Pravin Togadia: ರಾಮಮಂದಿರ ನಿರ್ಮಾಣ ಸರಿ, ಆದರೆ ರಾಮರಾಜ್ಯ ಎಲ್ಲಿದೆ? ಕೇಂದ್ರಕ್ಕೆ ಪ್ರವೀಣ್‌ ತೊಗಾಡಿಯಾ ಚಾಟಿ - Vistara News

ದೇಶ

Pravin Togadia: ರಾಮಮಂದಿರ ನಿರ್ಮಾಣ ಸರಿ, ಆದರೆ ರಾಮರಾಜ್ಯ ಎಲ್ಲಿದೆ? ಕೇಂದ್ರಕ್ಕೆ ಪ್ರವೀಣ್‌ ತೊಗಾಡಿಯಾ ಚಾಟಿ

Pravin Togadia: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದ್ದಾಗಲೇ ರಾಮಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ದೇಶದ ಹಿಂದು ಸಂತರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಖರ ಹಿಂದುತ್ವವಾದಿ ಪ್ರವೀಣ್‌ ತೊಗಾಡಿಯಾ ಅವರು ರಾಮಮಂದಿರ ಉಲ್ಲೇಖಿಸಿಯೇ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

VISTARANEWS.COM


on

Pravin Togadia
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಕೇಂದ್ರ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಹಿಂದು ಪರಿಷತ್‌ ಮುಖ್ಯಸ್ಥ, ಪ್ರಖರ ಹಿಂದುತ್ವವಾದಿ ಪ್ರವೀಣ್‌ ತೊಗಾಡಿಯಾ (Pravin Togadia) ಚಾಟಿ ಬೀಸಿದ್ದಾರೆ. “ಅಯೋಧ್ಯೆಯಲ್ಲಿ ರಾಮಮಂದಿರವೇನೋ ನಿರ್ಮಾಣವಾಗುತ್ತಿದೆ. ಆದರೆ, ದೇಶದಲ್ಲಿ ಎಲ್ಲಿಯೂ ರಾಮರಾಜ್ಯ ಕಾಣಿಸುತ್ತಿಲ್ಲ” ಎಂದು ಟೀಕಿಸಿದ್ದಾರೆ. ಪ್ರವೀಣ್‌ ತೊಗಾಡಿಯಾ ಅವರೇ ಕೇಂದ್ರ ಸರ್ಕಾರವನ್ನು ಟೀಕಿಸಿರುವುದು ಈಗ ಅಚ್ಚರಿ ಮೂಡಿಸಿದೆ.

ಅಮೇಠಿ ಜಿಲ್ಲೆಯ ಪುರಿ ರಾಮದಿನ್‌ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಆದರೆ, ರಾಮರಾಜ್ಯ ಇನ್ನೂ ನಿರ್ಮಾಣವಾಗಬೇಕಿದೆ. ದೇಶದ ಹಿಂದುಗಳು ಉತ್ತಮ ಸೌಕರ್ಯ, ಸೌಲಭ್ಯಗಳು ಪಡೆಯಬೇಕು. ಆಗಲೇ ರಾಮರಾಜ್ಯದ ಕನಸು ನನಸಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Ram Mandir | 2024ರ ಜನವರಿಯಲ್ಲಿ ಭಕ್ತರಿಗೆ ರಾಮಮಂದಿರ ಮುಕ್ತ, ಅಮಿತ್‌ ಶಾ ಮಹತ್ವದ ಘೋಷಣೆ

“ಹಿಂದುಗಳು ವಾಸಿಸಲು ಸುಸಜ್ಜಿತ ಮನೆ ಲಭ್ಯವಾಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕು. ಯುವಕರಿಗೆ ಉದ್ಯೋಗ, ರೈತರ ಬೆಳೆಗೆ ಬೆಂಬಲ ಬೆಲೆ ಸಿಗಬೇಕು. ಹಿಂದುಗಳು ಒಗ್ಗೂಡಿ ರಾಮಮಂದಿರ ನಿರ್ಮಾಣಕ್ಕೆ ಅಭಿಯಾನ ನಡೆಸಿದ್ದಾರೆ. ಪ್ರತಿಯೊಂದು ಗ್ರಾಮದಲ್ಲೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ರಾಮಮಂದಿರ ನಿರ್ಮಾಣವಾಗುತ್ತಿದೆ ನಿಜ. ಆದರೆ, ರಾಮರಾಜ್ಯದ ಕನಸು ನನಸಾಗಬೇಕು” ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

