ನವದೆಹಲಿ: ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್ ಚೇರ್ಮನ್ ರತನ್ ಟಾಟಾ (Ratan Tata) ಅವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವ ಆರ್ಡರ್ ಆಫ್ ಆಸ್ಟ್ರೇಲಿಯಾ(Order of Australia) ಪ್ರದಾನ ಮಾಡಲಾಯಿತು. ಭಾರತದಲ್ಲಿ ಆಸ್ಟ್ರೇಲಿಯಾದ ರಾಯಭಾರಿಯಾಗಿರುವ ಬ್ಯಾರಿ ಓ ಫಾರೆಲ್ (Barry O’ Farrell) ಅವರು ಆಸ್ಟ್ರೇಲಿಯಾ ಸರ್ಕಾರದ ಪರವಾಗಿ ಗೌರವವನ್ನು ಪ್ರದಾನ ಮಾಡಿದರು. ಈ ವಿಷಯವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಫೋಟೋಗಳನ್ನು ಷೇರ್ ಮಾಡಿದ್ದಾರೆ. ರತನ್ ಟಾಟಾ ಅವರು ವ್ಯಾಪಾರೋದ್ಯಮ, ಕೈಗಾರಿಕೆ ಮತ್ತು ಸಮಾಜ ಸೇವೆಯ ದೈತ್ಯ. ಅವರ ನೀಡಿದ ಕೊಡುಗೆಗಳು ಆಸ್ಟ್ರೇಲಿಯಾದ ಮೇಲೂ ಪ್ರಭಾವ ಬೀರಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ರತನ್ ಟಾಟಾ ಅವರು ವ್ಯಾಪಾರ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ದೈತ್ಯ ವ್ಯಕ್ತಿಯಾಗಿದ್ದಾರೆ. ಆದರೆ ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿಯೂ ಗಮನಾರ್ಹ ಪ್ರಭಾವ ಬೀರಿವೆ. ಆಸ್ಟ್ರೇಲಿಯಾ-ಭಾರತ ಸಂಬಂಧಕ್ಕೆ ರತನ್ ಟಾಟಾ ಅವರ ದೀರ್ಘಕಾಲದ ಬದ್ಧತೆಯನ್ನು ಗುರುತಿಸಿ ಅವರಿಗೆ ಆರ್ಡರ್ ಆಫ್ ಆಸ್ಟ್ರೇಲಿಯಾ (AO) ಗೌರವವನ್ನು ನೀಡಲು ಸಂತೋಷವಾಗಿದೆ ಎಂದು ಬ್ಯಾರಿ ಓ’ ಫಾರೆಲ್ ಅವರು ಟ್ವೀಟ್ ಮಾಡಿದ್ದಾರೆ.
ರತನ್ ಟಾಟಾ ಅವರು ಆಸ್ಟ್ರೇಲಿಯಾ-ಭಾರತ ದ್ವಿಪಕ್ಷೀಯ ಸಂಬಂಧ, ವಿಶೇಷವಾಗಿ ವ್ಯಾಪಾರ, ಹೂಡಿಕೆ ಮತ್ತು ಲೋಕೋಪಕಾರಕ್ಕೆ ಸಲ್ಲಿಸಿದ ಸೇವೆಗಾಗಿ ಆರ್ಡರ್ ಆಫ್ ಆಸ್ಟ್ರೇಲಿಯಾದ ಜನರಲ್ ಡಿವಿಷನ್‌ನಲ್ಲಿ ಗೌರವ ಅಧಿಕಾರಿಯಾಗಿದ್ದಾರೆ. ಟಾಟಾ ಪವರ್ ಸದರ್ನ್ ಒಡಿಶಾ ಡಿಸ್ಟ್ರಿಬ್ಯೂಷನ್ ಲಿ.(TPSODL) ಅಧಿಕಾರಿ ರಾಹುಲ್ ರಂಜನ್ ಅವರು, ರತನ್ ಟಾಟಾ ಅವರನ್ನು ಸನ್ಮಾನಿಸುತ್ತಿರುವ ಫೋಟೋಗಳನ್ನು ಲಿಂಕ್ಡ್‌ಇನ್‌ನಲ್ಲಿ ಷೇರ್ ಮಾಡಿದ್ದಾರೆ.