Site icon Vistara News

RBI Order: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ! ಗ್ರಾಹಕರಿಗಾಗುವ ತೊಂದರೆ ಏನು?

Paytm

Paytm Payments Bank fined Rs 5.49 crore for violating money laundering norms

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (Paytm Payments Bank Ltd) ಗ್ರಾಹಕ ಖಾತೆಗಳಲ್ಲಿ ಅಥವಾ ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳಂತಹ ಪ್ರಿಪೇಯ್ಡ್ ಉಪಕರಣಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವುದನ್ನು ಅಥವಾ ಸಾಲ ನೀಡಿಕೆ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ಅನುಮತಿಸುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ನಿರ್ಬಂಧಿಸಿದೆ. ಫೆಬ್ರವರಿ 29ರಿಂದ ಈ ನಿರ್ಬಂಧವು ಜಾರಿಯಾಗಲಿದೆ.

ಇಷ್ಟಾಗಿಯೂ ಗ್ರಾಹಕರು, ಗ್ರಾಹಕರು ತಮ್ಮ ಖಾತೆಗಳಿಂದ ಉಳಿತಾಯ ಮತ್ತು ಪ್ರಸ್ತುತ “ನಿರ್ಬಂಧವಿಲ್ಲದೆ (ಮತ್ತು) ಲಭ್ಯವಿರುವ” ಮಿತಿಯನ್ನು ಒಳಗೊಂಡಂತೆ ಬ್ಯಾಲೆನ್ಸ್ ಅನ್ನು ಬಳಸುವುದನ್ನು ಮುಂದುವರಿಸಬಹುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.‌ಗಳ ನೋಡೆಲ್ ಖ್ಯಾತೆಗಳನ್ನು ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಬ್ಯಾಂಕಿನಲ್ಲಿನ ನಿಯಮಗಳ ನಿರಂತರ ಉಲ್ಲಂಘನೆ ಮತ್ತು ನಿರಂತರ ಮೇಲ್ವಿಚಾರಣೆಯ ಕೊರತೆಯ ಬಗ್ಗೆ ಹೊರಗಿನ ಆಡಿಟ್‌ಗಳ ನಂತರ ಗುರುತಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಆದೇಶದಲ್ಲಿ ತಿಳಿಸಿದೆ. ಹಾಗೆಯೇ, ಈಗ ಆರ್‌ಬಿಐ ಆದೇಶವು ಪೇಟಿಎಂನ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ವಿಭಾಗಕ್ಕೆ ಯಾವುದೇ ತೊಂದರೆಯುಂಟು ಮಾಡುವುದಿಲ್ಲ. ಯುಪಿಐ ವ್ಯವಹಾರವು ಮುಂದುವರಿಯಲಿದೆ.

2022ರ ಮಾರ್ಚ್ ತಿಂಗಳಲ್ಲಿ ತಕ್ಷಣದಿಂದಲೇ ಹೊಸ ಗ್ರಾಹಕರನ್ನು ಸೆಳೆಯದಂತೆ ಪೇಮೆ ಪಿಪಿಬಿಎಲ್‌ಗೆ ನಿರ್ದೇಶಿಸಲಾಗುತ್ತದೆ. ಅಲ್ಲಿಂದ ಈ ಸಮಸ್ಯೆಗಳು ಶುರುವಾಗಿವೆ. ಮೂಲಭೂತವಾಗಿ ಆರ್‌ಬಿಐನ ಕ್ರಮವು ಪೇಟಿಎಂನ ಬ್ಯಾಂಕಿಂಗ್ ಕಾರ್ಯಾಚರಣೆಗಳ ವಿರುದ್ಧವಾಗಿದೆ. ಅಂದರೆ ಗ್ರಾಹಕರು ತಮ್ಮ ಖಾತೆಯನ್ನು ಬಾಹ್ಯ ಬ್ಯಾಂಕ್‌ಗೆ ಲಿಂಕ್ ಮಾಡುವವರೆಗೆ ಡಿಜಿಟಲ್ ಪಾವತಿ ಆಯ್ಕೆಯಾಗಿ ಪೇಟಿಎಂ ಬಳಸುವುದನ್ನು ಮುಂದುವರಿಸಬಹುದು.

ಡಿಸೆಂಬರ್‌ನಲ್ಲಿ ಒನ್‌97 ಕಮ್ಯುನಿಕೇಶನ್ ವೆಚ್ಚ ಕಡಿತವನ್ನು ಹೆಚ್ಚಿಸಲು ಕೆಲವು ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು ಎಐ ಅಥವಾ ಕೃತಕ ಬುದ್ಧಿಮತ್ತೆಯನ್ನು ಬಳಸಲು ಪ್ರಾರಂಭಿಸಿತು. ಪರಿಣಾಮವಾಗಿ ಕಂಪನಿಯಲ್ಲಿ ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಯಿತು.

ಈ ಸುದ್ದಿಯನ್ನೂ ಓದಿ: Paytm Layoff : ಪೇಟಿಎಂನಿಂದ 1000ಕ್ಕೂ ಹೆಚ್ಚು ಉದ್ಯೋಗಿಗಳ ವಜಾ

Exit mobile version