Lok Sabha Election 2024: ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿರುವಂತೆ ರಾಜಕೀಯ ನಾಯಕರ ಮಾತು ಹದ್ದು ಮೀರ ತೊಡಗಿದೆ. ಕೇರಳದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ಸಿಪಿಎಂ ಬೆಂಬಲಿತ ಸ್ವತಂತ್ರ ಶಾಸಕ ಪಿ.ವಿ.ಅನ್ವರ್‌ ಆಡಿರುವ ಲೇವಡಿಯ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ”ರಾಹುಲ್‌ ಗಾಂಧಿ ಅವರು ಗಾಂಧಿ ಎಂಬ ಸರ್‌ನೇಮ್‌ ಅನ್ನೂ ಬಳಸಲಾಗದ ನಾಲ್ಕನೇ ದರ್ಜೆಯ ವ್ಯಕ್ತಿ. ನೆಹರೂ ವಂಶದ ವ್ಯಕ್ತಿಗೆ ಈ ರೀತಿ ಮಾತನಾಡಲು ಸಾಧ್ಯವೇ? ಆ ವಿಚಾರದಲ್ಲಿ ನನಗೆ ಸಂಶಯವಿದೆʼʼ ಎಂದು ಅನ್ವರ್‌ ಹೇಳಿದ್ದಾರೆ. ಅವರ ಈ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

VISTARANEWS.COM


on

Lok Sabha Election 2024
Koo

ತಿರುವನಂತಪುರಂ: ಲೋಕಸಭಾ ಚುನಾವಣೆಯ (Lok Sabha Election 2024) ಕಾವು ಹೆಚ್ಚಾಗುತ್ತಿದ್ದಂತೆ ವೈಯಕ್ತಿಕ ಟೀಕೆಯೂ ಹದ್ದು ಮೀರುತ್ತಿದೆ. ಇದೀಗ ಕೇರಳದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸಿಪಿಎಂ ಬೆಂಬಲಿತ ಸ್ವತಂತ್ರ ಶಾಸಕ ಪಿ.ವಿ.ಅನ್ವರ್‌ (PV Anwar) ಆಡಿರುವ ಲೇವಡಿಯ ಮಾತು ಭಾರೀ ವಿವಾದ ಸೃಷ್ಟಿಸಿದೆ. ʼʼನೆಹರೂ ವಂಶಸ್ಥರಿಂದ ನಿರೀಕ್ಷಿಸುವ ಗುಣಮಟ್ಟವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಅವರ ಡಿಎನ್‌ಎಯನ್ನು ಪರೀಕ್ಷಿಸಬೇಕುʼʼ ಎಂದು ಪಿ.ವಿ.ಅನ್ವರ್‌ ಹೇಳಿದ್ದಾರೆ.

