಕ್ಕೆ ಮತದಾನ

Rajya Sabha Election: ಸೆಪ್ಟೆಂಬರ್‌ 3ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರ, ಬಿಹಾರ, ಅಸ್ಸಾಂನ ತಲಾ 2, ಮಧ್ಯಪ್ರದೇಶ, ಹರಿಯಾಣ, ಒಡಿಶಾ, ತೆಲಂಗಾಣ, ಹರಿಯಾಣ ಹಾಗೂ ತ್ರಿಪುರದ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

VISTARANEWS.COM


on

Rajya Sabha Election
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದ 9 ರಾಜ್ಯಗಳ 12 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಆಯೋಗವು (Election Commission Of India) ಚುನಾವಣಾ (Rajya Sabha Election) ದಿನಾಂಕ ಘೋಷಣೆ ಮಾಡಿದೆ. ಸೆಪ್ಟೆಂಬರ್‌ 12ರಂದು ಮತದಾನ ನಡೆಯಲಿದ್ದು, 9 ರಾಜ್ಯಗಳ ವಿಧಾನಸಭೆಗಳ ಮೂಲಕ ಸದಸ್ಯರು ಆಯ್ಕೆಯಾಗಲಿದ್ದಾರೆ. ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌, ಸರ್ಬಾನಂದ ಸೋನೋವಾಲ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಸೇರಿ ಹಲವರು ಲೋಕಸಭೆಗೆ ಆಯ್ಕೆಯಾಗಿರುವ ಕಾರಣ ಸ್ಥಾನಗಳು ಖಾಲಿಯಾಗಿವೆ.

ಚುನಾವಣೆ ಆಯೋಗವು ಆಗಸ್ಟ್‌ 14ರಂದು ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್‌ 21ರೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ಆಗಸ್ಟ್‌ 22ರಂದು ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ಸೆಪ್ಟೆಂಬರ್‌ 3ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರ, ಬಿಹಾರ, ಅಸ್ಸಾಂನ ತಲಾ 2, ಮಧ್ಯಪ್ರದೇಶ, ಹರಿಯಾಣ, ಒಡಿಶಾ, ತೆಲಂಗಾಣ, ಹರಿಯಾಣ ಹಾಗೂ ತ್ರಿಪುರದ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಎನ್‌ಡಿಎ ಬಲಾಬಲ ಹೇಗಿದೆ?

ರಾಜ್ಯಸಭೆಯಲ್ಲಿ ಎನ್‌ಡಿಎ ಬಲವು 101 ಇದೆ. ಒಟ್ಟು 245 ಸದಸ್ಯರ ಬಲದ ರಾಜ್ಯಸಭೆಯಲ್ಲಿ ಈಗ 225 ಸದಸ್ಯರು ಇದ್ದು, ಬಹುಮತಕ್ಕೆ 113 ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಆದಾಗ್ಯೂ, ಒಬ್ಬ ಸ್ವತಂತ್ರ ಅಭ್ಯರ್ಥಿ ಹಾಗೂ 7 ನಾಮನಿರ್ದೇಶನಗೊಂಡಿರುವ ಸದಸ್ಯರ ಬಲವೂ ಎನ್‌ಡಿಎಗೆ ಇದೆ. ಅಲ್ಲಿಗೆ, ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತಕ್ಕೆ ಇನ್ನೂ 4 ಸದಸ್ಯರ ಕೊರತೆ ಇದೆ. ಬಿಜೆಪಿಯು 87 ಸದಸ್ಯರನ್ನು ಹೊಂದಿದೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟವು 87 ಸದಸ್ಯರನ್ನು ಹೊಂದಿದೆ. ಇವರಲ್ಲಿ ಕಾಂಗ್ರೆಸ್‌ 26, ತೃಣಮೂಲ ಕಾಂಗ್ರೆಸ್‌ 13, ಆಮ್‌ ಆದ್ಮಿ ಪಕ್ಷ, ಡಿಎಂಕೆ ತಲಾ 10 ಸದಸ್ಯರನ್ನು ಹೊಂದಿವೆ. ಉಳಿದ ಸ್ಥಾನಗಳು ತೆಲಂಗಾಣದ ಬಿಆರ್‌ಎಸ್‌, ನಾಮನಿರ್ದೇಶಿತ ಸದಸ್ಯರು ಹಾಗೂ ಸ್ವತಂತ್ರ ಸದಸ್ಯರಾಗಿದ್ದಾರೆ. ಆದಾಗ್ಯೂ ಬಿಜೆಪಿಯು ಪ್ರಸಕ್ತ ವರ್ಷ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಈಗ 12 ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಕಾರಣ ಸ್ಥಾನ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಿದೆ.

