ಭೋಪಾಲ್: ನಾವು ಮಾತನಾಡುವಾಗ, ಬರೆಯುವಾಗ ಬಳಸುವ ಒಂದು ಪದವು ಎಷ್ಟು ಪರಿಣಾಮ ಬೀರುತ್ತದೆಯೋ, ಬಳಸಬೇಕಾದ ಜಾಗದಲ್ಲಿ ಇನ್ನೊಂದು ಪದ ಬಳಸದಿದ್ದರೂ ಅದು ಕೂಡ ಬೇರೊಂದು ಪರಿಣಾಮವನ್ನೇ ಬೀರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದ (Madhya Pradesh Cabinet) ನೂತನ ಸಚಿವರಾಗಿ ಬಿಜೆಪಿಯ ರಾಮ್‌ನಿವಾಸ್ ರಾವತ್ (Ramniwas Rawat) ಅವರು ಪ್ರಮಾಣವಚನ ಸ್ವೀಕರಿಸುವಾಗ ಒಂದು ಪದವನ್ನು ಬಳಸದ ಕಾರಣ 15 ನಿಮಿಷಗಳಲ್ಲಿಯೇ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮೋಹನ್ ಯಾದವ್ ಅವರು ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ಇದಾದ ಐದು ತಿಂಗಳ ಬಳಿಕ ಅವರು ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್‌ನಲ್ಲಿದ್ದ ರಾಮ್‌ನಿವಾಸ್ ರಾವತ್ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಸೋಮವಾರ (ಜುಲೈ 8) ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸುವಾಗ ಅವರು ಒಂದು ಪದವನ್ನು ಉಚ್ಚರಣೆ ಮಾಡದ ಕಾರಣ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
मैं रामनिवास रावत ईश्वर की शपथ लेता हूं कि…
— Ramniwas Rawat (@rawat_ramniwas) July 8, 2024
आज राजभवन भोपाल में आयोजित शपथ ग्रहण समारोह में मध्यप्रदेश सरकार के कैबिनेट मंत्री के रूप में पद एवं गोपनीयता की शपथ ली।@CMMadhyaPradesh @DrMohanYadav51 pic.twitter.com/FysjcTNiPj
ಅವರು ಬಳಸದ ಆ ಒಂದು ಪದ ಯಾವುದು?
ರಾಜಭವನದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ರಾಮ್‌ನಿವಾಸ್ ಅವರಿಗೆ ರಾಜ್ಯಪಾಲ ಮಂಗುಭಾಯಿ ಸಿ ಪಟೇಲ್ ಅವರು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವಾಗ ರಾಮ್‌ನಿವಾಸ್ ರಾವತ್ ಅವರು ರಾಜ್ಯ ಕೆ ಮಂತ್ರಿ ಎಂದು ಹೇಳುವ ಬದಲು ರಾಜ್ಯ ಮಂತ್ರಿ (ಸಹಾಯಕ ಸಚಿವ) ಎಂದು ಹೇಳಿದರು. ಸಹಾಯಕ ಸಚಿವ ಎಂಬುದಾಗಿ ಅವರು ಹೇಳುತ್ತಲೇ ಕಾರ್ಯಕ್ರಮದಲ್ಲಿ ಗೊಂದಲವಾಯಿತು. ಪತ್ರಕರ್ತರು ಕೂಡ ಈ ಕುರಿತು ನಾಯಕರ ಗಮನಕ್ಕೆ ತಂದರು.
ರಾಜ್ಯ ಕೆ ಮಂತ್ರಿ ಎಂಬುದಾಗಿ ಹೇಳುವ ಬದಲು ರಾಜ್ಯ ಮಂತ್ರಿ ಎಂದು ಹೇಳಿರುವುದು ಗಮನಕ್ಕೆ ಬಂದ 15 ನಿಮಿಷದಲ್ಲಿಯೇ ರಾಮ್‌ನಿವಾಸ್ ರಾವತ್ ಅವರು ಎರಡನೇ ಬಾರಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಂದೇ ಒಂದು ಪದವನ್ನು ಬಳಸದ ಕಾರಣ ರಾಜಭವನದಲ್ಲಿ ಇಷ್ಟೆಲ್ಲ ಗೊಂದಲ ಉಂಟಾಯಿತು. ರಾಮ್‌ನಿವಾಸ್ ರಾವತ್ ಅವರ ಸೇರ್ಪಡೆಯೊಂದಿಗೆ ಮಧ್ಯಪ್ರದೇಶ ಸಚಿವರ ಸಂಖ್ಯೆ 32ಕ್ಕೆ ಏರಿಕೆಯಾಯಿತು. Words
ಇದನ್ನೂ ಓದಿ: Hemant Soren: 5 ತಿಂಗಳ ಜೈಲುವಾಸದ ಬಳಿಕ ಮತ್ತೆ ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೊರೆನ್ ಪ್ರಮಾಣವಚನ!