ಪಾಲಕ್ಕಾಡ್‌ನಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪಿ.ವಿ.ಅನ್ವರ್, ”ರಾಹುಲ್‌ ಗಾಂಧಿ ಅವರು ಗಾಂಧಿ ಎಂಬ ಸರ್‌ನೇಮ್‌ ಅನ್ನೂ ಬಳಸಲಾಗದ ನಾಲ್ಕನೇ ದರ್ಜೆಯ ವ್ಯಕ್ತಿ. ನೆಹರೂ ವಂಶದ ವ್ಯಕ್ತಿಗೆ ಈ ರೀತಿ ಮಾತನಾಡಲು ಸಾಧ್ಯವೇ? ಆ ವಿಚಾರದಲ್ಲಿ ನನಗೆ ಸಂಶಯವಿದೆʼʼ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ. “ನಾನು ರಾಹುಲ್ ಗಾಂಧಿ ಅವರ ಕ್ಷೇತ್ರವಾದ ವಯನಾಡ್‌ನ ಭಾಗವಾಗಿದ್ದೇನೆ. ನಾನು ಅವರನ್ನು ಗಾಂಧಿ ಎಂಬ ಉಪನಾಮದಿಂದ ಕರೆಯಲು ಸಾಧ್ಯವಿಲ್ಲ. ಅವರು ಗಾಂಧಿ ಉಪನಾಮದಿಂದ ಕರೆಯಲು ಅರ್ಹರಲ್ಲದ ನಾಗರಿಕನಾಗಿ ಮಾರ್ಪಟ್ಟಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಕಳೆದ ಎರಡು ದಿನಗಳಿಂದ ಭಾರತದ ಜನರು ಇದನ್ನು ಹೇಳುತ್ತಿದ್ದಾರೆʼʼ ಎಂದು ನಿಲಂಬೂರು ಕ್ಷೇತ್ರದ ಶಾಸಕ ಅನ್ವರ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ರಾಹುಲ್‌ ಗಾಂಧಿ ಮತನಾಡಿ, ʼʼಪಿಣರಾಯಿ ವಿಜಯನ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದರೂ, ಕೇಂದ್ರ ಏಜೆನ್ಸಿಗಳು ಅವರನ್ನು ಏಕೆ ವಿಚಾರಣೆ ನಡೆಸುತ್ತಿಲ್ಲ?ʼʼ ಎಂದು ಪ್ರಶ್ನಿಸಿದ್ದರು. ಇದರಿಂದ ಕೆರಳಿದ ಅನ್ವರ್ ಈ ರೀತಿ ವೈಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ಖಂಡನೆ

ಸದ್ಯ ಅನ್ವರ್‌ ಹೇಳಿಕೆ ಕೋಲಾಹಲ ಎಬ್ಬಿಸಿದೆ. ಅವರ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲವಾಗಿದ್ದು, ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಿಪಿಎಂ ಹಾಗೂ ಬೆಂಬಲಿತ ನಾಯಕರು ರಾಹುಲ್ ಗಾಂಧಿ ಅವರ ವಿರುದ್ಧ ವೈಯಕ್ತಿಕ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಜನರು ಉತ್ತರ ನೀಡಲಿದ್ದಾರೆ ಎಂದಿದೆ.

ರಾಜ್ಯ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಮಾತನಾಡಿ, ʼʼಅನ್ವರ್‌ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ. “ಪಿ.ವಿ.ಅನ್ವರ್ ಗೋಡ್ಸೆಯ ಹೊಸ ಅವತಾರ. ಗಾಂಧೀಜಿಯನ್ನು ಕೊಂದ ಗೋಡ್ಸೆಯ ಗುಂಡುಗಳಿಗಿಂತ ಅನ್ವರ್ ಅವರ ಮಾತುಗಳು ಮಾರಕವಾಗಿವೆ. ಅನ್ವರ್ ಅವರು ಜನಪ್ರತಿನಿಧಿಯೊಬ್ಬರು ಆಡಬಾರದ ಮಾತುಗಳನ್ನು ಆಡಿದ್ದಾರೆʼʼ ಎಂದು ಹೇಳಿದ್ದಾರೆ.

ʼʼರಾಹುಲ್ ಗಾಂಧಿಯನ್ನು ನಿರಂತರವಾಗಿ ಟೀಕಿಸುತ್ತಿರುವ ಪಿಣರಾಯಿ ವಿಜಯನ್ ಅವರು ಇದೀಗ ಪಿ.ವಿ.ಅನ್ವರ್ ಅವರನ್ನು ಕಾಂಗ್ರೆಸ್ ವಿರುದ್ಧ ಮಾತನಾಡುವಂತೆ ತಯಾರು ಮಾಡಿದ್ದಾರೆ. ಅನ್ವರ್ ಮುಖ್ಯಮಂತ್ರಿಯ ಆತ್ಮಹತ್ಯಾ ದಳವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹಸನ್ ಟೀಕಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

ಇತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಗಂಭೀರ ರಾಜಕಾರಣಿ ಅಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Continue Reading

Lok Sabha Election 2024

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Lok Sabha Election 2024: ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಆಸ್ತಿ ಮರು ಹಂಚಿಕೆ ಮಾಡುವ ಬಗ್ಗೆ ಪ್ರಸ್ತಾವಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿಕ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಆರೋಪಿಸಿದ್ದಾರೆ. ʼʼಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ ‘ಶರಿಯಾ ಕಾನೂನನ್ನು’ ಜಾರಿಗೆ ತರುವ ಮತ್ತು ಜನರ ಆಸ್ತಿಯನ್ನು ಮರುಹಂಚಿಕೆ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದೆʼʼ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿ ಈ ವಿಚಾರ ಪ್ರಸ್ತಾವಿಸಿದ್ದಾರೆ.

VISTARANEWS.COM


on

Lok Sabha Election 2024
Koo

ಲಕ್ನೋ: ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿನ ಸಂಪತ್ತು ಮರು ಹಂಚಿಕೆ ವಿಚಾರವನ್ನು ಪ್ರಸ್ತಾವಿಸಿದೆ ಎಂದು ಆರೋಪಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೈ ಪಡೆಯ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಸರದಿ. ಯೋಗಿ ಆದಿತ್ಯನಾಥ್ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ʼʼಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ ‘ಶರಿಯಾ ಕಾನೂನನ್ನು’ ಜಾರಿಗೆ ತರುವ ಮತ್ತು ಜನರ ಆಸ್ತಿಯನ್ನು ಮರುಹಂಚಿಕೆ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದೆʼʼ ಎಂದು ಹೇಳಿದ್ದಾರೆ (Lok Sabha Election 2024).

ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶಕ್ಕೆ ದ್ರೋಹ ಬಗೆದಿವೆ ಮತ್ತು ಮತ್ತೊಮ್ಮೆ ತಮ್ಮ ತಪ್ಪಾದ ಪ್ರಣಾಳಿಕೆಯೊಂದಿಗೆ ನಿಮ್ಮ ಬಳಿಗೆ ಬಂದಿವೆ. ನೀವು ಕಾಂಗ್ರೆಸ್ ಪ್ರಣಾಳಿಕೆಯನ್ನು ಗಮನಿಸಿದರೆ ಅದರಲ್ಲಿ ಅವರು ತಾವು ಸರ್ಕಾರ ರಚಿಸಿದರೆ, ಶರಿಯಾ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತಾರೆ. ನೀವು ಹೇಳಿ ಈ ದೇಶವನ್ನು ಡಾ.ಬಿ.ಆರ್‌.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಧಾರದಲ್ಲಿ ನಡೆಸಬೇಕೆ ಅಥವಾ ಶರಿಯತ್‌ನಿಂದ ನಡೆಸಬೇಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜನರ ಆಸ್ತಿಯ ಮರು ಹಂಚಿಕೆಯನ್ನು ಸೇರಿಸಿದೆ ಎಂದು ಆರೋಪಿಸಿದ್ದರು.

ಯೋಗಿ ಆದಿತ್ಯನಾಥ್ ಹೇಳಿದ್ದೇನು?

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ವ್ಯಕ್ತಿಗತ ಕಾನೂನು (Vyaktigat kanoon) ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದೆ. ಶರಿಯಾ ಕಾನೂನು ಜಾರಿ ಎನ್ನುವುದೇ ಇದರ ಅರ್ಥ. ಯಾಕೆಂದರೆ ಮೋದಿ ತ್ರಿವಳಿ ತಲಾಖ್‌ ಕಾನೂನನ್ನು ದೇಶದಲ್ಲಿ ನಿಷೇಧಿಸಿದ್ದಾರೆʼʼ ಎಂದು ಆದಿತ್ಯನಾಥ್‌ ಹೇಳಿದ್ದಾರೆ. ಮುಂದುವರಿದು, ʼʼಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಜನರ ಆಸ್ತಿಯನ್ನು ವಶಪಡಿಸಿಕೊಂಡು ಹಂಚುವ ಬಗ್ಗೆ ಪ್ರಸ್ತಾವಿಸಲಾಗಿದೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿಗಳು ನಿಮ್ಮ ಆಸ್ತಿಯನ್ನು ಕೊಳ್ಳೆ ಹೊಡೆಯಲು ಅನುಮತಿ ನೀಡುತ್ತೀರಾ? ಅವರ ಇಬ್ಬಗೆಯ ನೀತಿಯತ್ತ ಗಮನ ಹರಿಸಿ. ಅವರು ಒಂದು ಕಡೆ ನಿಮ್ಮ ಆಸ್ತಿಯ ಮೇಲೆ ಕಣ್ಣಿಡುತ್ತಾರೆ. ಇನ್ನೊಂದು ಕಡೆ ಮಾಫಿಯಾ ಮತ್ತು ಅಪರಾಧಿಗಳಿಗೆ ನೆರವು ನೀಡುತ್ತಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.

