ಹೂಡಿಕೆ ಕ್ಷೇತ್ರದ ದಿಗ್ಗಜ, ಷೇರು ಮಾರುಕಟ್ಟೆಯ ಬಿಗ್ ಬುಲ್ ರಾಕೇಶ್ ಜುಂಜುನ್‌ವಾಲಾ ಅದೆಂಥಾ ಜಾಲಿ ವ್ಯಕ್ತಿತ್ವದವರು ಎಂಬುದಕ್ಕೆ, ಇದೀಗ ವೈರಲ್ ಆಗುತ್ತಿರುವ ವಿಡಿಯೋ ಸಾಕ್ಷಿ. ಡಯಾಬಿಟಿಸ್ ಅವರನ್ನು ಹೈರಾಣುಗೊಳಿಸಿತ್ತು. ವೀಲ್ ಚೇರ್ ಕಾಯಂ ಎಂಬಂತಾಗಿತ್ತು. ಆದರೆ ಅವರ ಜೀವನೋತ್ಸಾಹ-ಉದ್ಯಮೋತ್ಸಾಹಕ್ಕೆ ಅದು ತಡೆಯೊಡ್ಡಲಿಲ್ಲ. ಎಷ್ಟೇ ದೊಡ್ಡ ಉದ್ಯಮಿಯಾದರೂ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದ ಜುಂಜುನ್‌ವಾಲಾ, ತಮ್ಮ ಕುಟುಂಬದವರೊಂದಿಗೆ ಸೇರಿ ಫುಲ್ ಖುಷಿಯಿಂದ ಡ್ಯಾನ್ಸ್ ಮಾಡಿದ ವಿಡಿಯೋ ಈಗ, ಅವರಿಲ್ಲದ ಹೊತ್ತಲ್ಲಿ ಸಖತ್ ವೈರಲ್ ಆಗುತ್ತಿದೆ. ಅಂದಾಗೇ, ಅವರು ನಿಲ್ಲಲು ಆಗದೆ ಇದ್ದರೂ, ವೀಲ್ ಚೇರ್ ಮೇಲೆ ಕುಳಿತು, ಕಾಲು-ಕೈ ಅಲ್ಲಾಡಿಸುತ್ತ ಎಂಜಾಯ್ ಮಾಡುತ್ತ ನೃತ್ಯ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು. ತಲೆಯ ಮೇಲೆ ಶಾಲು ಹೊದ್ದು ಕ್ಯೂಟ್ ಎಕ್ಸ್ಪ್ರೆಶನ್ ಕೊಡುತ್ತ, ಕುಳಿತಲ್ಲೇ ಕುಣಿದಾಡಿದ್ದಾರೆ.
ರಾಜೇಶ್ ಜುಂಜುನ್ವಾಲಾಗೆ ಇನ್ನೂ 62ವರ್ಷ. ಇತ್ತೀಚೆಗೆ ಒಮ್ಮೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಸುಧಾರಿಸಿಕೊಂಡು ಡಿಸ್ಚಾರ್ಜ್ ಆಗಿ ಬಂದಿದ್ದರು. ಆದರೆ ಇಂದು ಮುಂಜಾನೆ ಮತ್ತೆ ಅವರ ಆರೋಗ್ಯ ಹದಗೆಟ್ಟಿದೆ. ಬೆಳಗ್ಗೆ 6.45ರ ಹೊತ್ತಿಗೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ರಾಕೇಶ್ ಜುಂಜುನ್ ವಾಲಾ ಸಾವಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ನೂತನ ಆಕಾಸ ಏರ್ಲೈನ್ಸ್ ಪ್ರಾರಂಭಿಸಿದ್ದ, ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