ಇದನ್ನೂ ಓದಿ: Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Vinesh Phogat: ಫೈನಲ್​ಗೆ ಅನರ್ಹ; ವಿನೇಶ್ ಫೋಗಟ್​ ಕಡು ವೈರಿ ಬ್ರಿಜ್ ಭೂಷಣ್ ಮಗನ ಪ್ರತಿಕ್ರಿಯೆ ಏನು?

Vinesh Phogat: ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದು ದೇಶಕ್ಕೆ ಉಂಟಾದ ನಷ್ಟ. ಫೆಡರೇಶನ್ ಇದನ್ನು ಪರಿಗಣನೆಗೆ ತೆಗೆದುಕೊಂಡು ಮುಂದೆ ಏನು ಮಾಡಬಹುದು ಎಂಬುದನ್ನು ಪರಿಶೀಲನೆ ನಡೆಸುತ್ತದೆ ಎಂದು ಹೇಳಿದ್ದಾರೆ.

VISTARANEWS.COM


on

Vinesh Phogat
Koo

ನವದೆಹಲಿ: ಅಪ್ಪನ(ಬ್ರಿಜ್​ ಭೂಷಣ್ ಶರಣ್​ ಸಿಂಗ್​) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುಂತೆ ಮಾಡಿದ್ದ ವಿನೇಶ್ ಫೋಗಟ್(Vinesh Phogat)​ ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಅನರ್ಹಗೊಂಡ ಬಗ್ಗೆ ಬ್ರಿಜ್​ ಭೂಷಣ್ ಪುತ್ರ(Brij Bhushan’s son Karan), ಬಿಜೆಪಿ ಸಂಸದ ಕರಣ್‌ ಭೂಷಣ್‌ ಸಿಂಗ್‌ (Karan Bhushan Singh) ಪ್ರತಿಕ್ರಿಯೆ ನೀಡಿದ್ದಾರೆ.

​ಸಂಸತ್​ ಅಧಿವೇಶನಕ್ಕೆ ತೆರಳುತ್ತಿದ್ದ ಕರಣ್‌ ಭೂಷಣ್‌ ಸಿಂಗ್‌ ಮಾಧ್ಯಮದ ಜತೆ ಮಾತನಾಡುವ ವೇಳೆ, “ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದು ದೇಶಕ್ಕೆ ಉಂಟಾದ ನಷ್ಟ. ಫೆಡರೇಶನ್ ಇದನ್ನು ಪರಿಗಣನೆಗೆ ತೆಗೆದುಕೊಂಡು ಮುಂದೆ ಏನು ಮಾಡಬಹುದು ಎಂಬುದನ್ನು ಪರಿಶೀಲನೆ ನಡೆಸುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಕರಣ್‌ ಭೂಷಣ್‌ ಸಿಂಗ್‌ (Karan Bhushan Singh) ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಭಗತ್ ರಾಮ್ ವಿರುದ್ಧ ಕೈಸರ್‌ಗಂಜ್(Kaiserganj) ಲೋಕಸಭಾ ಕ್ಷೇತ್ರದಿಂದ 1.4 ಲಕ್ಷ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು. ತಂದೆ ಬ್ರಿಜ್​ ಭೂಷಣ್(Brij Bhushan)​ 2019ರ ಲೋಕಸಭಾ ಚುನಾವಣೆಯಲ್ಲಿ, ಕೈಸರ್‌ಗಂಜ್‌ನಲ್ಲಿ ಎರಡು ಲಕ್ಷ ಮತಗಳಿಂದ ಗೆದ್ದಿದ್ದರು. 

