Ram Mandir: ಅಯೋಧ್ಯೆಗೆ ಮರಳಿದ ಗತ ವೈಭವ; ಭವ್ಯ ರಾಮ ಮಂದಿರದ ಫೋಟೊ ಗ್ಯಾಲರಿ ಇಲ್ಲಿದೆ
Ramesh B
ಅಯೋಧ್ಯೆ: ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠಾ ಸಮಾರಂಭವು ಜನವರಿ 22ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾಣ ಪ್ರತಿಷ್ಠೆ ಮಾಡಲಿದ್ದು, ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದ ನಿಮಿತ್ತ ರಾಮ ಮಂದಿರವನ್ನು ಅಲಂಕರಿಸಲಾಗಿದೆ. ಈ ಮೂಲಕ ಅಯೋಧ್ಯೆಗೆ ಗತ ವೈಭವ ಮರಳಿ ಬಂದಿದ್ದು, ದೀಪಗಳ ಬೆಳಕಿನಲ್ಲಿ, ಹೂವಿನ ಚೆಲುವಿನಲ್ಲಿ ಮಿಂಚುತ್ತಿದೆ.
ರಾಮ ಮಂದಿರವನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರವು ನಿರ್ವಹಿಸುತ್ತಿದೆ. ಲಾರ್ಸೆನ್ ಆ್ಯಂಡ್ ಟೂಬ್ರೊ (ಎಲ್ & ಟಿ) ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ.ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸುವ ರಾಮ ಲಲ್ಲಾ ವಿಗ್ರಹವನ್ನು ಕನ್ನಡಿಗರಾದ ಅರುಣ್ ಯೋಗಿರಾಜ್ ಕೆತ್ತಿದ್ದಾರೆ.ಜನವರಿ 22ರಂದು ಪ್ರಾಣ ಪ್ರತಿಷ್ಠೆ ಸಮಾರಂಭ ನಡೆಯಲಿದ್ದು, ಮರುದಿನ ಅಂದರೆ ಜನವರಿ 23ರಂದು ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ.ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಸುಮಾರು 7 ಸಾವಿರ ಮಂದಿ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ದೇಶದ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ.ಭಕ್ತರು ಮತ್ತು ಗಣ್ಯರಿಗೆ ಹಂಚಲು ಸುಮಾರು 13 ಲಕ್ಷ ಲಾಡುಗಳನ್ನು ಸಿದ್ಧಪಡಿಸಲಾಗುತ್ತಿದೆ. ಮೂರು ಅಂತಸ್ತಿನ ರಾಮ ಮಂದಿರ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ.