Site icon Vistara News

Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ

Kotak Mahindra Bank

RBI asks Kotak Bank to stop issuing fresh credit cards, adding new online customers

ಮುಂಬೈ: ನಿಯಮಗಳ ಪಾಲನೆಯ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ (Paytm Payments Bank) ಹಲವು ನಿರ್ಬಂಧ ವಿಧಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಈಗ ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ (Kotak Mahindra Bank) ಕೂಡ ಹಲವು ನಿರ್ಬಂಧ ವಿಧಿಸಿದೆ. ಅದರಲ್ಲೂ, ಹೊಸ ಗ್ರಾಹಕರಿಗೆ ನೂತನ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸುವುದು ಪ್ರಮುಖ ನಿರ್ಬಂಧವಾಗಿದೆ. ಇದರಿಂದ ಬ್ಯಾಂಕ್‌ಗೆ ಹೊಸ ಗ್ರಾಹಕರನ್ನು ಸೆಳೆಯಲು ಕಷ್ಟವಾಗಲಿದೆ ಎಂದು ತಿಳಿದುಬಂದಿದೆ.

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯ 35ಎ ಸೆಕ್ಷನ್‌ನ ಅಡಿಯಲ್ಲಿ ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ. ಆರ್‌ಬಿಐ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ ಎಂದು ತಿಳಿದುಬಂದಿದೆ. “ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ಗಳನ್ನು ನೀಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಬಾರದು. ತತ್‌ಕ್ಷಣದಿಂದಲೇ ನಿರ್ಬಂಧಗಳು ಜಾರಿಗೆ ಬರಲಿವೆ” ಎಂದು ಆರ್‌ಬಿಐ ಆದೇಶಿಸಿದೆ.

ಆರ್‌ಬಿಐ ನಿಷೇಧಕ್ಕೆ ಕಾರಣವೇನು?

ಕೊಟಕ್‌ ಮಹೀಂದ್ರಾ ಬ್ಯಾಂಕ್‌ ಗ್ರಾಹಕರು ಆನ್‌ಲೈನ್‌ ಮೂಲಕ ವಹಿವಾಟು ನಡೆಸಲು ಬ್ಯಾಂಕ್‌ ಸರಿಯಾದ ಸುರಕ್ಷತೆ ಒದಗಿಸಿಲ್ಲ. 2022 ಹಾಗೂ 2023ರಲ್ಲಿ ಐಟಿ ಪರಿಶೀಲನೆ ಕುರಿತು ಆರ್‌ಬಿಐ ಆತಂಕ ವ್ಯಕ್ತಪಡಿಸಿದರೂ ಸುರಕ್ಷತೆ ನೀಡುವಲ್ಲಿ ಕೊಟಕ್‌ ಮಹೀಂದ್ರಾ ಬ್ಯಾಂಕ್‌ ವಿಫಲವಾಗಿದೆ. ಬ್ಯಾಂಕ್‌ನ ಐಟಿ ಮೂಲ ಸೌಕರ್ಯ, ಐಟಿ ನಿರ್ವಹಣೆ, ಪ್ಯಾಚ್‌ ಮತ್ತು ಚೇಂಜ್‌ ಮ್ಯಾನೇಜ್‌ಮೆಂಟ್‌, ಬಳಕೆದಾರರ ಅನುಮತಿ ನಿರ್ವಹಣೆ, ವೆಂಡರ್‌ ರಿಸ್ಕ್‌ ಮ್ಯಾನೇಜ್‌ಮೆಂಟ್, ಡೇಟಾ ಸೆಕ್ಯುರಿಟಿ ಸೇರಿ ಹಲವು ಸುರಕ್ಷತೆಗಳನ್ನು ಒದಗಿಸುವಲ್ಲಿ ಬ್ಯಾಂಕ್‌ ವಿಫಲವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದೇ ಕಾರಣಕ್ಕಾಗಿ ನಿರ್ಬಂಧಗಳನ್ನು ವಿಧಿಸಿದೆ ಎಂದು ಮಾಹಿತಿ ನೀಡಿದೆ.

ಹಳೆಯ ಗ್ರಾಹಕರಿಗೆ ತೊಂದರೆ ಇದೆಯೇ?

ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸುವುದು, ಅವರಿಗೆ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಹಳೆಯ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಕೊಟಕ್‌ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು, ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕ್‌ ಸೌಲಭ್ಯ ಹೊಂದಿರುವವರು ಸೇವೆಗಳನ್ನು ಪಡೆಯಬಹುದಾಗಿದೆ. ಹಾಗಾಗಿ, ಹಳೆಯ ಗ್ರಾಹಕರಿಗೆ ಆರ್‌ಬಿಐ ಆದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Paytm Layoffs: ಪೇಟಿಎಂನಲ್ಲಿ ಉದ್ಯೋಗ ಕಡಿತದ ಭೀತಿ; ಎಷ್ಟು ಮಂದಿಗೆ ಗೇಟ್‌ಪಾಸ್‌?

Exit mobile version