ಕೈಸರ್‌ಗಂಜ್‌ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಕಳೆದ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದ ಕಾರಣದಿಂದ ನಾಲ್ಕನೇ ಬಾರಿ ಟಿಕೆಟ್‌ ಕೈತಪ್ಪಿತ್ತು. ಹೀಗಾಗಿ ಅವರ ಪುತ್ರನಿಗೆ ಬಿಜೆಪಿ ಮಣೆ ಹಾಕಲಾಗಿತ್ತು.

ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಪೋಗಟ್ ಅವರು ರಾಷ್ಟ್ರೀಯ ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧಿಕಾರಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು. ಇದೇ ವಿಚಾರವಾಗಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಒಲಿಂಪಿಕ್ ಪದಕ ವಿಜೇತರಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ರವಿ ದಹಿಯಾ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಬೃಹತ್​ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್​ ಅವರೇ ಆಗಿದ್ದರು.

ಇದನ್ನೂ ಓದಿ Vinesh Phogat: ವಿನೇಶ್ ಪದಕಗಳನ್ನು ಮೀರಿದ ವಿಜೇತೆ: ಆಲಿಯಾ, ವಿಕ್ಕಿ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳ ಬೆಂಬಲ!

50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್​ ಫೈನಲ್​ ಪಂದ್ಯಕ್ಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇದ್ದ ಕಾರಣಕ್ಕೆ ಅವರನ್ನು ಫೈನಲ್​ನಿಂದ ಅನರ್ಹ ಮಾಡಲಾಗಿದೆ. ವಿನೇಶ್​ ಫೋಗಟ್​ ಅವರನ್ನು ಅನರ್ಹ ಮಾಡಿದ ಕುರಿತು ಭಾರತದ ನಿಯೋಗದಿಂದ ದೂರ ದಾಖಲಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು, ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಗೆ ದೂರು ದಾಖಲಿಸಿದ್ದೇವೆ ಎಂದು ಭಾರತೀಯ ಒಲಿಂಪಿಕ್​​ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Continue Reading

Latest

Job Vacancies: ಸಾವಿರ ಮಹಿಳಾ ಪೊಲೀಸ್ ಕಾನ್‌‌ಸ್ಟೇಬಲ್ ಹುದ್ದೆಗಳಿಗೆ ಲಕ್ಷಕ್ಕೂ ಹೆಚ್ಚು ಅರ್ಜಿ! ಫುಟ್‌‌ಪಾತ್‌‌ನಲ್ಲೇ ಮಲಗಿದ್ದ ಮಹಿಳಾ ಅಭ್ಯರ್ಥಿಗಳು

Job Vacancies: ಮಹಿಳಾ ಕಾನ್ಸ್ಟೇಬಲ್ ಮತ್ತು ಮಹಿಳಾ ಕಾನ್ಸ್ಟೇಬಲ್ ಡ್ರೈವರ್ ಸೇರಿದಂತೆ 1,257 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಮುಂಬೈ ಪೊಲೀಸರು ರಾಜ್ಯಾದ್ಯಂತ 1.11 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಅದರಂತೆ, ಸೋಮವಾರ ಮರೀನ್ ಡ್ರೈವ್ನಲ್ಲಿ ಡ್ರೈವರ್ ನೇಮಕಾತಿಗಾಗಿ ದೈಹಿಕ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಜಮಾಯಿಸಿದ್ದರು. ಅವರೆಲ್ಲಾ ಪುಟ್‌ಪಾತ್‌ನಲ್ಲಿ ಮಲಗಿದ್ದರು. ಈ ಘಟನೆ ಮಹಾರಾಷ್ಟ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Job Vacancies
Koo


