Site icon Vistara News

RBI Monetary policy meeting: ಸಾಲಗಾರರಿಗೆ ಶುಭ ಸುದ್ದಿ, ರೆಪೋ ರೇಟ್‌ ಬದಲಾವಣೆ ಇಲ್ಲ!

RBI

ಮುಂಬೈ, ಮಹಾರಾಷ್ಟ್ರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)ದ ಹಣಕಾಸು ಸ್ಥಾಯಿ ಸಮಿತಿಯು(Monetary Policy Committee), ರೆಪೋ ದರವನ್ನು (Repo Rate) ಬದಲಾಯಿಸದಿರಲು ನಿರ್ಧಿರಸಿದೆ. ಸದ್ಯ ರೆಪೋ ರೇಟ್ ಶೇ.6.50ರಷ್ಟಿದೆ. ಬೆಳವಣಿಗೆಯನ್ನು ಬೆಂಬಲಿಸುವ ಸಂದರ್ಭದಲ್ಲಿ ಹಣದುಬ್ಬರವು ಗುರಿಯೊಂದಿಗೆ ಹಂತಹಂತವಾಗಿ ಹೊಂದಾಣಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವಸತಿ ಸೌಕರ್ಯಗಳ ಹಿಂತೆಗೆದುಕೊಳ್ಳುವುದರ ಮೇಲೆ ಕೇಂದ್ರೀಕರಿಸಲು ಸಮಿತಿಯ ಆರು ಸದಸ್ಯರ ಪೈಕಿ ಐದು ಸದಸ್ಯರು ಬಹುಮತದಿಂದ ನಿರ್ಧರಿಸಿದ್ದಾರೆಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Governor Shaktikanta Das) ಅವರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಏತನ್ಮಧ್ಯೆ, ಆರ್‌ಬಿಐ ತನ್ನ ಚಿಲ್ಲರೆ ಹಣದುಬ್ಬರವನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ಶೇ.5.2 ರಿಂದ ಶೇ.5.1 ಕ್ಕೆ ಇಳಿಸಿದೆ(inflation).

ಭಾರತದ ಜಿಡಿಪಿ ಬೆಳವಣಿಗೆಯು ಮೊದಲನೇ ತ್ರೈಮಾಸಿಕದಲ್ಲಿ 8%, ಎರಡನೇ ತ್ರೈಮಾಸಿಕದಲ್ಲಿ 6.5%, ಮೂರನೇ ತ್ರೈಮಾಸಿಕದಲ್ಲಿ 6% ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಗೆ 5.7% ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. 2023-24ನೇ ಹಣಕಾಸು ಸಾಲಿಗೆ ಭಾರತೀಯ ರಿಸರ್ವ್ ಬ್ಯಾಂಕ್, ದೇಶದ ಜಿಡಿಪಿ ಬೆಳವಣಿಗೆಯನ್ನು 6.5% ಕ್ಕೆ ನಿಗದಿಪಡಿಸಿದೆ.

ಜಾಗತಿಕ ಆರ್ಥಿಕ ಚಟುವಟಿಕೆಯ ವೇಗವು 2023ರಲ್ಲಿ ಕ್ಷೀಣಿಸುತ್ತದೆ. ಇದು ಮುಖ್ಯವಾಗಿ ಹೆಚ್ಚಿದ ಹಣದುಬ್ಬರ, ಬಿಗಿಯಾದ ಆರ್ಥಿಕ ಪರಿಸ್ಥಿತಿಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಪರಿಣಾಮದಿಂದ ಆಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : RBI MPC meet 2023: ರೆಪೋ ದರ 6.5%ಕ್ಕೆ ಏರಿಕೆ, ಮತ್ತಷ್ಟು ಏರಲಿದೆ ಸಾಲದ ಇಎಂಐ

ದೇಶದ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು 2022 ಮೇ ತಿಂಗಳಿಂದ ನಿರಂತರವಾಗಿ ಒಟ್ಟು 250 ಬೇಸಿಸ್ ಪಾಯಿಂಟ್‌ಗಳನ್ನು ಆರ್‌ಬಿಐ ಹೆಚ್ಚಿಸುತ್ತಾ ಬಂದಿತ್ತು. ಏಪ್ರಿಲ್‌ನಲ್ಲಿ ಆರ್‌ಬಿಐನ ಹಣಕಾಸು ಸ್ಥಾಯಿ ಸಮಿತಿಯು ರೆಪೊ ದರವನ್ನು 6.50 ಪ್ರತಿಶತದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿತು. ಈಗಲೂ ಅದೇ ನೀತಿಯನ್ನು ಆರ್‌ಬಿಐ ಮುಂದುವರಿಸಿದೆ.

ವಾಣಿಜ್ಯದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version