Site icon Vistara News

Ram Mandir: ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಪಡೆದ ಗಣ್ಯರ ಪಟ್ಟಿ ಇಲ್ಲಿದೆ

ayodhye rama mandir

ayodhye rama mandir

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ(Ram Mandir)ದ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಅಂದು ನಡೆಯುವ ರಾಮಲಲ್ಲಾ (Ram Lalla) ವಿಗ್ರಹದ ಪ್ರಾಣ ಪ್ರತಿಷ್ಠೆ (Pran Pratishta) ಮತ್ತಿತರ ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಹಿತ ಅನೇಕ ನಾಯಕರು ಆಗಮಿಸಲಿದ್ದಾರೆ. ಶ್ರೀ ರಾಮ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ (Shri Ram Janmbhoomi Teerth Kshetra Trust) ಈಗಾಗಲೇ 6,000 ಮಂದಿಗೆ ಆಹ್ವಾನ ಪತ್ರಿಕೆ ಹಂಚಿದೆ.

ಧಾರ್ಮಿಕ ವಿಧಿ ವಿಧಾನ ಜನವರಿ 16ರಂದು ಅಂದರೆ ಪ್ರಾಣ ಪ್ರತಿಷ್ಠೆಯ ವಾರದ ಮೊದಲೇ ಆರಂಭವಾಗಲಿದೆ. ವಾರಣಾಸಿಯ ಪುರೋಹಿತರಾದ ಲಕ್ಷ್ಮೀಕಾಂತ್‌ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ. ಅಯೋಧ್ಯೆ ಜನವರಿ 14ರಿಂದ ಜನವರಿ 22ರ ವರೆಗೆ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಲಿದೆ. ರಾಮ ಮಂದಿರ ಉದ್ಘಾಟನೆಯಲ್ಲಿ 5 ಸಾವಿರ ಸಂತರು ಸೇರಿ ಸುಮಾರು 7 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಜತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ರಾಜಕೀಯ ನಾಯಕರು, ಉದ್ಯಮಿಗಳು, ಕ್ರೀಡಾ ಕ್ಷೇತ್ರದ ಸಾಧಕರು, ಕಲಾವಿದರು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ ಗಣ್ಯರ ಪಟ್ಟಿ ಇಲ್ಲಿದೆ.

ರಾಜಕೀಯ ಮುಖಂಡರು

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಸಂಸದ ಅಧೀರ್‌ ರಂಜನ್‌ ಚೌಧರಿ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ, ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್‌.

ಆಟಗಾರರು

ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌.

ಕಲಾವಿದರು

ಅಮಿತಾಭ್‌ ಬಚ್ಚನ್‌, ಮಾಧುರಿ ದೀಕ್ಷಿತ್‌, ರಜನಿಕಾಂತ್‌, ಅಕ್ಷಯ್‌ ಕುಮಾರ್‌, ಅನುಪಮ್‌ ಖೇರ್‌, ಚಿರಂಜೀವಿ, ಸಂಜಯ್‌ ಲೀಲಾ ಬನ್ಸಾಲಿ, ಧನುಷ್‌, ಮೋಹನ್‌ಲಾಲ್‌, ರಣಬೀರ್‌ ಕಪೂರ್‌, ಆಲಿಯಾ ಭಟ್‌, ರಿಷಬ್‌ ಶೆಟ್ಟಿ, ಕಂಗನಾ ರಾಣೌತ್‌, ಮಧುರ್‌ ಭಂಡಾರ್‌ಕರ್‌, ಟೈಗರ್‌ ಶ್ರಾಫ್‌, ಅಜಯ್‌ ದೇವಗನ್‌, ಪ್ರಭಾಸ್‌, ಯಶ್‌, ಸನ್ನಿ ಡಿಯೋಲ್‌, ಆಯುಷ್ಮಾನ್‌ ಖುರಾನ, ಅರುಣ್‌ ಗೋವಿಲ್‌, ದೀಪಿಕಾ ಚಿಖಾಲಿಯ, ಮಹಾವೀರ್‌ ಜೈನ್‌.

ಉದ್ಯಮಿಗಳು

ಮುಕೇಶ್‌ ಅಂಬಾನಿ, ಅನಿಲ್‌ ಅಂಬಾನಿ, ರತನ್‌ ಟಾಟಾ, ಗೌತಮ್‌ ಅದಾನಿ, ಟಿ.ಎಸ್‌.ಕಲ್ಯಾಣರಾಮನ್‌ (ಕಲ್ಯಾಣ್‌ ಜ್ಯುವೆಲ್ಲರ್ಸ್‌ ಎಂಡಿ).

ಇದನ್ನೂ ಓದಿ: Ram Mandir: ಮಂದಿರ ಉದ್ಘಾಟನೆಗೆ ಮೊದಲು 1,200 ಮಸೀದಿಗಳಲ್ಲಿ ದೀಪ ಬೆಳಗಲಿದೆ ಬಿಜೆಪಿ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮ ಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version