ಮುಂಬೈ : ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟರ ಮಟ್ಟಿಗೆ ಇದೆ ಎಂದರೆ ಯಾವುದೇ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನಿಸಿದರೆ ಸಾಕು ಲಕ್ಷಾಂತರ ಜನರು ಆ ಕಚೇರಿಯ ಬಳಿ ಬರುತ್ತಾರೆ. ಅಷ್ಟೋ ಕಡೆ ನೂಕು ನುಗ್ಗುಲು ಕೂಡ ಉಂಟಾಗುತ್ತದೆ. ಇದೀಗ ಮಹಿಳಾ ಕಾನ್ಸ್ಟೇಬಲ್ ಮತ್ತು ಮಹಿಳಾ ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗಳಿಗೆ 1,257 ಹುದ್ದೆ (Job vacancies)ಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಮುಂಬೈ ಪೊಲೀಸರು ರಾಜ್ಯಾದ್ಯಂತ 1.11 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಅದರಂತೆ, ಸೋಮವಾರ ಮರೀನ್ ಡ್ರೈವ್‍ನಲ್ಲಿ ಡ್ರೈವರ್ ನೇಮಕಾತಿಗಾಗಿ ದೈಹಿಕ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಜಮಾಯಿಸಿದರು. ಅವರೆಲ್ಲಾ ಪುಟ್ಪಾತ್‍ನಲ್ಲಿ ಮಲಗಿದ್ದರು.

ವಿರೋಧ ಪಕ್ಷದ ನಾಯಕ ವಿಜಯ್ ವಡ್ಡೇಟಿವಾರ್ ಮಂಗಳವಾರ ತಡರಾತ್ರಿ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊ ಮತ್ತು ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಸರ್ಕಾರದ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ಸಂದೇಶದಲ್ಲಿ, “ಮುಂಬೈನಲ್ಲಿ ಪೊಲೀಸ್ ನೇಮಕಾತಿಗಾಗಿ ಬಂದ ಹುಡುಗಿಯರು ಇದರಲ್ಲಿ ಕಂಡುಬರುತ್ತಾರೆ.

ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಮುಂಬೈನಂತಹ ದೊಡ್ಡ ನಗರಗಳಿಗೆ ಬರುವ ಹುಡುಗಿಯರಿಗೆ ರಾತ್ರಿ ತಂಗಲು ಸರ್ಕಾರ ಮತ್ತು ಪೊಲೀಸ್ ಆಡಳಿತಕ್ಕೆ ವಸತಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ? ಮಳೆ ಬಂದಾಗ ಈ ಹುಡುಗಿಯರು ಎಲ್ಲಿ ಮಲಗುತ್ತಾರೆ? ಅವರ ಸುರಕ್ಷತೆಯ ಬಗ್ಗೆ ಏನು? ವಾಶ್ ರೂಮ್ ವ್ಯವಸ್ಥೆ ಬಗ್ಗೆ ಏನು? ಇದು ಬೇಜವಾಬ್ದಾರಿಯುತ ಕೆಲಸ “ ಎಂದು ತಿಳಿಸಿದ್ದಾರೆ. ಅಲ್ಲದೇ ಆಕಾಂಕ್ಷಿಗಳಿಗೆ ವಸತಿ ಸೌಕರ್ಯಗಳನ್ನು ಒದಗಿಸುವಂತೆ ವಡ್ಡೇಟಿವಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ನಿರುದ್ಯೋಗ ಸಮಸ್ಯೆ ದೇಶದಲ್ಲಿ ಎಷ್ಟು ಕಾಡುತ್ತಿದೆ ಎಂಬುದಕ್ಕೆ ಈ ಹಿಂದೆ ಮುಂಬೈನಲ್ಲಿ ನಡೆದ ಈ ಘಟನೆಯೂ ಕೂಡ ಸಾಕ್ಷಿಯಾಗಿದೆ. ಈ ಹಿಂದೆ ಏರ್ ಇಂಡಿಯಾ ಏರ್ಪೋರ್ಟ್ ಸರ್ವೀಸಸ್ ಲಿಮಿಟೆಡ್ (ಎಐಎಎಸ್ಎಲ್) ಮುಂಬೈ ವಿಮಾನ ನಿಲ್ದಾಣದಲ್ಲಿ ಕೇವಲ 600 ಖಾಲಿ ಹುದ್ದೆಗಳಿಗೆ ಸ್ಪರ್ಧಿಸಲು 25,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರಾಗಿದ್ದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಗೊಂದಲಕ್ಕೆ ಕಾರಣವಾಯಿತು. ಭಾರಿ ಜನಸಂದಣಿಯನ್ನು ನಿರ್ವಹಿಸಲು ಏರ್ ಇಂಡಿಯಾ ಸಿಬ್ಬಂದಿ ಹೆಣಗಾಡಬೇಕಾಯಿತು, ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಕೂಡ ಎದುರಾಗಿತ್ತು