2006ರಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, “ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. ಹಾಗಾದರೆ ನಮ್ಮ ದಲಿತರು, ಹಿಂದುಳಿದ ವರ್ಗಗಳು, ಬಡವರು ಮತ್ತು ರೈತರು ಎಲ್ಲಿಗೆ ಹೋಗುತ್ತಾರೆ? ತಾಯಂದಿರು ಮತ್ತು ಸಹೋದರಿಯರು ಎಲ್ಲಿಗೆ ಹೋಗುತ್ತಾರೆ? ಯುವಕರು ಎಲ್ಲಿಗೆ ಹೋಗುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲ; ಮತ್ತೆ ಸಂಪತ್ತು ಹಂಚಿಕೆ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಭಯೋತ್ಪಾದನೆ ಕೊನೆಗೊಂಡಿದೆ ಎಂದು ಅವರು ಹೇಳಿದ್ದಾರೆ. “10 ವರ್ಷಗಳ ಹಿಂದೆ ದೇಶದಲ್ಲಿ ಭಯದ ವಾತಾವರಣವಿತ್ತು. 2014ರ ನಂತರ ಭಯೋತ್ಪಾದನೆಯನ್ನು ನಿಯಂತ್ರಿಸಲಾಯಿತು ಮತ್ತು 2019ರ ಹೊತ್ತಿಗೆ ಮೋದಿ ಭಯೋತ್ಪಾದನೆಯ ಮೂಲವನ್ನು ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದರು. ಇಂದು ಭಾರತದಲ್ಲಿ ಭಯೋತ್ಪಾದನೆ ನಾಶವಾಗಿದೆ” ಎಂದು ಅವರು ಹೇಳಿದ್ದಾರೆ. ಅಮ್ರೋಹಾದಲ್ಲಿ ಏಪ್ರಿಲ್ 26ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Public Sector Banks :ಈ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಎಲ್ಒಸಿಗಳ (ಸುಸ್ತಿದಾರರ ವಿರುದ್ಧ ಬ್ಯಾಂಕುಗಳು ಹೊರಡಿಸಿದ) ಮೇಲೆ ಬ್ಯೂರೋ ಆಫ್ ಇಮಿಗ್ರೇಷನ್ ಕಾರ್ಯನಿರ್ವಹಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

VISTARANEWS.COM


on

Public Sector Banks
Koo

ಮುಂಬೈ: ವಿದೇಶದಲ್ಲಿರುವ ಸುಸ್ತಿ ಸಾಲಗಾರರ ವಿರುದ್ಧ ಲುಕ್ ಔಟ್ ನೋಟಿಸ್​ (LOC) ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ (Public Sector Banks) ಕಾನೂನಿನಲ್ಲಿ ಅಧಿಕಾರವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಹೈಕೋರ್ಟ್​ ತೀರ್ಪಿನಿಂದಾಗಿ ಸಾಲ ಕಟ್ಟದೇ ವಿದೇಶಗಳಲ್ಲಿ ವಾಸವಿರುವವರಿಗೆ ನೀಡಲಾಗಿರುವ ಎಲ್ಲ ನೋಟಿಸ್​ಗಳು ರದ್ದಾಗಲಿವೆ.

