ನವದೆಹಲಿ: ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಕರೂರ್ ವೈಶ್ಯ ಬ್ಯಾಂಕ್‌ಗೆ (Karur Vysya Bank) ಭಾರತೀಯ ರಿಸರ್ವ್ ಬ್ಯಾಂಕ್ (RBI) 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬ್ಯಾಂಕುಗಳಿಗೆ ವಂಚನೆ ಮಾಡಿದ ಪ್ರಕರಣಗಳ ಕುರಿತು ಒಂದು ವಾರದೊಳಗೆ ಕರೂರ್ ವೈಶ್ಯ ಬ್ಯಾಂಕ್ ವರದಿ ನೀಡಲು ವಿಫಲವಾಗಿದೆ ಎಂದು ಆರ್‌ಬಿಐನ ಸೆಲೆಕ್ಟ್ ಸ್ಕೋಪ್ ಇನ್ಸ್‌ಪೆಕ್ಷನ್ (SSI) ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಾಯಿಂಟ್ ಲೀಡರ್ಸ್ ಫೋರಂ (JLF)ನಿಂದ ದಂಡ ವಿಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
“ಆರ್‌ಬಿಐ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಇದಕ್ಕೂ ಮೊದಲು ಬ್ಯಾಂಕ್‌ಗೇಕೆ ದಂಡ ವಿಧಿಸಬಾರದು ಎಂಬುದಾಗಿ ಕರೂರ್ ವೈಶ್ಯ ಬ್ಯಾಂಕ್‌ಗೆ ಆರ್‌ಬಿಐ ನೋಟಿಸ್ ನೀಡಿತ್ತು. ಅದರಂತೆ, ಬ್ಯಾಂಕ್ ಆರ್‌ಬಿಐಗೆ ಪ್ರತಿಕ್ರಿಯೆ ನೀಡಿತ್ತು. ಆದರೆ, ಕರೂರ್ ವೈಶ್ಯ ಬ್ಯಾಂಕ್ ವರದಿ ಬಳಿಕ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 30 ಲಕ್ಷ ರೂಪಾಯಿ ದಂಡ ವಿಧಿಸಿತು” ಎಂದು ಕೇಂದ್ರೀಯ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
“ಕರೂರ್ ವೈಶ್ಯ ಬ್ಯಾಂಕ್ ವಂಚಕರ ಕುರಿತು ಮಾಹಿತಿ ನೀಡದ ಕಾರಣ 2022ರ ಫೆಬ್ರವರಿ 22ರಿಂದ ಮಾರ್ಚ್ 4ರ ಅವಧಿಯಲ್ಲಿ ಬ್ಯಾಂಕ್‌ನ ಸೆಲೆಕ್ಸ್ ಸ್ಕೋಪ್ ಇನ್ಸ್‌ಪೆಕ್ಷನ್ ತನಿಖೆ ನಡೆಸಿದೆ. ಇದಾದ ಬಳಿಕ 2016ರಲ್ಲಿ ಆರ್‌ಬಿಐ ಹೊರಡಿಸಿದ ನಿಬಂಧನೆಗಳ (ವಂಚನೆಗಳು-ಆಯ್ದ ವಾಣಿಜ್ಯ ಬ್ಯಾಂಕ್‌ಗಳಿಂದ ವಂಚನೆ ಪ್ರಕರಣಗಳ ವರ್ಗೀಕರಣ ಹಾಗೂ ವರದಿ ಸಲ್ಲಿಕೆ) ಅನುಸರಣೆಯಲ್ಲಿ ವಿಫಲವಾದ ಕಾರಣ ದಂಡ ವಿಧಿಸಲಾಗಿದೆ” ಎಂದು ಮಾಹಿತಿ ನೀಡಿದೆ.
ದೇಶದಲ್ಲಿ ವಿಜಯ್ ಮಲ್ಯ ಸೇರಿ ಹಲವು ಉದ್ಯಮಿಗಳು ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ, ಅದನ್ನು ಪಾವತಿಸದೆ ವಿದೇಶಕ್ಕೆ ಹಾರುತ್ತಿರುವ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿಬಂಧನೆಗಳನ್ನು ರೂಪಿಸಿದೆ. ಹೊಸ ನಿಬಂಧನೆಗಳ ಪ್ರಕಾರ, ಬ್ಯಾಂಕ್‌ಗಳು ನಿಯಮಿತವಾಗಿ ವಂಚಕರ ಕುರಿತು ಮಾಹಿತಿ ನೀಡಬೇಕಿದೆ. ವಂಚನೆ ತಡೆಯುವುದು ಹಾಗೂ ಬ್ಯಾಂಕ್‌ಗಳು ದಿವಾಳಿಯಾಗದಂತೆ ನೋಡಿಕೊಳ್ಳಲು ಇಂತಹ ನಿಯಮಗಳನ್ನು ರೂಪಿಸಿದೆ.
ಕಳೆದ ವರ್ಷ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕೋಟಕ್ ಮಹೀಂದ್ರ ಬ್ಯಾಂಕ್‌ಗೆ 1.05 ಕೋಟಿ ರೂ. ಹಾಗೂ ಇಂಡಸ್‌ಇಂಡ್ ಬ್ಯಾಂಕ್‌ಗೆ ಕೂಡ 1 ಕೋಟಿ ರೂ. ದಂಡ ವಿಧಿಸಿತ್ತು. ಆರ್‌ಬಿಐನ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿತ್ತು.. 2022ರ ಜೂನ್ 29ರಂದು ಹೊರಡಿಸಿದ ಆದೇಶದಲ್ಲಿ, ಬ್ಯಾಂಕಿಂಗ್ ನಿಯಮಗಳು ಮತ್ತು ಗ್ರಾಹಕರ ಹಿತರಕ್ಷಣೆಯ ಕ್ರಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿತ್ತು.
ಇದನ್ನೂ ಓದಿ: ಕೋಟಕ್ ಮಹೀಂದ್ರ ಬ್ಯಾಂಕ್‌ಗೆ 1.05 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