Continue Reading

ಉದ್ಯೋಗ

Job Alert: CDACಯಲ್ಲಿದೆ 250 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Job Alert: ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪ್ರಾಜೆಕ್ಟ್‌ ಎಂಜಿನಿಯರ್‌, ಪ್ರಾಜೆಕ್ಟ್‌ ಅಸೋಸಿಯೇಟ್‌, ಪ್ರಾಜೆಕ್ಟ್‌ ಮ್ಯಾನೇಜರ್‌ ಸೇರಿದಂತೆ ಒಟ್ಟು 250 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಬೆಂಗಳೂರು, ಶಿಮ್ಲಾ, ದಿಲ್ಲಿ ಮತ್ತು ಪುಣೆಯಲ್ಲಿ ಪೋಸ್ಟಿಂಗ್‌ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 16.

VISTARANEWS.COM


on

Job Alert
Koo

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌(Centre for Development of Advanced Computing) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CDAC Recruitment 2024). ಪ್ರಾಜೆಕ್ಟ್‌ ಎಂಜಿನಿಯರ್‌, ಪ್ರಾಜೆಕ್ಟ್‌ ಅಸೋಸಿಯೇಟ್‌, ಪ್ರಾಜೆಕ್ಟ್‌ ಮ್ಯಾನೇಜರ್‌ ಸೇರಿದಂತೆ ಒಟ್ಟು 250 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಬೆಂಗಳೂರು, ಶಿಮ್ಲಾ, ದಿಲ್ಲಿ ಮತ್ತು ಪುಣೆಯಲ್ಲಿ ಪೋಸ್ಟಿಂಗ್‌ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 16 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಪ್ರಾಜೆಕ್ಟ್ ಅಸೋಸಿಯೇಟ್- 43 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಎಂಜಿನಿಯರ್- 100 ಹುದ್ದೆ, ವಿದ್ಯಾರ್ಹತೆ:
ಪ್ರಾಜೆಕ್ಟ್ ಮ್ಯಾನೇಜರ್- 1 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್‌ಡಿ
ಪ್ರಾಜೆಕ್ಟ್ ಮ್ಯಾನೇಜರ್ / ಪ್ರೋಗ್ರಾಂ ಮ್ಯಾನೇಜರ್ / ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್ / ನಾಲೆಡ್ಜ್‌ ಪಾರ್ಟನರ್‌- 19 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್‌ಡಿ
ಪ್ರಾಜೆಕ್ಟ್‌ ಆಫೀಸರ್‌- 3 ಹುದ್ದೆ, ವಿದ್ಯಾರ್ಹತೆ: ಸಿಎ, ಸ್ನಾತಕೋತ್ತರ ಪದವಿ, ಎಂಬಿಎ, ಎಂ.ಕಾಂ., ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಸಪೋರ್ಟ್‌ ಸ್ಟಾಫ್‌- 5 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ, ಎಂ.ಕಾಂ, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ / ಮಾಡ್ಯೂಲ್ ಲೀಡ್ / ಪ್ರಾಜೆಕ್ಟ್ ಲೀಡರ್- 41 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್.ಡಿ.
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ / ಮಾಡ್ಯೂಲ್ ಲೀಡ್- 16 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್.ಡಿ.
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್- 22 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್.ಡಿ.

ವಯೋಮಿತಿ, ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 30-50 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://careers.cdac.in/advt-details/PN-1972024-TYT1X).
  • ಮೊಬೈಲ್‌ ನಂಬರ್‌, ಇಮೇಲ್‌ ವಿಳಾಸ ನಮೂದಿಸಿ ಹೆಸರು ನೋಂದಾಯಿಸಿ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ತೆಗೆದಿಡಿ.