ಸುಸ್ತಿ ಸಾಲಗಾರರ ವಿರುದ್ಧ ಲುಕ್​ಔಟ್​ ನೋಟಿಸ್​ ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳ ಅಧ್ಯಕ್ಷರಿಗೆ ಅಧಿಕಾರ ನೀಡುವಂಥ ಕೇಂದ್ರ ಸರ್ಕಾರ ಹೊರಡಿಸಿದ ಕಚೇರಿ ಜ್ಞಾಪಕ ಪತ್ರದ ಷರತ್ತು ಅಸಂವಿಧಾನಿಕ ಎಂದು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್ದಾರ್ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲ ಆದಿತ್ಯ ಠಕ್ಕರ್ ಅವರು ಹೈಕೋರ್ಟ್ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿದರು. ಆದರೆ ನ್ಯಾಯಪೀಠ ನಿರಾಕರಿಸಿತು.

ಈ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಎಲ್ಒಸಿಗಳ (ಸುಸ್ತಿದಾರರ ವಿರುದ್ಧ ಬ್ಯಾಂಕುಗಳು ಹೊರಡಿಸಿದ) ಮೇಲೆ ಬ್ಯೂರೋ ಆಫ್ ಇಮಿಗ್ರೇಷನ್ ಕಾರ್ಯನಿರ್ವಹಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಯಾವುದೇ ಸುಸ್ತಿದಾರರ ವಿರುದ್ಧ ನ್ಯಾಯಮಂಡಳಿ ಅಥವಾ ಕ್ರಿಮಿನಲ್ ನ್ಯಾಯಾಲಯವು ವಿದೇಶಕ್ಕೆ ಪ್ರಯಾಣಿಸದಂತೆ ನಿರ್ಬಂಧಿಸುವ ಆದೇಶಗಳ ಮೇಲೆ ತನ್ನ ತೀರ್ಪು ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : Diamond Smuggling : ನೂಡಲ್ಸ್​ ಪ್ಯಾaಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

ಕೇಂದ್ರವು ಹೊರಡಿಸಿದ ಕಚೇರಿ ಜ್ಞಾಪಕ ಪತ್ರವು ಸಂವಿಧಾನಕ್ಕೆ ವಿರುದ್ಧವಾಗಿಲ್ಲವಾದರೂ, ಎಲ್ಒಸಿ ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕಿನ ಅಧ್ಯಕ್ಷರಿಗೆ ಅಧಿಕಾರ ನೀಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ಕೇಂದ್ರದ ಕಚೇರಿ ಜ್ಞಾಪಕ ಪತ್ರವು 2018 ರಲ್ಲಿ ಮಾಡಿದ ತಿದ್ದುಪಡಿಯಲ್ಲಿ, “ಭಾರತದ ಆರ್ಥಿಕ ಹಿತದೃಷ್ಟಿಯಿಂದ” ಎಲ್ಒಸಿಗಳನ್ನು ನೀಡಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಅಧಿಕಾರ ನೀಡಿತ್ತು.

ಒಬ್ಬ ವ್ಯಕ್ತಿಯ ನಿರ್ಗಮನವು ದೇಶದ ಆರ್ಥಿಕ ಹಿತಾಸಕ್ತಿಗೆ ಹಾನಿಕಾರಕವಾಗಿದ್ದರೆ ಅವನು/ ಅವಳು ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸುತ್ತದೆ ಎಂದು ಹೇಳಿತ್ತು “ಭಾರತದ ಆರ್ಥಿಕ ಹಿತಾಸಕ್ತಿ” ಎಂಬ ಪದಗಳನ್ನು ಯಾವುದೇ ಬ್ಯಾಂಕಿನ “ಆರ್ಥಿಕ ಹಿತಾಸಕ್ತಿಗಳೊಂದಿಗೆ” ತುಲನೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

