Site icon Vistara News

Pravin Togadia: ರಾಮಮಂದಿರ ನಿರ್ಮಾಣ ಸರಿ, ಆದರೆ ರಾಮರಾಜ್ಯ ಎಲ್ಲಿದೆ? ಕೇಂದ್ರಕ್ಕೆ ಪ್ರವೀಣ್‌ ತೊಗಾಡಿಯಾ ಚಾಟಿ

Pravin Togadia

#image_title

ಲಖನೌ: ಕೇಂದ್ರ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಹಿಂದು ಪರಿಷತ್‌ ಮುಖ್ಯಸ್ಥ, ಪ್ರಖರ ಹಿಂದುತ್ವವಾದಿ ಪ್ರವೀಣ್‌ ತೊಗಾಡಿಯಾ (Pravin Togadia) ಚಾಟಿ ಬೀಸಿದ್ದಾರೆ. “ಅಯೋಧ್ಯೆಯಲ್ಲಿ ರಾಮಮಂದಿರವೇನೋ ನಿರ್ಮಾಣವಾಗುತ್ತಿದೆ. ಆದರೆ, ದೇಶದಲ್ಲಿ ಎಲ್ಲಿಯೂ ರಾಮರಾಜ್ಯ ಕಾಣಿಸುತ್ತಿಲ್ಲ” ಎಂದು ಟೀಕಿಸಿದ್ದಾರೆ. ಪ್ರವೀಣ್‌ ತೊಗಾಡಿಯಾ ಅವರೇ ಕೇಂದ್ರ ಸರ್ಕಾರವನ್ನು ಟೀಕಿಸಿರುವುದು ಈಗ ಅಚ್ಚರಿ ಮೂಡಿಸಿದೆ.

ಅಮೇಠಿ ಜಿಲ್ಲೆಯ ಪುರಿ ರಾಮದಿನ್‌ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಆದರೆ, ರಾಮರಾಜ್ಯ ಇನ್ನೂ ನಿರ್ಮಾಣವಾಗಬೇಕಿದೆ. ದೇಶದ ಹಿಂದುಗಳು ಉತ್ತಮ ಸೌಕರ್ಯ, ಸೌಲಭ್ಯಗಳು ಪಡೆಯಬೇಕು. ಆಗಲೇ ರಾಮರಾಜ್ಯದ ಕನಸು ನನಸಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Ram Mandir | 2024ರ ಜನವರಿಯಲ್ಲಿ ಭಕ್ತರಿಗೆ ರಾಮಮಂದಿರ ಮುಕ್ತ, ಅಮಿತ್‌ ಶಾ ಮಹತ್ವದ ಘೋಷಣೆ

“ಹಿಂದುಗಳು ವಾಸಿಸಲು ಸುಸಜ್ಜಿತ ಮನೆ ಲಭ್ಯವಾಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕು. ಯುವಕರಿಗೆ ಉದ್ಯೋಗ, ರೈತರ ಬೆಳೆಗೆ ಬೆಂಬಲ ಬೆಲೆ ಸಿಗಬೇಕು. ಹಿಂದುಗಳು ಒಗ್ಗೂಡಿ ರಾಮಮಂದಿರ ನಿರ್ಮಾಣಕ್ಕೆ ಅಭಿಯಾನ ನಡೆಸಿದ್ದಾರೆ. ಪ್ರತಿಯೊಂದು ಗ್ರಾಮದಲ್ಲೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ರಾಮಮಂದಿರ ನಿರ್ಮಾಣವಾಗುತ್ತಿದೆ ನಿಜ. ಆದರೆ, ರಾಮರಾಜ್ಯದ ಕನಸು ನನಸಾಗಬೇಕು” ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version