ಇದನ್ನೂ ಓದಿ: RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Continue Reading

ವಿದೇಶ

Bangladesh Unrest: ಖ್ಯಾತ ಹಿಂದೂ ಗಾಯಕನ ಮನೆಯೂ ಧ್ವಂಸ; 3000 ಸಂಗೀತೋಪಕರಣಗಳು ಬೆಂಕಿಗಾಹುತಿ

Bangladesh Unrest: ಬಾಂಗ್ಲಾದೇಶದ ಖ್ಯಾತ ಗಾಯಕ ರಾಹುಲ್ ಆನಂದ್(Rahul Anand) ಅವರ ಧಾಕಾದ ಧನ್ಮೋಂಡಿಯಲ್ಲಿದ್ದಂತಹ ಮನೆಯನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ.

VISTARANEWS.COM


on

Bangladesh unrest
Koo

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಭುಗಿಲೆದ್ದಿರುವ ದಂಗೆ(Bangladesh Unrest) ಯಲ್ಲಿ ಅಲ್ಪಸಂಖ್ಯಾತ ಹಿಂದೂ ದಿನೇ ದಿನೇ ನರಕಯಾತನೆ ಅನುಭವಿಸುವಂತಾಗಿದೆ. ಕಂಡ ಕಂಡಲ್ಲಿ ಹಿಂದೂಗಳನ್ನು, ಅವರಿಗೆ ಸಂಬಂಧಿಸಿದ ಮನೆ ಅಂಗಡಿಗಳನ್ನು ಮತ್ತು ದೇಗುಲಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಕೈಗೆ ಸಿಕ್ಕವಸ್ತುಗಳನ್ನು ದೋಚುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ಖ್ಯಾತ ಗಾಯಕ(Bangladesh Singer)ನ ಮನೆಗೆ ಪ್ರತಿಭಟನಾಕಾರರು(Protester) ಬೆಂಕಿ ಇಟ್ಟಿರುವುದು ವರದಿಯಾಗಿದೆ.

ಬಾಂಗ್ಲಾದೇಶದ ಖ್ಯಾತ ಗಾಯಕ ರಾಹುಲ್ ಆನಂದ್(Rahul Anand) ಅವರ ಧಾಕಾದ ಧನ್ಮೋಂಡಿಯಲ್ಲಿದ್ದಂತಹ ಮನೆಯನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಗಾಯಕನ ಆಪ್ತ ಕುಟುಂಬಸ್ಥರು ಬಾಂಗ್ಲಾದೇಶದ ಪತ್ರಿಕೆಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಪ್ರತಿಭಟನಾಕಾರರು ಗೇಟ್ ಮುರಿದು ನಂತರ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಲಾರಂಭಿಸಿದ್ದರು.

3000 ಸಂಗೀತೋಪಕರಣಗಳು ಬೆಂಕಿಗಾಹುತಿ

ಇನ್ನು ದುಷ್ಕರ್ಮಿಗಳ ಹಚ್ಚಿದ ಬೆಂಕಿಗೆ ರಾಹುಲ್‌ ಆನಂದ್‌ ಅವರ ಮನೆಯಲ್ಲಿದ್ದ 3000ಕ್ಕೂ ಅಧಿಕ ಸಂಗೀತೋಪಕರಣಗಳು ಬೆಂಕಿಗಾಹುತಿಯಾಗಿವೆ. ಇನ್ನು ಕಿಡಿಗೇಡಿಗಳು ರಾಹುಲ್‌ ಆನಂದ್‌ ಮನೆಯಲ್ಲಿದ್ದ ಪೀಠೋಪಕರಣಗಳು, ಕನ್ನಡಿಗಳು ಸೇರಿದಂತೆ ಮನೆಯಲ್ಲಿದ್ದಂತಹ ದುಬಾರಿ ವಸ್ತುಗಳನ್ನೆಲ್ಲ ಕೊಂಡೊಯ್ದಿದ್ದಾರೆ. ಈ ಮನೆಯು ಸುಮಾರು 140 ವರ್ಷ ಹಳೆಯದ್ದಾಗಿತ್ತು. ರಾಹುಲ್ ಆನಂದ್ ಅವರು ಜಾನಪದ ಬ್ಯಾಂಡ್ ನಡೆಸುತ್ತಿದ್ದು ಇದಕ್ಕೆ ಜೋಲರ್ ಗಾನ್ ಎಂದು ಹೆಸರಿಟ್ಟಿದ್ದರು. ಇದೀಗ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಡೀ ಪರಂಪರೆಯೇ ನಾಶವಾಗಿದೆ.