Continue Reading

ಪ್ರಮುಖ ಸುದ್ದಿ

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

Look between H and L : ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

VISTARANEWS.COM


on

ook between H and L
Koo

ಬೆಂಗಳೂರು: ಮೇಣದ ಅರಮನೆಗೆ ಬೆಂಕಿ ಹಿಡಿದಷ್ಟೇ ವೇಗವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್ ಗಳು ಸೃಷ್ಟಿಯಾಗುತ್ತವೆ. ವ್ಯಕ್ತಿಯೊಬ್ಬರು ಶೇರ್ ಮಾಡುವ ಯಾವುದೊ ಒಂದು ಕಾನ್ಸೆಪ್ಟ್​ ಬೆಳೆಬೆಳೆದು ವಿಶ್ವ ವ್ಯಾಪಿಯಾಗುತ್ತದೆ. ಆ ವಿಷಯಕ್ಕೆ ತಲೆ, ಕಾಲು ಮತ್ತು ಬಾಲಗಳೂ ಸೇರಿಕೊಳ್ಳುತ್ತವೆ. ಮುಂದೆ ಅದು ಎಲ್ಲರ ಮನಸ್ಸನ್ನೂ ಗೆಲ್ಲುವ ಸೋಶಿಯಲ್​ ಮೀಡಿಯಾ ಟ್ರೆಂಡ್ ಆಗಿ ಉಳಿಯುತ್ತದೆ. ಅಂತೆಯೇ ಮಂಗಳವಾರ (ಏಪ್ರಿಲ್ 23ರಂದು) ಸೋಶಿಯಲ್​ ಮೀಟಿಯಾ ವೇದಿಕೆಯಾಗಿರುವ ಎಕ್ಸ್​​ನಲ್ಲಿ ಎಚ್​​ ಮತ್ತು ಎಲ್ ಮಧ್ಯೆ ನೋಡಿ (Look between H and L) ಟ್ರೆಂಡ್​ ಕಿಡಿ ಹಚ್ಚಿತ್ತು. ಎಲ್ಲಿ ನೋಡಿದರೂ ಇದೇ ರೀತಿಯ ಪೋಸ್ಟ್​ಗಳು ಕಾಣಿಸುತ್ತಿದ್ದವು. ಆರಂಭದಲ್ಲಿ ಪೋಸ್ಟ್​​ ನೋಡಿ ಗಾಬರಿ ಬಿದ್ದಿದ್ದರು ಹಲವರು. ಅರ್ಥ ಮಾಡಿಕೊಂಡ ಬಳಿಕ ಅದು ದೊಡ್ಡ ವಿನೋದವಾಗಿ ಮಾರ್ಪಾಡಾಯಿತು.

ಸೋಶಿಯಲ್​ ಮೀಡಿಯಾಗಳಲ್ಲಿ ಆಗಾಗ್ಗೆ ಮೀಮ್ ಗಳು, ವೀಡಿಯೊಗಳು ಮತ್ತು ನೆಟ್ಟಿಗರು ಹಂಚಿಕೊಳ್ಳುವ ವಿಷಯಗಳು ಸಮೃದ್ಧವಾಗಿರುತ್ತವೆ. ಆದಾಗ್ಯೂ, ಈ ಕೆಲವು ಸಂಗತಿಗಳ ಅರ್ಥದ ಬಗ್ಗೆ ತಿಳಿದಿಲ್ಲದ ಬಹಳಷ್ಟು ಜನರಿಗೆ ಇದೇನು ಅನಿಸುವುದು ಸಹಜ. ಅಂತೆಯೇ “ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

ಏನಿದು Look between H and L?