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್‌ ಹಸೀನಾ(Sheikh Hasina) ದೇಶದಿಂದ ಪಲಾಯಣ ಮಾಡಿರುವ ಬೆನ್ನಲ್ಲೇ ಹಿಂದೂಗಳನ್ನು ಗುರಿಯಾಗಿ ಎಗ್ಗಿಲ್ಲದೇ ದಾಳಿ ನಡೆಯುತ್ತಿದೆ. ಸಾಲದೆನ್ನುವಂತೆ ಉದ್ರಿಕ್ತ ಪ್ರತಿಭಟನಾಕಾರರು ಹಿಂದೂ ದೇಗುಲಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ.

ಬಾಂಗ್ಲಾದೇಶದ ಪತ್ರಿಕೆಗಳ ವರದಿ ಪ್ರಕಾರ 27 ಜಿಲ್ಲೆಗಳಲ್ಲಿ ಹಿಂದೂಗಳ ವ್ಯಾಪಾರ ಮಳಿಗೆ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇನ್ನು ಜಮಾತ್‌-ಎ- ಇಸ್ಲಾಮಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದನ್ನು ಒಪ್ಪಿಕೊಂಡಿದೆ.

ಇದನ್ನೂ ಓದಿ: Shehzad Poonawalla: ಬಾಂಗ್ಲಾದಂತೆ ಭಾರತದಲ್ಲಿಯೂ ಹಿಂಸಾಚಾರ; ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ಹೇಳಿಕೆಗೆ ಬಿಜೆಪಿ ಕಿಡಿ

Continue Reading
Advertisement
National Handloom day 2024
ಫ್ಯಾಷನ್30 mins ago

National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್‌ ಲೂಮ್‌ ಸೀರೆಗಳಿವು

Viral Video
Latest40 mins ago

Viral Video: 11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!

Vinesh Phogat
ಕ್ರೀಡೆ52 mins ago

Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

Lalbagh Flower Show
ಕರ್ನಾಟಕ1 hour ago

Lalbagh Flower Show: ಲಾಲ್‌ಬಾಗ್ ಫ್ಲವರ್‌ ಶೋ; ನಾಳೆಯಿಂದ ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ

Viral Video
Latest1 hour ago

Viral Video: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

Viral News
Latest1 hour ago

Viral News: ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

Viral video
ವೈರಲ್ ನ್ಯೂಸ್2 hours ago

Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

OTT Releases
ಸಿನಿಮಾ2 hours ago

OTT Releases: ಇಂಡಿಯನ್ 2, ಟರ್ಬೊ ಸೇರಿದಂತೆ ಹಲವು ಹೊಸ ಚಿತ್ರಗಳು ಈ ವಾರ ಒಟಿಟಿಯಲ್ಲಿ!

Gowri Movie Saanya Iyer Samar Lankesh eating dosa with together
ಸಿನಿಮಾ2 hours ago

Gowri Movie: ಸಮರ್ಜಿತ್‌ಗೆ ನಾಚಿಕೆಯಿಂದ ದೋಸೆ ತಿನ್ನಿಸಿದ ಸಾನ್ಯಾ ಅಯ್ಯರ್; ಇದೇನು ಡೇಟಿಂಗಾ ಎಂದು ಪ್ರಶ್ನೆ ಇಟ್ಟ ಫ್ಯಾನ್ಸ್!

Self Harming
ಕರ್ನಾಟಕ2 hours ago

Self Harming: ಇನ್‍ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ನೇಣಿಗೆ ಶರಣಾದ ಯುವಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು1 day ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 day ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