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಕಿ ಪ್ಯಾಡ್​ನಲ್ಲಿ ಇಂಗ್ಲಿಷ್​ನ H ಮತ್ತು L ನಡುವೆ J ಮತ್ತು K ಇದೆ. ಹಾಗಾದರೆ ಜೆ.ಕೆ ಎಂದರೇನು? ಇಂಗ್ಲಿಷ್​ನಲ್ಲಿ Just Kidding ( ಕೇವಲ ತಮಾಷೆಗಾಗಿ) ಎಂಬ ಮಾತಿದೆ. ಅದನ್ನು ನೇರವಾಗಿ ಹೇಳುವ ಬದಲು Look between H and L ಟ್ರೆಂಡ್​ ಸೃಷ್ಟಿ ಮಾಡಲಾಗಿದೆ. ಅಂದ ಹಾಗೆ ಇದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ಮಲಯಾಳಂನಲ್ಲಿ ‘ಪ್ರೇಮಾಲು’ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಅದು ಈಗ ಒಟಿಟಿಯಲ್ಲೂ ಲಭ್ಯ. ಅದಲ್ಲಿ ಭಗ್ನ ಪ್ರೇಮಿ ಹಾಗೂ ಐಟಿ ಕಂಪನಿಯೊಂದರ ಪ್ರಾಜೆಕ್ಟ್​ ಮ್ಯಾನೇಜರ್​ ಆದಿ ಎಂಬ ಪಾತ್ರವನ್ನು Just Kidding ಅನ್ನು ಪದೇ ಪದೆ ಬಳಸುತ್ತಾನೆ. ಗಂಭೀರವಾದ ವಿಷಯವನ್ನು ಹೇಳಿ just kidding ಎಂದು ಹೇಳುತ್ತಿದ್ದಾನೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಇದೇ ವೇಳೆ Look Between T and O ಟ್ರೆಂಡ್​ ಕೂಡ ಆಗಿದೆ. ಇದು 2021ರಲ್ಲಿ ಆರಂಭಗೊಂಡಿತು. 4Chan ಎಂಬ ಚಿತ್ರ ಆಧಾರಿತ ವೆಬ್​​ ಸರಣಿಯದ್ದಾಗಿದೆ. ಕೀಬೋರ್ಡ್​​ನಲ್ಲಿ T ಮತ್ತು O ನಡುವಿನ Y, U ಮತ್ತು I ಅಕ್ಷರಗಳಿವೆ. ಇದು ಅನಿಮೆ ಸರಣಿಯ ಪಾತ್ರವಾದ Yui ಹೆಸರಾಗಿದೆ. ಇದು ತಮ್ಮ ಪ್ರೌಢ ಶಾಲೆಯ ಸಂಗೀತ ಕ್ಲಬ್ ಮೂಲಕ ಬ್ಯಾಂಡ್ ನುಡಿಸುವು ಹುಡುಗಿಯ ಕುರಿತದ್ದು.

ಬಹಳಷ್ಟು ಜನರು ಈ ಟ್ರೆಂಡ್​ ತಮ್ಮ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತಪಡಿಸಿದರು. ಕೆಲವರು ಅದರ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ ಇತರರು ಇದು “ಕಿರಿಕಿರಿ” ಎಂದು ಎಂದೂ ಕಾಮೆಂಟ್​ ಮಾಡಿದ್ದಾರೆ.

Continue Reading
Advertisement
Voters' Pledge
ಬೆಂಗಳೂರು11 mins ago

Voters Pledge: ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿಗೆ ಮತದಾನ ಪ್ರತಿಜ್ಞಾವಿಧಿ ಬೋಧನೆ

Lok Sabha Election 2024
Lok Sabha Election 202433 mins ago

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

DCM DK Shivakumar Election campaign for Bangalore Rural Lok Sabha Constituency Congress candidate DK Suresh In Ramanagara
ರಾಮನಗರ45 mins ago

Lok Sabha Election 2024: ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ: ಡಿ.ಕೆ. ಸುರೇಶ್

Priyanka Gandhi
ಕರ್ನಾಟಕ52 mins ago

Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Lok Sabha Election 2024
Lok Sabha Election 20241 hour ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ1 hour ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Public Sector Banks
ಪ್ರಮುಖ ಸುದ್ದಿ2 hours ago

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Union Minister Pralhad Joshi visit Sri Nuggikeri Anjaneya Swamy Temple in dharwad
ಕರ್ನಾಟಕ2 hours ago

Pralhad Joshi: ಸಚಿವ ಪ್ರಲ್ಹಾದ್‌ ಜೋಶಿಗೆ ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ; ತಾವರೆ ಹೂ ರೂಪದಲ್ಲಿ ಪ್ರಸಾದ!

Kanguva Budget
ಸಿನಿಮಾ2 hours ago

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

ook between H and L
ಪ್ರಮುಖ ಸುದ್ದಿ3 hours ago

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ19 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